Monday, March 10, 2025
Homeರಾಜ್ಯಕಾಂಗ್ರೆಸ್ ಸರ್ಕಾರಕ್ಕೆ ಸಂಕಟ ತಂದಿಟ್ಟ ರನ್ಯಾರಾವ್‌ ಚಿನ್ನ ಕಳ್ಳ ಸಾಗಾಟ ಪ್ರಕರಣ

ಕಾಂಗ್ರೆಸ್ ಸರ್ಕಾರಕ್ಕೆ ಸಂಕಟ ತಂದಿಟ್ಟ ರನ್ಯಾರಾವ್‌ ಚಿನ್ನ ಕಳ್ಳ ಸಾಗಾಟ ಪ್ರಕರಣ

Ranya Rao Gold Smuggling case brings trouble to Congress government

ಬೆಂಗಳೂರು,ಮಾ.10– ನಟಿ ರನ್ಯಾ ರಾವ್‌ ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಸಿಲುಕಿಬಿದ್ದ ಬಳಿಕ ಹಲವಾರು ಸ್ಫೋಟಕ ಮಾಹಿತಿಗಳು ಹೊರಬೀಳುತ್ತಿದ್ದು, ರಾಜ್ಯಸರ್ಕಾರದ ಭವಿಷ್ಯ ಹಾಗೂ ಕೆಲ ಸಚಿವರಿಗೆ ಕಂಟಕವಾಗುತ್ತಿದೆ. ರನ್ಯಾ ರಾವ್‌ರವರಿಗೆ ಕೆಲವು ಸಚಿವರು ಬೆಂಬಲ ನೀಡಿದ್ದಾರೆ. ಆಕೆಯನ್ನು ಪಾರು ಮಾಡಲು ದೂರವಾಣಿ ಕರೆ ಮಾಡಿದ್ದಾರೆ ಎಂಬೆಲ್ಲಾ ವದಂತಿಗಳಿವೆ. ಈ ಘಟನೆಗೆ ಸಂಬಂಧಪಟ್ಟಂತೆ ಗೃಹಸಚಿವ ಡಾ.ಜಿ.ಪರಮೇಶ್ವರ್‌ ಅವರು ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಪಟ್ಟು ಹಿಡಿದಿದೆ.

ಈ ಪ್ರಕರಣ ಆಡಳಿತ ಮತ್ತು ಪ್ರತಿಪಕ್ಷದ ನಡುವಿನ ಆರೋಪ, ಪ್ರತ್ಯಾರೋಪಗಳಿಗೆ ಕಾರಣವಾಗಿದೆ. ರನ್ಯಾ ರಾವ್‌ ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಸಂಪುಟದ ಕೆಲ ಸಚಿವರ ಕೈವಾಡ ಇದೆ ಎಂದು ಬಿಜೆಪಿ ಆರೋಪಿಸುತ್ತಿದ್ದು, ಆರೋಪಿ ಸ್ಥಾನದಲ್ಲಿರುವ ಸಚಿವರು ರಾಜೀನಾಮೆ ನೀಡಬೇಕು ಎಂದು ಪಟ್ಟು ಹಿಡಿದಿದೆ.

14 ಕೆ.ಜಿ.ಗೂ ಹೆಚ್ಚಿನ ಚಿನ್ನದ ಕಳ್ಳಸಾಗಾಣಿಕೆಯಲ್ಲಿ ರನ್ಯಾ ರಾವ್‌ ಕೇಂದ್ರ ಕಂದಾಯ ಗುಪ್ತಚರ ಇಲಾಖೆ ಅಧಿಕಾರಿಗಳಿಗೆ ಸಿಕ್ಕಿಬಿದ್ದ ಬಳಿಕ ದೇಶದೆಲ್ಲೆಡೆ ಹಲವಾರು ಕಡೆ ಚಿನ್ನ ಕಳ್ಳಸಾಗಾಣಿಕೆಯ ಪ್ರಕರಣಗಳು ವರದಿಯಾಗುತ್ತಿವೆ.

ರನ್ಯಾ ರಾವ್‌ ಅವರ ಹಿಂದೆ ಪ್ರಭಾವಿಗಳ ಕೈವಾಡವಿದೆ. ಹವಾಲ ದಂಧೆ ನಡೆದಿರಬಹುದು. ಮನಿಲ್ಯಾಂಡ್ರಿಂಗ್‌ ಕಾಯ್ದೆ ಉಲ್ಲಂಘನೆಯಾಗಿದೆ ಎಂಬೆಲ್ಲಾ ಆರೋಪಗಳಿವೆ. ಕಾಂಗ್ರೆಸ್‌‍ ಸರ್ಕಾರದ ಕೆಲ ಸಚಿವರುಗಳೇ ರನ್ಯಾ ರಾವ್‌ ಅವರ ಬೆಂಬಲಕ್ಕಿದ್ದರು ಎಂಬುದು ಭಾರೀ ಸಂಚಲನ ಮೂಡಿಸಿದೆ. ಘಟನೆ ಕುರಿತು ಸಿಬಿಐ ತನಿಖೆ ನಡೆಯುತ್ತಿರುವುದರಿಂದ ಕಾಂಗ್ರೆಸ್‌‍ ಸರ್ಕಾರದ ಕೆಲ ಸಚಿವರುಗಳಲ್ಲಿ ನಡುಕ ಆರಂಭವಾಗಿದೆ.

ಕೇಂದ್ರೀಯ ತನಿಖಾ ಸಂಸ್ಥೆಗಳಾದ ಸಿಬಿಐ, ಜಾರಿ ನಿರ್ದೇಶನಾಲಯ, ಆದಾಯ ತೆರಿಗೆಯಂತಹ ಇಲಾಖೆಗಳು ವಿರೋಧಪಕ್ಷಗಳ ವಿರುದ್ಧ ಪದೇ ಪದೇ ಮುಗಿಬೀಳುತ್ತಲೇ ಇರುತ್ತವೆ. ಅದರಲ್ಲೂ ಅಂತಾರಾಷ್ಟ್ರೀಯ ಮಟ್ಟದ ಗೋಲ್‌್ಡ ಸಗ್ಲಿಂಗ್‌ನಲ್ಲಿ ಸಚಿವರ ಹೆಸರು ಕೇಳಿಬಂದರೆ ಗ್ರಹಚಾರವಂತೂ ಕಟ್ಟಿಟ್ಟ ಬುತ್ತಿ. ತಮಿಳುನಾಡು, ದೆಹಲಿ ಸೇರಿದಂತೆ ಇತರ ಕಡೆಗಳಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನೇರವಾಗಿ ಸಚಿವರನ್ನು ಬಂಧಿಸಿ ಜೈಲಿನಲ್ಲಿಟ್ಟಿದ್ದ ಉದಾಹರಣೆಗಳಿವೆ.

ಈಗ ಚಿನ್ನದ ಕಳ್ಳಸಾಗಾಣಿಕೆ ಪ್ರಕರಣದಲ್ಲೂ ಅದೇ ರೀತಿಯ ಕಾರ್ಯಾಚರಣೆ ಇರಬಹುದು. ಇನ್ನಿಬ್ಬರು ಸಚಿವರು ಜೈಲಿಗೆ ಹೋಗಬಹುದು ಎಂದು ಹೇಳಲಾಗುತ್ತಿದೆ.ಕೇಂದ್ರೀಯ ತನಿಖಾ ಸಂಸ್ಥೆ ಸಿಬಿಐ ಮತ್ತು ಕಂದಾಯ ಗುಪ್ತಚರ ಇಲಾಖೆ ರಾಜ್ಯಸರ್ಕಾರಕ್ಕೆ ಯಾವುದೇ ಮಾಹಿತಿ ನೀಡದೆ ನೇರವಾಗಿ ಪ್ರಕರಣದ ತನಿಖೆ ನಡೆಸುತ್ತಿವೆ. ರನ್ಯಾ ರಾವ್‌ ಅವರನ್ನು ವಿಚಾರಣೆಗೆ ಪಡೆದು ಆಕೆಯ ಮೊಬೈಲ್‌, ಲ್ಯಾಪ್‌ಟಾಪ್‌ ಇತರ ಎಲೆಕ್ಟ್ರಾನಿಕ್‌ ಡಿವೈಸ್‌‍ಗಳನ್ನು ವಶಕ್ಕೆ ಪಡೆದು ಅದರಲ್ಲಿನ ಸಂಪರ್ಕಗಳು ಹಾಗೂ ಸಂವಹನ ಚಟುವಟಿಕೆಗಳನ್ನು ವಿಶ್ಲೇಷಣೆಗೊಳಪಡಿಸಲಾಗುತ್ತಿದೆ.

ರನ್ಯಾ ರಾವ್‌ ಅವರ ಜೊತೆ ಸಂಪುಟದ ಇಬ್ಬರು ಸಚಿವರು ನಿರಂತರವಾಗಿ ಸಂಪರ್ಕದಲ್ಲಿದ್ದರು ಎಂಬ ಮಾಹಿತಿ ಇದೆ. ಇದೇ ಈಗ ರಾಜ್ಯ ರಾಜಕಾರಣದಲ್ಲಿ ಹಲ್ಚಲ್‌ ಎಬ್ಬಿಸಿದೆ.
ಸದರಿ ಸಚಿವರು ರನ್ಯಾ ರಾವ್‌ ಅವರ ಬೆನ್ನಿಗೆ ನಿಂತಿದ್ದರು, ಗೋಲ್‌್ಡ ಸಗ್ಲಿಂಗ್‌ನಲ್ಲೂ ಅವರ ಕೈವಾಡವಿರುತ್ತದೆ ಎಂಬ ಆರೋಪಗಳು ಕೇಳಿಬಂದಿವೆ. ವಿಧಾನಮಂಡಲದಲ್ಲೂ ಈ ವಿಚಾರ ಚರ್ಚೆಯಾಗಲಿದೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್‌‍ ರನ್ಯಾ ರಾವ್‌ ಅವರ ಜೊತೆಗೆ ಬಿಜೆಪಿ ನಾಯಕ ಸಂಪರ್ಕವನ್ನು ಮುಂದಿಟ್ಟುಕೊಂಡು ತಿರುಗೇಟು ನೀಡಲು ಮುಂದಾಗಿದೆ.

ಈ ಹಿಂದೆ ಬಸವರಾಜ ಬೊಮಾಯಿ ಸರ್ಕಾರದಲ್ಲಿ ಕೆಐಡಿಬಿಯಿಂದ ಕೈಗಾರಿಕಾ ಉದ್ದೇಶಕ್ಕಾಗಿ 12 ಎಕರೆ ಜಮೀನನ್ನು ಮಂಜೂರು ಮಾಡಲಾಗಿದೆ. ಕಬ್ಬಿನಹಳ್ಳಿ ರುಷಬ್‌ ಹರ್ಷವರ್ಧಿನಿ ರನ್ಯಾ ಮಾಲೀಕತ್ವದಲ್ಲಿ 2023 ರ ಏಪ್ರಿಲ್‌ 21 ರಂದು ಕ್ಸಿರೋಡ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ಸ್ಥಾಪನೆಗೊಂಡಿದ್ದು 2023 ರ ಜ.24 ರಂದು ಈ ಕಂಪನಿಗೆ ಶಿರಾ ಕೈಗಾರಿಕಾ ಪ್ರದೇಶದಲ್ಲಿ 13 ಎಕರೆ 5 ಗುಂಟೆ ಜಮೀನು ಮಂಜೂರಾತಿಗೆ ಬೇಡಿಕೆ ಸಲ್ಲಿಕೆಯಾಗಿದೆ. 138 ಕೋಟಿ ರೂ. ಬಂಡವಾಳ ಹೂಡುವುದಾಗಿ ಪ್ರಸ್ತಾವ ಸಲ್ಲಿಸಲಾಗಿತ್ತು. ಅದಕ್ಕೆ ಸಹಮತ ಸೂಚಿಸಿದ ಆಗಿನ ಬೃಹತ್‌ ಮತ್ತು ಕೈಗಾರಿಕೆ ಸಚಿವ ಮುರುಗೇಶ್‌ ನಿರಾಣಿ ಭೂಮಿ ಮಂಜೂರಾತಿಗೆ ಸಮತಿಸಿದ್ದರು ಎಂಬ ವರದಿಯಿದೆ.

ರನ್ಯಾ ಅವರ ಸಂಪರ್ಕ ಮತ್ತು ಗೋಲ್‌್ಡ ಸಗ್ಲಿಂಗ್‌ನಲ್ಲಿ ಹಸ್ತಕ್ಷೇಪ ಸೇರಿದಂತೆ ಹಲವಾರು ವಿಚಾರಗಳ ಬಗ್ಗೆ ಭಾರೀ ಚರ್ಚೆಗಳು ಹುಟ್ಟಿಕೊಂಡಿವೆ.ರನ್ಯಾ ಅವರಿಂದ ಬಲವಂತವಾಗಿ ಚಿನ್ನ ಕಳ್ಳಸಾಗಾಣಿಕೆ ಮಾಡಿಸಲಾಗುತ್ತಿತ್ತು ಎಂಬ ಆರೋಪವೂ ಕೇಳಿಬಂದಿದೆ.

RELATED ARTICLES

Latest News