ನವದೆಹಲಿ,ಏ.6- ರಾಮನವಮಿಯಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರಿಗೆ ಶುಭ ಕೋರಿದ್ದಾರೆ ಮತ್ತು ಭಗವಾನ್ ರಾಮನ ಆಶೀರ್ವಾದವು ಯಾವಾಗಲೂ ನಿಮ ಮೇಲೆ ಇರಲಿ ಮತ್ತು ನಿಮ್ಮ ಎಲ್ಲಾ ಪ್ರಯತ್ನಗಳಲ್ಲಿ ಮಾರ್ಗದರ್ಶನ ನೀಡಲಿ ಎಂದು ಹಾರೈಸಿದ್ದಾರೆ. ಶ್ರೀಲಂಕಾದಿಂದ ಇಂದು ತ. ನಾಡಿನ ರಾಮೇಶ್ವರಂಗೆ ಆಗಮಿಸಲಿರುವ ಪ್ರಧಾನಿ ಮೋದಿ, ರಾಮನಾಥಸ್ವಾಮಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ.
ಎಲ್ಲರಿಗೂ ರಾಮನವಮಿಯ ಶುಭಾಶಯಗಳು! ಪ್ರಭು ಶ್ರೀ ರಾಮನ ಆಶೀರ್ವಾದ ಯಾವಾಗಲೂ ನಮ್ಮ ಮೇಲಿರಲಿ ಮತ್ತು ನಮ್ಮ ಎಲ್ಲಾ ಪ್ರಯತ್ನಗಳಿಗೆ ಮಾರ್ಗದರ್ಶನ ನೀಡಲಿ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.ಇಂದು ನಂತರ ರಾಮೇಶ್ವರಂನಲ್ಲಿರಲು ಎದುರು ನೋಡುತ್ತಿದ್ದೇನೆ! ಎಂದು ಅವರು ತಿಳಿಸಿದ್ದಾರೆ.
ರಾಮೇಶ್ವರಂನಲ್ಲಿ ಇಂದು ಮೋದಿ ಅವರು ಭಾರತದ ಮೊದಲ ಲಂಬ ಲಿಫ್‌್ಟ ಸಮುದ್ರ ಸೇತುವೆಯಾದ ಹೊಸ ಪಂಬನ್ ರೈಲು ಸೇತುವೆಯನ್ನು ಉದ್ಘಾಟಿಸಿದರು ಮತ್ತು ರಸ್ತೆ ಸೇತುವೆಯಿಂದ ರೈಲು ಮತ್ತು ಹಡಗಿಗೆ ಹಸಿರು ನಿಶಾನೆ ತೋರಿಸಿದರು ಮತ್ತು ಸೇತುವೆಯ ಕಾರ್ಯಾಚರಣೆಯನ್ನು ವೀಕ್ಷಿಸಿದರು.
ನಂತರ ಅವರು ರಾಮೇಶ್ವರಂನ ರಾಮನಾಥಸ್ವಾಮಿ ದೇವಸ್ಥಾನದಲ್ಲಿ ದರ್ಶನ ಮತ್ತು ಪೂಜೆ ಸಲ್ಲಿಸಿದ ನಂತ ರಾಮೇಶ್ವರಂನಲ್ಲಿ ಅವರು 8,300 ಕೋಟಿ ರೂ.ಗೂ ಹೆಚ್ಚು ಮೌಲ್ಯದ ವಿವಿಧ ರೈಲು ಮತ್ತು ರಸ್ತೆ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.