Thursday, July 4, 2024
Homeರಾಷ್ಟ್ರೀಯಚೆನ್ನೈನಲ್ಲಿ ರಾಜ್ಯಸಭಾ ಸಂಸದರೊಬ್ಬರ ಮಗಳಿಂದ ಪುಣೆ ಪೋರ್ಶೆ ಕಾರು ಮಾದರಿ ಅಪಘಾತ

ಚೆನ್ನೈನಲ್ಲಿ ರಾಜ್ಯಸಭಾ ಸಂಸದರೊಬ್ಬರ ಮಗಳಿಂದ ಪುಣೆ ಪೋರ್ಶೆ ಕಾರು ಮಾದರಿ ಅಪಘಾತ

ಚೆನ್ನೈ,ಜೂ.19- ಕಳೆದ ತಿಂಗಳು ದೇಶದ್ಯಾಂತ ಭಾರೀ ವಿವಾದ ಸೃಷ್ಟಿಸಿದ್ದ ಪುಣೆ ಪೋರ್ಶೆ ಕಾರು ಅಪಘಾತ ಘಟನೆ ಸಂಭವಿಸಿ ಒಂದು ತಿಂಗಳಿಗೂ ಮುನ್ನವೇ ಹೈ ಪ್ರೊಫೈಲ್‌ ವ್ಯಕ್ತಿ ಭಾಗಿಯಾಗಿರುವ ಮತ್ತೊಂದು ಹಿಟ್‌ ಆಂಡ್‌ ರನ್‌ ಪ್ರಕರಣ ವರದಿಯಾಗಿದೆ.

ಚೆನ್ನೈನಲ್ಲಿ ರಸ್ತೆ ಬದಿಯ ಕಲ್ಲುಹಾಸಿನ ಮಾರ್ಗದಲ್ಲಿ ಮಲಗಿದ್ದ ವ್‌ಯಕ್ತಿಯೊಬ್ಬರ ಮೇಲೆ ರಾಜ್ಯಸಭಾ ಸಂಸದರೊಬ್ಬರ ಮಗಳು ಬಿಎಂಡಬ್ಲ್ಯೂ ಕಾರು ಹರಿಸಿದ ಘಟನೆ ನಡೆದಿದೆ. ಗಂಭೀರವಾಗಿ ಗಾಯಗೊಂಡ ವ್‌ಯಕ್ತಿ ಮೃತಪಟ್ಟಿದ್ದರೆ, ಅಪಘಾತದಲ್ಲಿ ಆತನ ಸಾವಿಗೆ ಕಾರಣಳಾದ ಮಹಿಳೆಗೆ ಜಾಮೀನು ದೊರಕಿದೆ.

ವೈಎಸ್‌‍ಆರ್‌ ಕಾಂಗ್ರೆಸ್‌‍ ಪಕ್ಷದ ರಾಜ್ಯಸಭಾ ಸಂಸದ ಬೀಡ ಮಸ್ತಾನ್‌ ರಾವ್‌ ಅವರ ಮಗಳು ಮಾಧುರಿ, ರಾತ್ರಿ ತನ್ನ ಸ್ನೇಹಿತೆ ಜತೆಗೆ ತಮಿಳುನಾಡಿನಲ್ಲಿ ಕಾರು ಚಲಾಯಿಸುತ್ತಿದ್ದಳು. ಚೆನ್ನೈನ ಬೇಸಂತ್‌ ನಗರದಲ್ಲಿ ಪಾದಚಾರಿ ಮಾರ್ಗದಲ್ಲಿ ಕುಡಿದು ಅಮಲಿನಲ್ಲಿ ಮಲಗಿದ್ದ 24 ವರ್ಷದ ಸೂರ್ಯ ಎಂಬಾತನ ಮೇಲೆ ಕಾರು ಹರಿಸಿದ್ದಾಳೆ ಎಂದು ಆರೋಪಿಸಲಾಗಿದೆ.

ಸೂರ್ಯ ವೃತ್ತಿಯಿಂದ ಪೇಂಟರ್‌ ಆಗಿದ್ದ. ಅಪಘಾತ ಸಂಭವಿಸಿದ ಕೂಡಲೇ ಮಾಧುರಿ ಸ್ಥಳದಿಂದ ಪರಾರಿಯಾಗಿದ್ದಾಳೆ. ಕಾರಿನಿಂದ ಇಳಿದ ಆಕೆಯ ಸ್ನೇಹಿತೆ, ಅಪಘಾತ ನಡೆದಾಗ ಸ್ಥಳದಲ್ಲಿ ಜಮಾಯಿಸಿದ ಜನರ ಜತೆ ವಾಗ್ವಾದ ನಡೆಸಿದ್ದಾಳೆ. ಆಕೆ ಕೂಡ ಕೆಲವು ಸಮಯದಿಂದ ಅಲ್ಲಿಂದ ನಿರ್ಗಮಿಸಿದ್ದಾಳೆ. ಜನರ ಗುಂಪಿನಲ್ಲಿದ್ದ ಕೆಲವರು ಸೂರ್ಯನನ್ನು ಆಸ್ಪತ್ರೆಯೊಂದಕ್ಕೆ ಸಾಗಿಸಿದ್ದಾರೆ. ಆದರೆ ತೀವ್ರ ಗಾಯಗೊಂಡಿದ್ದ ಆತ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಂಧ್ರಪ್ರದೇಶದ ವೈಎಸ್‌‍ಆರ್‌ಸಿಪಿ ಸಂಸದ ಬೀಡಾ ಮಸ್ತಾನ್‌ ರಾವ್‌ ಅವರ ಪುತ್ರಿ ಮಾಧುರಿ ತಮ್ಮ ಸ್ನೇಹಿತರೊಟ್ಟಿಗೆ ಬಿಎಂಡಬ್ಲ್ಯೂ ಕಾರಿನಲ್ಲಿ ತೆರಳುತ್ತಿದ್ದಾಗ ಫುಟ್‌ಪಾತ್‌ನಲ್ಲಿ ಮಲಗಿದ್ದ ವ್‌ಯಕ್ತಿಯ ಮೇಲೆ ಕಾರು ಹತ್ತಿಸಿದ್ದಾರೆ, ಈ ವೇಳೆ ಕುಡಿದ ಮತ್ತಿನಲ್ಲಿದ್ದರು ಎಂದು ಮೂಲಗಳು ತಿಳಿಸಿವೆ.ಕುಡಿದ ಮತ್ತಿನಲ್ಲಿ ಕಾರಿನಲ್ಲಿ ತೆರಳುತ್ತಿದ್ದಾಗ ಚೆನ್ನೈನ ಬೆಸೆಂಟ್‌ ನಗರದಲ್ಲಿ ಪಾದಚಾರಿ ಮಾರ್ಗದ ಮೇಲೆ ಮಲಗಿದ್ದ 24 ವರ್ಷದ ಪೇಂಟರ್‌ ಸೂರ್ಯ ಎಂಬಾತನ ಮೇಲೆ ಕಾರು ಹರಿಸಿದ್ದಾರೆ. ನಂತರ ಅಲ್ಲಿಂದ ಎಸ್ಕೇಪ್‌ ಆಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಸೂರ್ಯ 8 ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ. ಘಟನೆ ನಂತರ ಸ್ಥಳೀಯರು ಜೆ-5 ಶಾಸ್ತ್ರಿನಗರ ಪೊಲೀಸ್‌‍ ಠಾಣೆಗೆ ಮುತ್ತಿಗೆ ಹಾಕಿ, ಕ್ರಮಕ್ಕೆ ಒತ್ತಾಯಿಸಿದ್ದರು. ಬಳಿಕ ಪ್ರಕರಣ ದಾಖಲಿಸಿಕೊಂಡ ಪೊಲೀಶರು ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ, ಅಪಘಾತ ಮಾಡಿದ ಬಿಎಂಡಬ್ಲ್ಯೂ ಕಾರು ರಾಜ್ಯಸಭಾ ಸಂಸದ ಬೀಡಾ ಮಸ್ತಾನ್‌ರಾವ್‌ ಅವರಿಗೆ ಸೇರಿದ್ದು, ಈ ಕಾರು ಪುದುಚೇರಿಯಲ್ಲಿ ನೋಂದಣಿಯಾಗಿದೆ ಎಂಬುದು ಗೊತ್ತಾಗಿದೆ.

ನಂತರ ಅಪಘಾತ ಎಸಗಿದ ಮಹಿಳೆ ಮಾಧುರಿಯನ್ನು ಪೊಲೀಸರು ಬಂಧಿಸಿದ್ದರು, ಆದರೆ ಪೊಲೀಸ್‌‍ ಠಾಣೆಯಲ್ಲಿಯೇ ಜಾಮೀನು ನೀಡಲಾಯಿತು. ಆರೋಪಿಗೆ ಠಾಣೆಯಲ್ಲಿಯೇ ಜಾಮೀನು ಸಿಸಿಟಿವಿ ಕ್ಯಾಮೆರಾದ ವಿಡಿಯೋಗಳನ್ನು ಪರಿಶೀಲಿಸಿದ ಪೊಲೀಸರು, ಬಿಎಂಆರ್‌ (ಬೀಡ ಮಸ್ತಾನ್‌ ರಾವ್‌) ಸಮೂಹಕ್ಕೆ ಸೇರಿದ ಹಾಗೂ ಪುದುಚೆರಿಯ ನೋಂದಣಿ ಹೊಂದಿರುವ ಬಿಎಂಡಬ್ಲ್ಯೂ ಕಾರು ಅಪಘಾತ ನಡೆಸಿರುವುದು ಕಾಣಿಸಿದೆ.

ಮಾಧುರಿಯನ್ನು ಬಂಧಿಸಿದರೂ, ಪೊಲೀಸ್‌‍ ಠಾಣೆಯಲ್ಲಿಯೇ ಜಾಮೀನು ಮಂಜೂರಾಗಿದೆ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಆಕೆ ಮದ್ಯಪಾನ ಮಾಡಿರಲಿಲ್ಲ ಎನ್ನುವುದು ಖಚಿತವಾದ ಬಳಿಕ ಜಾಮೀನು ನೀಡಲಾಗಿದೆ. ಆಕೆ ವಿರುದ್ಧ ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾದ ಪ್ರಕರಣ ದಾಖಲಿಸಲಾಗಿದೆ.

ಈ ಪ್ರಕರಣ ಏನು?:
ವೇಗವಾಗಿ ಬಂದ ಬಿಎಂಡಬ್ಲ್ಯೂ ಕಾರು ಫುಟ್‌ಪಾತ್‌ನಲ್ಲಿ ಮಲಗಿದ್ದ ವ್ಯಕ್ತಿಯ ಮೇಲೆ ಹರಿದಿತ್ತು. ಇದರಿಂದಾಗಿ ಆತ ಸಾವನ್ನಪ್ಪಿದ್ದಾರೆ. ಘಟನೆಯ ನಂತರ ಮಾಧುರಿ ಸ್ಥಳದಿಂದ ಓಡಿಹೋಗಿದ್ದಾರೆ. ಆದರೆ ಅವರ ಸ್ನೇಹಿತರೊಬ್ಬರು ಕಾರಿನಿಂದ ಇಳಿದು ಅಪಘಾತದ ನಂತರ ಜಮಾಯಿಶಿ ನೀಡಲು ಮುಂದಾಗಿದ್ದರು. ಬಳಿಕ ಆತನೂ ಅಲ್ಲಿಂದ ಹೊರಟು ಹೋದ. ಗುಂಪಿನಲ್ಲಿದ್ದ ಕೆಲವರು ಸೂರ್ಯ ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ ಅವರು ಗಂಭೀರವಾಗಿ ಗಾಯಗೊಂಡಿದ್ದರಿಂದ ಸಾವನಪ್ಪಿದರು ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

Latest News