Monday, March 31, 2025
Homeರಾಷ್ಟ್ರೀಯ | Nationalಕೋಮುಸೌಹಾರ್ಧತೆಗೆ ಸಾಕ್ಷಿಯಾಗಲಿದೆ ರಾಮಮಂದಿರ : ಅದಾನಿ

ಕೋಮುಸೌಹಾರ್ಧತೆಗೆ ಸಾಕ್ಷಿಯಾಗಲಿದೆ ರಾಮಮಂದಿರ : ಅದಾನಿ

ನವದೆಹಲಿ,ಜ.22- ಅಯೋಧ್ಯೆಯ ರಾಮ ಮಂದಿರ ದೇಶದಲ್ಲಿ ಕೋಮು ಸೌಹಾರ್ಧತೆಗೆ ಸಾಕ್ಷಿಯಾಗಲಿದೆ ಎಂದು ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಹೇಳಿದ್ದಾರೆ. ಈ ಮಂಗಳಕರ ದಿನದಂದು ಅಯೋಧ್ಯೆ ಮಂದಿರದ ಬಾಗಿಲು ತೆರೆದಂತೆ, ಇದು ಜ್ಞಾನೋದಯ ಮತ್ತು ಶಾಂತಿಯ ಹೆಬ್ಬಾಗಿಲಾಗಲಿ, ಭಾರತದ ಆಧ್ಯಾತ್ಮಿಕ ಮತ್ತು ಸಾಂಸ್ಕøತಿಕ ಸಾಮರಸ್ಯದ ಕಾಲಾತೀತ ಎಳೆಗಳೊಂದಿಗೆ ಸಮುದಾಯಗಳನ್ನು ಬಂಸಲಿ ಎಂದು ಅವರು ಎಕ್ಸ್ ಮಾಡಿದ್ದಾರೆ.

ಅದೇ ರೀತಿ ಮರ್ಯಾದಾ ಪುರುಷೋತ್ತಮ ರಾಮ ಧರ್ಮವನ್ನು ಮೀರಿದ ವ್ಯಕ್ತಿ ಎಂದು ಖ್ಯಾತ ವಾಣಿಜ್ಯೋದ್ಯಮಿ ಆನಂದ್ ಮಹೀಂದ್ರಾ ಅಭಿಪ್ರಾಯಪಟ್ಟಿದ್ದಾರೆ.ರಾಮ ಧರ್ಮವನ್ನು ಮೀರಿದ ವ್ಯಕ್ತಿ. ಒಬ್ಬರ ನಂಬಿಕೆ ಏನೇ ಇರಲಿ, ಗೌರವದಿಂದ ಮತ್ತು ಬಲವಾದ ಮೌಲ್ಯಗಳೊಂದಿಗೆ ಬದುಕಲು ಸಮರ್ಪಿತವಾಗಿರುವ ಜೀವಿಗಳ ಪರಿಕಲ್ಪನೆಗೆ ನಾವೆಲ್ಲರೂ ಆಕರ್ಷಿತರಾಗಿದ್ದೇವೆ ಎಂದು ಅವರು ಎಕ್ಸ್ ಮಾಡಿದ್ದಾರೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (22-01-2024)

RELATED ARTICLES

Latest News