Monday, October 20, 2025
Homeರಾಜ್ಯಅತ್ಯಾಚಾರ ಆರೋಪ : ಎಸ್‌‍ಐಟಿಯಿಂದ ಬಿ ರಿಪೋರ್ಟ್‌ ಸಲ್ಲಿಕೆ, ಶಾಸಕ ಮುನಿರತ್ನ ನಿರಾಳ

ಅತ್ಯಾಚಾರ ಆರೋಪ : ಎಸ್‌‍ಐಟಿಯಿಂದ ಬಿ ರಿಪೋರ್ಟ್‌ ಸಲ್ಲಿಕೆ, ಶಾಸಕ ಮುನಿರತ್ನ ನಿರಾಳ

Rape allegation: SIT submits B report, MLA Munirathna relieved

ಬೆಂಗಳೂರು, ಸೆ.3- ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಹಿನ್ನಲೆಯಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಮೇಲೆ ಕೇಳಿಬಂದಿದ್ದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ(ಎಸ್‌‍ಐಟಿ) ನ್ಯಯಾಲಯಕ್ಕೆ ಬಿ ರಿಪೋರ್ಟ್‌ ಸಲ್ಲಿಸಿದೆ.

ಸಂತ್ರಸ್ತೆ ನೀಡಿದ ದೂರಿನಂತೆ ಶಾಸಕರು ಅತ್ಯಾ ಚಾರ ನಡೆಸಿರುವ ಬಗ್ಗೆ ಯಾವುದೇ ಸೂಕ್ತ ದಾಖಲೆಗಳು ಇಲ್ಲವೇ ಸಾಕ್ಷ್ಯಾ ಧಾರ ಇಲ್ಲದ ಕಾರಣ ಎಸ್‌‍ಐಟಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಬಿ ರಿಪೋರ್ಟ್‌ ಸಲ್ಲಿಸಿದೆ. ಇದರಿಂದಾಗಿ ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿಕೊಂಡಿದ್ದ ಮುನಿರತ್ನಗೆ ಕಾನೂನು ಹೋರಾಟದಲ್ಲಿ ಬಹುದೊಡ್ಡ ಗೆಲುವು ಸಿಕ್ಕಂತಾಗಿದೆ. ನ್ಯಾಯಾಲಯ ಬಿ ರಿಪೋರ್ಟ್‌ ಅಂಗೀಕರಿಸುವುದಷ್ಟೇ ಬಾಕಿ ಇದೆ.

ತಮ ಮೇಲಿನ ಆರೋಪ ಸುಳ್ಳೆಂದು ಪ್ರಕರಣದ ರದ್ದು ಕೋರಿ ಮುನಿರತ್ನ ಅರ್ಜಿ ಸಲ್ಲಿಸಿದ್ದರು. ಈಗ ಆರೋಪ ಸಾಬೀತಾಗಿಲ್ಲವೆಂದು ಎಸ್‌‍ಐಟಿ ಬಿ ರಿಪೋರ್ಟ್‌ ಸಲ್ಲಿಸಿದೆ ಎಂದು ಹೈಕೋರ್ಟ್‌ಗೆ ಮುನಿರತ್ನ ಪರ ವಕೀಲರು ತಿಳಿಸಿದ್ದಾರೆ. ಮಹಿಳೆ ಮಾತ್ರೆ ಸೇವಿಸುವಾಗಲೂ ರಿಹರ್ಸಲ್‌ ಮಾಡಿರುವುದು ಬೆಳಕಿಗೆ ಬಂದಿದೆ. 8 ಬಾರಿ ರಿಹರ್ಸಲ್‌ ನಡೆಸಲಾಗಿತ್ತು. ದೇಹದಲ್ಲಿ ನಿದ್ದೆ ಮಾತ್ರೆ ಅಂಶವಿಲ್ಲ. ಸಂತ್ರಸ್ತೆ ಮಾಡಿರುವ ಆರೋಪಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಹೀಗಾಗಿ ಬಿ ರಿಪೋರ್ಟ್‌ ಸಲ್ಲಿಕೆ ಮಾಡಲಾಗಿದೆ.

ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಬಿಜೆಪಿ ಕಾರ್ಯಕರ್ತೆಯೊಬ್ಬರು ನೀಡಿದ ದೂರಿನ ಮೇರೆಗೆ ಎಫ್‌ಐಆರ್‌ ದಾಖಲು ಮಾಡಲಾಗಿತ್ತು. ಶಾಸಕ ಮುನಿರತ್ನ, ಬೆಂಬಲಿಗರಾದ ವಸಂತ, ಚನ್ನಕೇಶವ, ಕಮಲ್‌ ಹಾಗೂ ಓರ್ವ ಅಪರಿಚಿತನ ವಿರುದ್ಧವೂ ನಗರದ ಆರ್‌ಎಂಸಿಯಾರ್ಡ್‌ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಮಹಿಳೆ ಇಂಜೆಕ್ಷನ್‌ ಕೊಟ್ಟು ಕೃತ್ಯ
ಅತ್ಯಾಚಾರಕ್ಕೂ ಮುನ್ನ ನೀಡಿದ ಇಂಜೆಕ್ಷನ್ನಿಂದ ಈಗ ನನಗೆ ಇಡಿಆರ್‌ ಎಂಬ ಕಾಯಿಲೆ ಬಂದಿದೆ. ಇದರಿಂದ ಮನನೊಂದ ನಾನು ಆತಹತ್ಯೆಗೆ ಯತ್ನಿಸಿದ್ದೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದರು. ಬಿಜೆಪಿ ಕಾರ್ಯಕರ್ತೆ ನೀಡಿದ ದೂರಿನ ಮೇರೆಗೆ ಐಪಿಸಿ ಸೆಕ್ಷನ್‌ 376ಆ, 270, 323, 354, 504, 506, 509, 34ರಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಮಹಿಳೆಯು ನೀಡಿದ್ದ ದೂರಿನಲ್ಲಿ ಈ ಹಿಂದೆ ಬಿಜೆಪಿ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದೆ. ನನ್ನ ಗಂಡ ಬಿಟ್ಟು ಹೋದ ಬಳಿಕ 2ನೇ ಮದುವೆ ಆಗಿ ಜೀವನ ನಡೆಸುತ್ತಿದ್ದೆ. ವೇಶ್ಯಾವಾಟಿಕೆ ಆರೋಪ ಹೊರಿಸಿ ನನ್ನನ್ನು ಜೈಲಿಗೆ ಕಳಿಸಿದ್ದರು ಬಳಿಕ ಜಾಮೀನು ಪಡೆದು ಹೊರಗೆ ಬಂದಿದ್ದೆ. ಕೆಲವರು ನನ್ನ ಕೇಸ್‌‍ ಇತ್ಯರ್ಥ ಮಾಡಿಕೊಡುವುದಾಗಿ ಆಮಿಷವೊಡ್ಡಿ ನನ್ನನ್ನು ಕಚೇರಿಗೆ ಕರೆಸಿ ಸಾಮೂಹಿಕ ಅತ್ಯಾಚಾರವೆಸಗಿದರು ಎಂದು ಮಹಿಳೆ ಆರೋಪ ಮಾಡಿದ್ದರು.

ಪ್ರಕರಣದ ಹಿನ್ನೆಲೆ ಏನು?
ಈ ಹಿಂದೆ ನಾನು ಬಿಜೆಪಿಯಲ್ಲಿದ್ದ ಕಾರಣಕ್ಕೆ ಆಗ ಕಾಂಗ್ರೆಸ್‌‍ನಲ್ಲಿದ್ದ ಶಾಸಕ ಮುನಿರತ್ನ ನನ್ನ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಜೈಲಿಗೆ ಕಳುಹಿಸಿದ್ದರು. ಬಳಿಕ 2023ರ ಜೂನ್‌ 11ರಂದು ಜೆ.ಪಿ ಪಾರ್ಕ್‌ ಬಳಿಯಿರುವ ಶಾಸಕರ ಕಚೇರಿಯ ಎರಡನೇ ಮಹಡಿಗೆ ಕರೆದೊಯ್ದು ಬೆತ್ತಲೆಗೊಳಿಸಿ, ತನ್ನ ಇಬ್ಬರು ಸಹಚರರಿಂದ ಸಾಮೂಹಿಕ ದೌರ್ಜನ್ಯಕ್ಕೆ ಕಾರಣರಾಗಿದ್ದರು. ಜತೆಗೆ, ಅಪಾಯಕಾರಿ ಕಾಯಿಲೆ ಬರುವಂತಹ ಇಂಜೆಕ್ಷನ್‌ ನೀಡಿದ್ದರು. ಈ ವಿಚಾರ ಎಲ್ಲಿಯೂ ಬಾಯಿ ಬಿಡದಂತೆ ಮುನಿರತ್ನ ಬೆದರಿಕೆ ಹಾಕಿದ್ದಲ್ಲದೆ, ಮುಖದ ಮೇಲೆ ಮೂತ್ರ ವಿಸರ್ಜಿಸಿದ್ದರು ಎಂದು ಮಹಿಳೆ ಆರೋಪಿಸಿದ್ದರು.ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಎಸ್‌‍ಐಟಿಗೆ ಆದೇಶಿಸಿತ್ತು.

RELATED ARTICLES

Latest News