ಲಕ್ನೋ,ಜ.5- ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಜ.22ರ ವರೆಗೆ ಸರ್ಕಾರಿ ಬಸ್‍ಗಳಲ್ಲಿ ರಾಮ ಭಜನೆಗಳನ್ನು ಪ್ರಸಾರ ಮಾಡಲು ಸೂಚಿಸಲಾಗಿದೆ. ಉತ್ತರ ಪ್ರದೇಶದ ಸಾರಿಗೆ ಇಲಾಖೆಯು ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಯುಪಿಎಸ್‍ಆರ್ಟಿಸಿ) ಬಸ್‍ಗಳಲ್ಲಿ ಜನವರಿ 22ರವರೆಗೆ ರಾಮ ಭಜನೆ ಪ್ರಸಾರ ಮಾಡಲು ಸೂಚನೆ ನೀಡಿದೆ.
ಈ ಸಂಬಂಧ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಯೋಧ್ಯೆಯಲ್ಲಿನ ಮಹಾಮಸ್ತಕಾಭಿಷೇಕ ಸಮಾರಂಭದ ಬಗ್ಗೆ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ್ದು, ಜನವರಿ 14 ರಿಂದ ಅಯೋಧ್ಯೆಯ ದೇವಾಲಯಗಳಲ್ಲಿ ಭಜನೆ, ರಾಮಾಯಣ ಮತ್ತು ರಾಮಚರಿತಮಾನಗಳ ಪಠಣ ಮತ್ತು ಸುಂದರಕಾಂಡದಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ದೇಶನ ನೀಡಿದ್ದಾರೆ.
ಜನವರಿ 22ಕ್ಕಾಗಿ ಸಾರಿಗೆ ಇಲಾಖೆ ಸಿದ್ಧಪಡಿಸಿರುವ ಕ್ರಿಯಾ ಯೋಜನೆಯ ಪ್ರಕಾರ, ಎಲ್ಲಾ ಪ್ರಯಾಣಿಕ ವಾಹನಗಳು ಮತ್ತು ಬಸ್ ನಿಲ್ದಾಣಗಳಲ್ಲಿ ಶುಚಿತ್ವ ಇರಬೇಕು. ಪ್ರಯಾಣಿಕರಲ್ಲಿ ಭಕ್ತಿ ಭಾವ ಮೂಡಿಸಲು ಬಸ್‍ಗಳಲ್ಲಿ ರಾಮ ಭಜನೆಗಳನ್ನು ಪ್ರಸಾರ ಮಾಡಬೇಕು.
ಅಮೃತ್‍ಸರದಲ್ಲಿ ಪತ್ತೆಯಾಯ್ತು ಡ್ರಗ್ಸ್ ದಂಧೆ
ಬಸ್ ಚಾಲಕರಿಂದ ಸುರಕ್ಷಿತ ಚಾಲನೆ, ಸಂಚಾರ ನಿಯಮಗಳ ಅನುಸರಣೆ, ಪ್ರಯಾಣಿಕರೊಂದಿಗೆ ಸರಿಯಾದ ನಡವಳಿಕೆ, ಚಾಲಕರು ಕಡ್ಡಾಯವಾಗಿ ಸಮವಸ್ತ್ರ ಧರಿಸುವುದು, ಶುಚಿತ್ವ ಕಾಪಾಡುವುದು, ನಿಗದಿತ ದರಕ್ಕಿಂತ ಹೆಚ್ಚಿನ ಶುಲ್ಕ ವಿಧಿಸದೇ ಇರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ.
ಲಕ್ನೋ ಮತ್ತು ಅಯೋಧ್ಯೆ, ಗೋರಖ್ಪುರ ಮತ್ತು ಅಯೋಧ್ಯೆ, ಸುಲ್ತಾನ್ಪುರ ಮತ್ತು ಅಯೋಧ್ಯೆ ನಡುವೆ ಪ್ರಯಾಣಿಸುವ ಪ್ರವಾಸಿಗರಿಗೆ ಸಹಾಯ ಮಾಡಲು ಸಾರಿಗೆ ಇಲಾಖೆಯು ಎಲ್ಲಾ ಟೋಲ್ ಪ್ಲಾಜಾಗಳಲ್ಲಿ ಸಹಾಯ ಕೇಂದ್ರಗಳನ್ನು ಸ್ಥಾಪಿಸಿದೆ.