ಬೆಂಗಳೂರು,ಮೇ 21-ಆರ್‌ಆರ್‌ನಗರ ಶಾಸಕ ಮುನಿರತ್ನ ಹಾಗೂ ನಾಲ್ವರು ಬೆಂಬಲಿಗರ ವಿರುದ್ಧ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದೆ. 40 ವರ್ಷದ ಸಮಾಜ ಸೇವಕಿಯೊಬ್ಬರು ಇವರುಗಳ ವಿರುದ್ಧ ಠಾಣೆಗೆ ದೂರು ನೀಡಿದ್ದಾರೆ.
2023 ಜೂನ್ 11 ರಂದು ಸಂಜೆ 7 ಗಂಟೆ ಸುಮಾರಿನಲ್ಲಿ ಮುನಿರತ್ನ ಅವರ ಬೆಂಬಲಿಗರಾದ ನಂದಿನಿ ಲೇಔಟ್ ನಿವಾಸಿ ವಸಂತ ಮತ್ತು ಆಶ್ರಯನಗರದ ಕಮಲ್ ಎಂಬುವವರು ಈ ಮಹಿಳೆ ಮನೆಗೆ ಹೋಗಿ ಶಾಸಕರು ನಿಮನ್ನು ಕರೆದುಕೊಂಡು ಬರಲು ಹೇಳಿದ್ದಾರೆ, ನಿಮ ಮೇಲಿನ ದೂರು ವಾಪಸ್ ಪಡೆಯುತ್ತಾರಂತೆ ಎಂದು ಹೇಳಿ ಯಶವಂತಪುರ ಜೆ.ಪಿ ಪಾರ್ಕ್ ಬಳಿ ಇರುವ ಎಂಎಲ್‌ಎ ಕಚೇರಿಗೆ ಬರುವಂತೆ ಹೇಳಿದ್ದಾರೆ.
ಕಾರಿನಲ್ಲಿ ಕಚೇರಿಗೆ ಹೋದಾಗ 2ನೇ ಮಹಡಿಯಲ್ಲಿನ ರೂಂಗೆ ಕರೆದೊಯ್ದ ಮೂವರು ಬೆಂಬಲಿಗರು ದಿವಾನ್ ಕಾಟ್ ಮೇಲೆ ಕುಳಿತುಕೊಳ್ಳಲು ಹೇಳಿದಾಗ, ನಾನು ನಿರಾಕರಿಸಿದಾಗ ಕೆನ್ನೆಗೆ ಹೊಡೆದರೆಂದು ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ.ನಂತರ ಮಹಿಳೆಯನ್ನು ಬೆತ್ತಲೆಗೊಳಿಸಿ ನೀನು ನಮಗೆ ಸಹಕರಿಸದಿದ್ದರೆ ನಿಮ ಮಗನನ್ನು ಕೊಲೆ ಮಾಡುವುದಾಗಿ ಬೆದರಿಸಿ ಇಬ್ಬರು ಅತ್ಯಾಚಾರ ವೆಸಗಿದ್ದಾರೆ.
ನಂತರ ಶಾಸಕ ಮುನಿರತ್ನ ಬಂದು ನನ್ನ ಮೇಲೆ ಮೂತ್ರ ವಿಸರ್ಜನೆ ಮಾಡಿದಾಗ ನಾನು ಬಾಯಿ ಮುಚ್ಚಿಕೊಂಡಿದ್ದರಿಂದ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿ, ನಂತರ ಬಿಳಿ ಬಣ್ಣದ ಬಾಕ್‌್ಸತೆಗೆದುಕೊಂಡು ಯಾವುದೋ ಇಂಜೆಕ್ಷನ್ ಚುಚ್ಚಿ ಈ ವಿಚಾರವನ್ನು ಪೊಲೀಸರು ಅಥವಾ ಬೆರೆಯವರ ಜೊತೆ ಹೇಳಿಕೊಂಡರೆ ನಿಮ ಕುಟುಂಬವನ್ನು ಮುಗಿಸುತ್ತೇನೆಂದು ಬೆದರಿಸಿ ಕಳುಹಿಸಿದ್ದಾರೆ ಎಂದು ನೊಂದ ಮಹಿಳೆ ದೂರಿನಲ್ಲಿ ವಿವರಿಸಿದ್ದಾರೆ.
ಕಳೆದ ಜನವರಿ 14 ರಂದು ತೀವ್ರ ಹೊಟ್ಟೆನೋವು ಬಂದಿದ್ದರಿಂದ ವಾಣಿ ವಿಲಾಸ ಆಸ್ಪತ್ರೆಗೆ ಚಿಕಿತ್ಸೆಗೆ ಹೋದಾಗ ವೈದ್ಯರು ರಕ್ತ ಪರೀಕ್ಷೆ ಮಾಡಿದಾಗ ಅಂದು ವಿಡಿಆರ್ ವೈರಸ್ ಇಂಜೆಕ್ಷನ್ ಕೊಟ್ಟಿರುವುದು ಗೊತ್ತಾಯಿತು.ತಕ್ಷಣ ನಾನು ಆತಹತ್ಯೆಗೆ ಯತ್ನಿಸಿದೆ. ಹಾಗಾಗಿ ಮುನಿರತ್ನ ಸೇರಿದಂತೆ ಐದು ಮಂದಿಯ ವಿರುದ್ಧ ಕ್ರಮಕೈಗೊಳ್ಳುವಂತೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.