ವಾಷಿಂಗ್ಟನ್.ವಿ.11- ಮುಂಬೈನ ತಾಜ್ ಹೋಟೆಲ್ ಮೇಲೆ 2008ರಲ್ಲಿ ನಡೆದ ಉಗ್ರ ದಾಳಿಯ ಮಾಸ್ಟರ್ ಮೈಂಡ್ ತಹವೂರ್ ರಾಣಾನನ್ನು ಭಾರತಕ್ಕೆ ಹಸ್ತಾಂತರ ಮಾಡುವ ಮೊದಲು ಸರಪಳಿಯಲ್ಲಿ ಬಂಧಿಸಿ, ಸೇನಾ ವಾಯುನೆಲೆಯಂತೆ ಕಾಣುವ ಸ್ಥಳದಲ್ಲಿ ಅಮೆರಿಕದ ಮಾರ್ಷಲ್‌ಗಳು ಕರೆದೊಯ್ಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಅಮೆರಿಕದ ಮಾರ್ಷಲ್‌ಗಳು ಎನ್‌ಐಎಗೆ ಹಸ್ತಾಂತರಿಸುವ ಮುನ್ನ ಆ ಸಂದರ್ಭದಲ್ಲಿನ ಫೋಟೊಗಳು ವೈರಲ್ಲಾಗಿವೆ. ಆತನನ್ನು ಸರಪಳಿಗಳಿಂದ ಕಟ್ಟಿಹಾಕಲಾಗಿತ್ತು. ಪಾಲಂ ವಿಮಾನ ನಿಲ್ದಾಣದಿಂದ ಬಂದ ದೃಶ್ಯಗಳಲ್ಲಿ ರಾಣಾ ಬಿಳಿ ಕೂದಲು ಮತ್ತು ಸಡಿಲವಾದ ಗಡ್ಡದೊಂದಿಗೆ ಕಂದು ಬಣ್ಣದ ಮೇಲುಡುಪುಗಳನ್ನು ಧರಿಸಿರುವುದು ಕಂಡುಬಂದಿದೆ. ಈ ಹಸ್ತಾಂತರ ಪ್ರಕ್ರಿಯೆಯ ಫೋಟೋಗಳನ್ನು ಅಮೆರಿಕದ ನ್ಯಾಯಾಂಗ ಇಲಾಖೆ ಇದೀಗ ಬಿಡುಗಡೆ ಮಾಡಿದೆ.
ಫೋಟೋದಲ್ಲಿ ತಹವೂರ್ ಠಾಣಾ ಅಮೆರಿಕದ ಜೈಲಿನ ಬಟ್ಟೆ ಧರಿಸಿದ್ದಾನೆ. ಆಮೆರಿಕದ ಮಾರ್ಷಲ್ಸ್ ಅಧಿಕಾರಿಗಳು ಆತನನ್ನು ಭಾರತದ ವಿದೇಶಾಂಗ ಸಚಿವಾಲಯದ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.
ಈ ಕುರಿತು ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಅಮೆರಿಕದ ನ್ಯಾಯಾಂಗ ಇಲಾಖೆ, 2008ರ ಮುಂಬೈ ಭಯೋತ್ಪಾದಕ ದಾಳಿಗೆ ಸಂಬಂಧಿಸಿದ 10 ಕ್ರಿಮಿನಲ್ ಆರೋಪಗಳ ಮೇಲೆ, ಭಾರತದಲ್ಲಿ ತಹವೂರ್ ರಾಣಾ ವಿಚಾರಣೆ ನಡೆಯಲಿದೆ. ಕೆನಡಾದ ಪ್ರಜೆ ಮತ್ತು ಪಾಕಿಸ್ತಾನದ ನಿವಾಸಿಯಾಗಿರುವ ಭಯೋತ್ಪಾದಕ ತಹವೂರ್ ಹುಸೇನ್ ರಾಣಾನನ್ನು ಅಮೆರಿಕದ ಮಾರ್ಷಲ್ ಅಧಿಕಾರಿಗಳು ಭಾರತೀಯ ವಿದೇಶಾಂಗ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ ಎಂದು ಸ್ಪಷ್ಟಪಡಿಸಿದೆ.
ಮುಂಬೈ ಭಯೋತ್ಪಾದಕ ದಾಳಿಯ ಆರೋಪಿ ತಹವುರ್ ರಾಣಾ ಜೊತೆ ಪಾಕಿಸ್ತಾನ ಯಾವುದೇ ಸಂಬಂಧ ಹೊಂದಿಲ್ಲ ಎಂದು ಗುರುವಾರ ಹೇಳಿದೆ. ತಹವೂರ್ ರಾಣಾ ಕೆನಡಾದ ಪ್ರಜೆಯಾಗಿದ್ದು, ಸುಮಾರು ಎರಡು ವಶಕಗಳಿಂದ ತನ್ನ ಪಾಕಿಸ್ತಾನಿ ದಾಖಲೆಗಳನ್ನು ನವೀಕರಿಸಿಲ್ಲ ಎಂದು ಪಾಕಿಸ್ತಾನ ಹೇಳಿದೆ.
ತಹವೂರ್ ರಾಣಾ (64) 2008ರ ಮುಂಬೈ ಭಯೋತ್ಪಾದಕ ದಾಳಿಯ ಪ್ರಮುಖ ಸಂಚುಕೋರರಲ್ಲಿ ಒಬ್ಬನಾದ ಅಮೆರಿಕದ ಪ್ರಜೆ ಡೇವಿಡ್ ಕೋಲ್ಡನ್ ಪೆಡ್ಲಿ ಅಲಿಯಾಸ್ ದಾವೂದ್ ಗಿಲಾನಿಯ ಆಪ್ತ ಸಹಚರ, ಭಾರತಕ್ಕೆ ರಾಣಾ ಆಗಮನ ಹಿನ್ನೆಲೆಯಲ್ಲಿ ಹೆಚ್ಚುತ್ತಿರುವ ಭದ್ರತಾ ಕಳವಳಗಳ ನಡುವೆ, ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸೇರಿದಂತೆ ಉನ್ನತ ಸರ್ಕಾರಿ ಅಧಿಕಾರಿಗಳು ಪರಿಶೀಲನಾ ಸಭೆ ನಡೆಸಿ ವ್ಯವಸ್ಥೆಗಳ ಕುರಿತು ಚರ್ಚಿಸಿದರು. ರಾಣಾನ ನ್ಯಾಯಾಲಯದ ವಿಚಾರಣೆಗಳನ್ನು ರಹಸ್ಯವಾಗಿ ನಡೆಸಬಹುದು ಎಂದು ಮೂಲಗಳು ತಿಳಿಸಿವೆ.
ತನಿಖಾ ತಂಡದ ಆಪ್ತ ಮೂಲಗಳು ರಾಣಾನ ವಿಚಾರಣೆಯು 26/11ರ ದಾಳಿಯಲ್ಲಿ ಪಾಕಿಸ್ತಾನದ ಪಾಲ್ಗೊಳ್ಳುವಿಕೆ, ಐಎಸ್‌ಐ ಜಾಲದ ರಚನ ಮತ್ತು ಕಾರ್ಯಾಚರಣೆಗಳು ಹಾಗೂ ಭಾರತದಲ್ಲಿ ಲಷ್ಕರ್-ಎ-ತೈಲಾದ ಸಹಯೋಗಿಗಳು ಮತ್ತು ಅದರ ಹಣಕಾಸು ಮಾರ್ಗಗಳ ಮೇಲೆ ಕೇಂದ್ರೀಕರಿಸುವ ನಿರೀಕ್ಷೆಯಿದೆ.
ಮುಂಬೈ ದಾಳಿಯಲ್ಲಿ ಆರು ಅಮೆರಿಕನ್ನರು ಸಾವನ್ನಪ್ಪಿದ್ದರು. ಭಾರತದಲ್ಲಿ ತಹವೂರ್ ರಾಣಾ ವಿಚಾರಣೆ ನಡೆಯಲಿರುವುದರಿಂದ, ದಾಳಿಯಲ್ಲಿ ಬಲಿಯಾದ ಯುಎಸ್ ನಾಗರಿಕರ ಕುಟುಂಬಸ್ಥರಿಗೆ ನ್ಯಾಯ ಸಿಗುವ ವಿಶ್ವಾಸವಿದೆ. ರಾಣಾ ಹಸ್ತಾಂತರವು ಒಂದು ನಿರ್ಣಾಯಕ ಹೆಜ್ಜೆಯಾಗಿದೆ. ಈ ಹಿನ್ನೆಲೆಯಲ್ಲಿ ಯುಎಸ್ ಮಾರ್ಷಲ್ಸ್ ಈಗಾಗಲೇ ಭಾರತೀಯ ವಿದೇಶಾಂಗ ಇಲಾಖೆ ಅಧಿಕಾರಿಳಿಗೆ ರಾಣಾನನ್ನು ಅಧಿಕೃತವಾಗಿ ಹಸ್ತಾಂತರಿಸಿದ್ದಾರೆ.. ಎಂದು ಯುಎಸ್ ಡಿಪಾರ್ಟ್ ಮೆಂಟ್ ಆಫ್ ಜಸ್ಟೀಸ್ ಮಾಹಿತಿ ನೀಡಿದೆ.
ತಹವೂರ್ ರಾಣಾನ ವಿಚಾರಣೆ ನಡೆಸಿರುವ ಅಮೆರಿಕದ ನ್ಯಾಯಾಲಯವು, ರಾಣಾ ಮುಂಬೈ ದಾಳಿಯಲ್ಲಿ ನೇರವಾಗಿ ಭಾಗವಹಿಸಿಲ್ಲ. ಆದರೆ ಆತ ದಾಳಿಗೆ ಬೇಕಾದ ಸಹಾಯ ಮಾಡಿದ್ದಾನೆ. ಚಿಕಾಗೋದಲ್ಲಿ ವಲಸೆ ಕಚೇರಿ ನಡೆಸುತ್ತಿದ್ದ ರಾಣಾ, ಉಗ್ರ ಡೇವಿಡ್ ಹೆಡ್ಲಿಗೆ ಸುಳ್ಳು ದಾಖಲೆಗಳನ್ನು ಬಳಸಿ ಭಾರತಕ್ಕೆ ಬರಲು ಸಹಾಯ ಮಾಡಿದ್ದಾನೆ. ಎಂದು ತೀರ್ಪು ನೀಡಿದೆ.
ಮುಂಬೈ ದಾಳಿಯ ಬಳಿಕ ಡೆವಿಡ್ ಹೆಡ್ಲಿ ಮತ್ತು ತಹವೂರ್ ರಾಣಾ ದೂರವಾಣಿಯಲ್ಲಿ ಸಂಭಾಷಣೆ ನಡೆಸಿದ್ದು, ಮುಂಬೈ ದಾಳಿಕೋರರನ್ನು ಮೆಚ್ಚಿ ಮಾತನಾಡಿದ್ದಾರೆ. ಅಲ್ಲದೇ ದಾಳಿಯಲ್ಲಿ ಭಾಗವಹಿಸಿದ ಎಲ್ಲ ಉಗ್ರರಿಗೂ ಪಾಕಿಸ್ತಾನದ ನಿಕಾನ್-ಎ-ಹೈದರ್ ಪ್ರಶಸ್ತಿ ಸಿಗಬೇಕು ಎಂದ ಇವರಿಬ್ಬರೂ ಸಂಭಾಷಣೆ ನಡೆಸಿದ್ದರು.. ಎಂದು ಅಮೆರಿಕದ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.
2008 ರ ಮುಂಬೈ ಭಯೋತ್ಪಾದಕ ದಾಳಿಯನ್ನು ಡೇವಿಡ್ ಕೋಲ್ಸನ್ ರೆಡ್ಲಿ, ಲಷ್ಕರ್-ಎ-ತೈಬಾ (ಎಲ್ ಇಟಿ), ಹರ್ಕತ್-ಉಲ್-ಜಿಹಾದಿ ಇಸ್ಲಾಮಿ (ಹುಜಿ) ಮತ್ತು ಇತರ ಪಾಕಿಸ್ತಾನಿ ಭಯೋತ್ಪಾದಕರೊಂದಿಗೆ ತಹವೂರ್ ರಾಣಾ ಸಂಚು ರೂಪಿಸಿದ ಆರೋಪ ಹೊರಿಸಲಾಗಿದೆ.