Home ಇದೀಗ ಬಂದ ಸುದ್ದಿ ರಾಣಿಚೆನ್ನಮ್ಮ ವಿವಿಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷೆ ಮುಂದೂಡಿಕೆ

ರಾಣಿಚೆನ್ನಮ್ಮ ವಿವಿಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷೆ ಮುಂದೂಡಿಕೆ

0
ರಾಣಿಚೆನ್ನಮ್ಮ ವಿವಿಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷೆ ಮುಂದೂಡಿಕೆ

ಬೆಳಗಾವಿ, ಮಾ.22- ರಾಜ್ಯದ ಅತಿದೊಡ್ಡ ವಿಶ್ವವಿದ್ಯಾಲಯ ಬೆಳಗಾವಿ ರಾಣಿ ಚೆನ್ನಮ್ಮ ವಿವಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಪರೀಕ್ಷೆಯನ್ನು ಮುಂದೂಡಲಾಗಿದೆ. ಇಂದು ನಡೆಯಬೇಕಿದ್ದ ಹಣಕಾಸು ನಿರ್ವಹಣಾ (ಫೈನಾನ್ಷಿಯಲ್ ಮ್ಯಾನೇಜ್ಮೆಂಟ್) ವಿಷಯದ ಪರೀಕ್ಷೆ ರದ್ದುಗೊಳಿಸಿ ವಿಶ್ವವಿದ್ಯಾಲಯ ಅಧಿಸೂಚನೆ ಹೊರಡಿಸಿದೆ.

ಪ್ರಶ್ನೆ ಪತ್ರಿಕೆ ಸೋರಿಕೆಯ ಹಿಂದಿನ ರಹಸ್ಯ ಭೇದಿಸಲಾಗುವುದು ಮತ್ತು ಈ ಕುರಿತು ಪೊಲೀಸರಿಗೆ ದೂರು ನೀಡಲಾಗುವುದು ಎಂದು ವಿವಿ ಕುಲಪತಿ ಡಾ. ತ್ಯಾಗರಾಜ್ ತಿಳಿಸಿದ್ದಾರೆ. ಪರೀಕ್ಷೆಯ ಮುಂದಿನ ದಿನಾಂಕವನ್ನು ವಿವಿ ಇನ್ನು ಪ್ರಕಟಪಡಿಸಿಲ್ಲ.