ಬೆಂಗಳೂರು,ಮೇ 23- ನಟ ಮಡೆನೂರ್ ಮನು ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಹನಟಿ ಮಿಂಚು ಮಹತ್ವದ ಹೇಳಿಕೆ ನೀಡಿದ್ದು, ಕುಲದಲ್ಲಿ ಕೀಳ್ಯಾವುದೋ ಚಿತ್ರಕ್ಕೆ ಯಶಸ್ಸು ಸಿಗಲೆಂದು ಹಾರೈಸಿದ್ದಾರೆ.
ದೂರು ದಾಖಲಾಗಿ ನಟ ಮನು ಬಂಧನವಾದ ಕೆಲವೇ ಗಂಟೆಗಳಲ್ಲಿ ಮಿಂಚು ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ನನ್ನ ಮತ್ತು ಮನು ನಡುವೆ ಒಂದಿಷ್ಟು ಗೊಂದಲಗಳಿದ್ದವು. ಜಗಳವಾಗಿತ್ತು. ಅದಕ್ಕಾಗಿ ನಿರ್ಮಾಪಕರಿಗೆ ಮೆಸೇಜ್ ಮಾಡಿದ್ದು ನಿಜ. ಅದು ತಪ್ಪು ಎಂದು ಈಗರ್ಥವಾಗಿದೆ ಎಂದಿದ್ದಾರೆ.
ಮನು ಮತ್ತು ನನ್ನ ನಡುವೆ ಏನೇ ಇದ್ದರೂ ಅದು ವೈಯಕ್ತಿಕ ವಿಚಾರ. ಸಿನಿಮಾಗೆ ತೊಂದರೆ ಕೊಡುವ ಉದ್ದೇಶದಿಂದ ಆ ರೀತಿ ಸಂದೇಶ ಕಳುಹಿಸಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ನನ್ನ ಸಂದೇಶದಿಂದ ಚಿತ್ರಕ್ಕೆ ತೊಂದರೆಯಾಗುತ್ತಿದೆ. ನಿರ್ಮಾಪಕರು ವಕೀಲರನ್ನು ಕರೆಸಿದ್ದರು.
ಎಲ್ಲರೂ ಕುಳಿತು ನಮನಮ ತಪ್ಪುಗಳನ್ನು ಅರ್ಥ ಮಾಡಿಸಿದ್ದಾರೆ. ಅಕಸಾತ್ ನಾನು ಸಾವನ್ನಪ್ಪಿದರೂ ಅದಕ್ಕೆ ಯಾರೂ ಕಾರಣರಲ್ಲ. ಮನು ಆಗಲಿ, ನಿರ್ಮಾಪಕರಾಗಲಿ, ಸಿನಿಮಾ ತಂಡವಾಗಲಿ ಅಥವಾ ಸ್ನೇಹಿತರಾಗಲಿ ಕಾರಣ ಅಲ್ಲ. ಇದು ನನ್ನ ಸ್ವಂತ ನಿರ್ಧಾರವಾಗಿರುತ್ತದೆ ಎಂದು ಹೇಳಿದ್ದು ಜೊತೆಯಲ್ಲಿ ಕುಲದಲ್ಲಿ ಕೀಳ್ಯಾವುದೋ ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ.ಇದು ತೀವ್ರ ಕುತೂಹಲ ಕೆರಳಿಸಿದೆ.
ಈ ನಡುವೆ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಮನು ಅವರನ್ನು ವಿಚಾರಣೆಗೊಳಪಡಿಸಿದ್ದು, ಆತನ ಮೊಬೈಲ್ ಕೂಡ ಪರಿಶೀಲನೆ ನಡೆಸಿದ್ದು, ಇಬ್ಬರ ನಡುವೆ ವಿನಿಮಯವಾಗಿರುವಂತಹ ಸಂದೇಶಗಳನ್ನು ತಪಾಸಣೆಗೊಳಪಡಿಸಿದ್ದಾರೆ. ಕಾಲ್ ರೆಕಾರ್ಡ್ ಹಾಗೂ ಇತರ ಮಾಹಿತಿಗಳ ಬೆನ್ನತ್ತಿದ್ದಾರೆ. ಜೊತೆಗೆ ಸಂತ್ರಸ್ತೆಯ ಹೇಳಿಕೆಗಳನ್ನು ದಾಖಲಿಸಿದ್ದಾರೆ.
ಬಂಧನಕ್ಕೂ ಮುನ್ನ ಹೇಳಿಕೆ ನೀಡಿದ್ದ ಮನು ನನ್ನ ಮತ್ತು ಮಿಂಚು ನಡುವೆ ಪರಿಚಯ ಇದ್ದಿದ್ದು ಆತೀಯತೆ ಇದ್ದಿದ್ದು ನಿಜ. ಆದರೆ ನನ್ನ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣ ಸತ್ಯಕ್ಕೆ ದೂರವಾಗಿದೆ ಎಂದಿದ್ದಾರೆ.
ನಾನು ನಟಿಸಿರುವ ಕುಲದಲ್ಲಿ ಕೀಳ್ಯಾವುದೋ ಸಿನಿಮಾಗೆ ತೊಂದರೆ ನೀಡಬೇಕು ಎಂಬ ಕಾರಣಕ್ಕಾಗಿಯೇ ಈ ರೀತಿಯ ಪ್ರಕರಣ ದಾಖಲಿಸಲಾಗಿದೆ. ಇದರ ಹಿಂದೆ ಯಾರೆಲ್ಲಾ ಇದ್ದಾರೆ ಎಂಬುದಕ್ಕೆ ಸಾಕ್ಷಿ ಸಮೇತ ತಾವು ಜನರ ಮುಂದೆ ಬರುವುದಾಗಿ ತಿಳಿಸಿದರು.