ಬೆಂಗಳೂರು,ಮಾ.10– ನಟಿ ರನ್ಯಾರಾವ್ ಅವರ ಬಳಿ ಕೋಟ್ಯಾಂತರ ರೂ. ಬೆಲೆ ಬಾಳುವ 30ಕ್ಕೂ ಹೆಚ್ಚು ವಿದೇಶಿ ವಾಚ್‌ಗಳು ಇವೆ ಎಂಬುದನ್ನು ಡಿಆರ್‌ಐ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಡಿಆರ್‌ಐ ಅಧಿಕಾರಿಗಳು ಈಕೆಯನ್ನು ತಮ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕೆಲವು ಮಾಹಿತಿಗಳು ಲಭ್ಯವಾಗಿವೆ.
ಆಕೆಗೆ ಇದ್ದಂತಹ ಸಂಪರ್ಕ ಜಾಲದ ಬಗ್ಗೆ ಅಧಿಕಾರಿಗಳು ಕೆಲವು ಪ್ರಶ್ನೆಗಳನ್ನು ಆಕೆಯ ಮುಂದಿಟ್ಟು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ.ಹಲವು ಪ್ರಶ್ನೆಗಳಿಗೆ ರನ್ಯಾ ಸರಿಯಾದ ಉತ್ತರ ನೀಡಿಲ್ಲ ಎಂಬುದು ಗೊತ್ತಾಗಿದೆ. ಹೆಚ್ಚಿನ ವಿಚಾರಣೆ ಸಂದರ್ಭದಲ್ಲಿ ಈಕೆ ಬಳಿ ಕೋಟ್ಯಾಂತರ ರೂ. ಬೆಲೆ ಬಾಳುವ ವಿದೇಶಿ ವಾಚ್‌ಗಳು ಇರುವುದು ಗ್ತೊತಾಗಿದೆ.
ವಿದೇಶದಿಂದ ಈಕೆ ಬಂದಾಗ ಏರ್‌ಪೋರ್ಟ್‌ನಲ್ಲಿ ಚಿನ್ನ ಕಳ್ಳ ಸಾಗಣೆ ವೇಳೆ ಸಿಕ್ಕಿಬಿದ್ದಿದ್ದಾರೆ. ಆ ವೇಳೆ 14ಕೆ.ಜಿ. ಚಿನ್ನದ ಗಟ್ಟಿಗಳು ಪತ್ತೆಯಾಗಿವೆ. ನಂತರ ಲ್ಯಾವೇಲಿ ರಸ್ತೆಯಲ್ಲಿರುವ ಆಕೆಯ ಐಷಾರಾಮಿ ಪ್ಲಾಟ್ ಮೇಲೆ ದಾಳಿ ಮಾಡಿದಾಗ ಸುಮಾರು ಎರಡು ಕೋಟಿ ಹಣ ಹಾಗೂ ಸುಮಾರು 2 ಕೋಟಿ ಮೌಲ್ಯದ ಚಿನ್ನದ ಗಟ್ಟಿ ಸ್ಕಿಕಿದ್ದು, ಇದುವರೆಗೂ 17 ಕೋಟಿ ರೂ. ನಷ್ಟು ಹಣ, ಆಭರಣ ಪತ್ತೆಯಾಗಿದೆ.
ಈಕೆಯ ಬಳಿ ಇರುವ ಕೋಟ್ಯಾಂತರ ರೂ. ಬಲೆಯ ವಿದೇಶಿ ವಾಚ್‌ಗಳನ್ನು ತನಿಖಾಧಿಕಾರಿಗಳು ತಮ ವಶಕ್ಕೆ ಪಡೆದಿಲ್ಲ. ಅವುಗಳ ಮೂಲದ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಈ ವಾಚ್‌ಗಳನ್ನು ಯಾವ ರೀತಿ ಖರೀದಿಸಿದ್ದಾರೆ, ಇವುಗಳನ್ನು ಹೇಗೆ ತಂದರು ಎಂಬ ಬಗ್ಗೆ ಡಿಆರ್‌ಐ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.