Sunday, November 24, 2024
Homeರಾಷ್ಟ್ರೀಯ | Nationalಒಲಿಂಪಿಕ್‌ ಕೌನ್ಸಲರ್ ಆಫ್‌ ಏಷ್ಯಾದ ಅಧ್ಯಕ್ಷರಾಗಿ ರಣದೀರ್‌ ಸಿಂಗ್‌ ಆಯ್ಕೆ

ಒಲಿಂಪಿಕ್‌ ಕೌನ್ಸಲರ್ ಆಫ್‌ ಏಷ್ಯಾದ ಅಧ್ಯಕ್ಷರಾಗಿ ರಣದೀರ್‌ ಸಿಂಗ್‌ ಆಯ್ಕೆ

Randhir Singh becomes first Indian to be elected as OCA president

ನವದೆಹಲಿ, ಸೆ 8 – ಪ್ರಪ್ರಥಮ ಭಾರಿಗೆ ಭಾರತದ ಹಿರಿಯ ಕ್ರೀಡಾ ನಿರ್ವಾಹಕ ರಣಧೀರ್‌ ಸಿಂಗ್‌ ಅವರು ಒಲಿಂಪಿಕ್‌ ಕೌನ್ಸಿಲ್‌ ಆಫ್‌ ಏಷ್ಯಾದ (ಒಸಿಎ) ಅಧ್ಯಕ್ಷರಾಗಿ ಆಯ್ಕೆಯಾದ್ದಾರೆ. ಇಲ್ಲಿ ನಡೆದ ಕಾಂಟಿನೆಂಟಲ್‌ ಬಾಡ್‌ನ 44 ನೇ ಸಾಮಾನ್ಯ ಸಭೆಯಲ್ಲಿ ರಣಧೀರ್‌ ಸಿಂಗ್‌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಈ ಸ್ಥಾನಕ್ಕೇರಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.

ಶೂಟಿಂಗ್‌ನಲ್ಲಿ ಐದು ಬಾರಿ ಒಲಿಂಪಿಕ್‌ನಲ್ಲಿ ಭಾಗವಹಿದ್ದ ರಣಧೀರ್‌ ಒಸಿಎ ಅಧ್ಯಕ್ಷ ಸ್ಥಾನಕ್ಕೆ ಏಕೈಕ ಅರ್ಹ ಅಭ್ಯರ್ಥಿಯಾಗಿದ್ದರು. ಅವರ ಅಧಿಕಾರಾವಧಿಯು 2024 ರಿಂದ 2028 ರವರೆಗೆ ಇರುತ್ತದೆ ಎಂದು ವರದಿ ತಿಳಿಸಿದೆ.

ಕುವೈತ್‌ನ ಶೇಖ್‌ ಅಹ್ಮದ್‌ ಅಲ್‌‍-ಫಹಾದ್‌ ಅಲ್‌‍-ಸಬಾಹ್‌ ಅವರನ್ನು ಸ್ಥಾನವನ್ನು ಇವರು ತುಂಬಲಿದ್ದಾರೆ. ಭಾರತೀಯ ಮತ್ತು ಏಷ್ಯನ್‌ ಕ್ರೀಡಾ ಸಂಸ್ಥೆಗಳಲ್ಲಿ ವಿಭಿನ್ನ ಆಡಳಿತಾತ್ಮಕ ಹುದ್ದೆಗಳನ್ನು ಹೊಂದಿದ್ದ ರಣಧೀರ್‌ ಅವರನ್ನು ಕ್ರೀಡಾ ಸಚಿವ ಮನ್ಸುಖ್‌ ಮಾಂಡವಿಯಾ ಮತ್ತು ಏಷ್ಯಾದ ಎಲ್ಲಾ 45 ದೇಶಗಳ ಉನ್ನತ ಕ್ರೀಡಾ ನಾಯಕರ ಸಮ್ಮುಖದಲ್ಲಿ ಅಧಿಕೃತವಾಗಿ ಅಧ್ಯಕ್ಷರಾಗಿ ನೇಮಿಸಲಾಯಿತು.

ಪಂಜಾಬ್‌ನ ಪಟಿಯಾಲ ಮೂಲದ ಇವರು ಕ್ರೀಡಾ ಪಟುಗಳ ಕುಟುಂಬಕ್ಕೆ ಸೇರಿದವರು.ಅವರ ಚಿಕ್ಕಪ್ಪ, ಮಹಾರಾಜ ಯಾದವೀಂದ್ರ ಸಿಂಗ್‌ ಭಾರತಕ್ಕಾಗಿ ಟೆಸ್ಟ್‌ ಕ್ರಿಕೆಟ್‌ ಆಡಿದರು ಅವರ ತಂದೆ ಭಲೀಂದ್ರ ಸಿಂಗ್‌ ಪ್ರಥಮ ದರ್ಜೆ ಕ್ರಿಕೆಟಿಗರು, 1947 ಮತ್ತು 1992 ರ ನಡುವೆ ಸದಸ್ಯರಾಗಿದ್ದರು.

RELATED ARTICLES

Latest News