ಬೆಂಗಳೂರು,ಸೆ.19- ಶಾಸಕ ಮುನಿರತ್ನ ವಿರುದ್ಧ ಮತ್ತಷ್ಟು ಗಂಭೀರ ಆರೋಪಗಳು ಕೇಳಿಬಂದಿದ್ದು, ಮಹಿಳೆಯೊಬ್ಬರು ತಮನ್ನು ಹೆದರಿಸಿ, ಬೆದರಿಸಿ ಅತ್ಯಾಚಾರ ಮಾಡಿರುವುದಾಗಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ಜೊತೆಗೆ ಎಚ್ಐವಿ ಪೀಡಿತ ಮಹಿಳೆಯೊಬ್ಬರನ್ನು ಬಳಸಿ ರಾಜಕೀಯ ಪ್ರತಿಸ್ಪರ್ಧಿಗೆ ಹನಿಟ್ರ್ಯಾಪ್ ಮಾಡಿರುವ ಗಂಭೀರ ಮಾಹಿತಿಯನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಯಶವಂತಪುರದ ಸಮಾಜಸೇವಕಿ ಸುಮಾರು 40 ವರ್ಷದ ಮಹಿಳೆ ಯೊಬ್ಬರು ನೀಡಿರುವ ದೂರಿನ ಆಧಾರದ ಮೇರೆಗೆ ರಾಮನಗರ ಜಿಲ್ಲೆಯ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಐಪಿಸಿ ಸೆಕ್ಷನ್ 354 ಎ (ಲೈಂಗಿಕ ದೌರ್ಜನ್ಯ),354 ಸಿ (ಮಹಿಳೆಯರ ಇಚ್ಛೆಗೆ ವಿರುದ್ಧವಾಗಿ ಚಿತ್ರೆಕರಣ) 376 ಎನ್ (2) (ಸರ್ಕಾರಿ ಸೇವಕನಿಂದ ಅತ್ಯಾಚಾರ), 506 ( ಜೀವ ಬೆದರಿಕೆ), 504 ( ಉದ್ದೇಶಪೂರ್ವಕವಾಗಿ ನಿಂದನೆ) 120(ಬಿ) ಅಪರಾಧಿಕ ಒಳಸಂಚು, ( 149 ) ಕಾನೂನು ಬಾಹಿರ ಸಭೆ, 406 ( ನಂಬಿಕೆ ದೋಹ) , 384 ( ಸುಲಿಗೆ) 308 ( ಹತ್ಯೆ ಮಾಡಲು ಪ್ರಯತ್ನ,) ಐಟಿ ಆಕ್ಟ್ 66,66 ಇ ಸೆಕ್ಷನ್ಗಳನ್ನು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಇದೇ ಪ್ರಕರಣದಲ್ಲಿ ವಿಜಯ್ ಕುಮಾರ್ (ಎ2), ಸುಧಾಕರ (ಎ3), ಕಿರಣ್ ಕುಮಾರ್ (ಎ4), ಲೋಹಿತ್ ಗೌಡ (ಎ5), ಮಂಜುನಾಥ (ಎ6), ಲೋಕಿ (ಎ7) ಎಂಬವರ ವಿರುದ್ಧವೂ ಎಫ್ಐಆರ್ ದಾಖಲಾಗಿದೆ.
ಬಿಬಿಎಂಪಿ ಮಾಜಿ ಸದಸ್ಯ ವೇಲುನಾಯ್ಕರ್ ಎಂಬುವವರಿಗೆ ಜಾತಿ ನಿಂದನೆ, ಪ್ರಾಣ ಬೆದರಿಕೆ ಒಡ್ಡಿದ ಆರೋಪದಲ್ಲಿ ಬಂಧನಕ್ಕೊಳಗಾಗಿ ನ್ಯಾಯಾಂಗ ಬಂಧನದಲ್ಲಿರುವ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ವಿರುದ್ಧ ನಿನ್ನೆ ಅತ್ಯಾಚಾರ ಪ್ರಕರಣ ದಾಖಲಾಗಿದೆ.
ರಾಮನಗರ ಉಪವಿಭಾಗದ ಡಿವೈಎಸ್ಪಿ ದಿನಕರ್ ಶೆಟ್ಟಿ ಪ್ರಕರಣದ ತನಿಖೆ ಕೈಗೊಂಡಿದ್ದಾರೆ. ತನಿಖೆ ಮುಗಿದ ನಂತರ ಮುನಿರತ್ನ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಈ ಸಂಜೆಗೆ ತಿಳಿಸಿದ್ದಾರೆ.
ದೂರು ನೀಡಿರುವ ಮಹಿಳೆಯನ್ನು ಮುನಿರತ್ನ ಸಂಪರ್ಕಿಸಿ, ಸ್ನೇಹ ಬೆಳೆಸಿ, ಅನುಚಿತವಾಗಿ ನಡೆದುಕೊಳ್ಳುತ್ತಿದ್ದರು ಎಂದು ದೂರಲಾಗಿದೆ.
ಗೋಡನ್ವೊಂದಕ್ಕೆ ಕರೆಸಿಕೊಂಡ ಮುನಿರತ್ನ ಮಹಿಳೆಯನ್ನು ಬೆದರಿಸಿ ಅತ್ಯಾಚಾರ ಮಾಡಿದ್ದಲ್ಲದೆ, ತಾನು ಹೇಳಿದಂತೆ ಕೇಳಬೇಕು ಮತ್ತು ಈ ವಿಚಾರವನ್ನು ಹೊರಗೆ ಎಲ್ಲೂ ಹೇಳಬಾರದು ಎಂದು ಬೆದರಿಕೆ ಹಾಕಿದ್ದಾನೆ. ಒಂದು ವೇಳೆ ತನ್ನ ವಿರುದ್ಧ ನಡೆದುಕೊಂಡರೆ ನಮಿಬ್ಬರ ಸರಸ ಸಲ್ಲಾಪದ ದೃಶ್ಯಗಳನ್ನು ಸಿಸಿಟಿವಿಯಲ್ಲಿ ಚಿತ್ರೀಕರಿಸಲಾಗಿದ್ದು, ಅದನ್ನು ಬಹಿರಂಗಪಡಿಸುವುದಾಗಿ ಬೆದರಿಸಿದ್ದರು ಎಂದು ಮಹಿಳೆ ದೂರಿದ್ದಾರೆ.
ದೂರಿನಲ್ಲಿ ಏನಿದೆ? :
ಕೋವಿಡ್ ಸಂದರ್ಭದಲ್ಲಿ ಇಬ್ಬರ ನಡುವೆ ಆತೀಯತೆ ಬೆಳೆದಿತ್ತು. ಆಗ್ಗಾಗೆ ವಿಡಿಯೋ ಕಾಲ್ ಮಾಡಿ ಮಾತನಾಡುತ್ತಿದ್ದರು. ನಗ್ನವಾಗಿ ಇರುವಂತೆ ಕರೆ ಮಾಡಿ ಒತ್ತಾಯಿಸಿದಾಗ ಅದನ್ನು ನಿರಾಕರಿಸ್ದೆಿ. ಒಮೆ ಸ್ಥಳವೊಂದಕ್ಕೆ ಬರಲು ಹೇಳಿದ್ದರು. ನಾನು ಅಲ್ಲಿಗೆ ಹೋದಾಗ ತಬ್ಬಿಕೊಳ್ಳಲು ಮುಂದಾಗಿದ್ದರು. ಅದಕ್ಕೆ ಆಕ್ಷೇಪಿಸಿದಾಗ ರಾಜಕೀಯಕ್ಕೆ ಬರಬೇಕಾದರೆ ಇವೆಲ್ಲಾ ಕಾಮನ್ ಎಂದು ಹೇಳಿದ್ದರು.
ಬಳಿಕ ಅತ್ಯಾಚಾರವೆಸಗಿದ್ದು, ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿರುವ ವಿಡಿಯೋವನ್ನು ಎಡಿಟ್ ಮಾಡಿ ಹಂಚುತ್ತೇನೆ ಎಂದು ಹೆದರಿಸಿದ್ದರು. ವಿಡಿಯೋ ಇಟ್ಟುಕೊಂಡು ಹಲವು ಬಾರಿ ಮುನಿರತ್ನ ಆತ್ಯಾಚಾರವೆಸಗಿರುವುದಾಗಿ ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.
ಎಫ್ಐಆರ್ನಲ್ಲಿನ ಅಂಶಗಳು :
1) ಕೋವಿಡ್ ಸಮಯದಲ್ಲಿ ನನ್ನ ಸೇವೆ ಗುರುತಿಸಿ ಮುನಿರತ್ನ ಕರೆ ಮಾಡಿದ್ದರು
2) ನಮಸ್ತೆ ಲೀಡರ್ ನಾನು ನಿಮ ಭಾಗದ ಶಾಸಕ, ಬಂದು ನನ್ನನ್ನು ಭೇಟಿ ಮಾಡಿ ಎಂದಿದ್ದ ಮುನಿರತ್ನ
3) ಅದರಂತೆ ಭೇಟಿ ಬಳಿಕ ಇಬ್ಬರ ನಡುವೆ ಆತೀಯತೆ ಬೆಳೆದಿತ್ತು
4) ಆಗಾಗ ವೀಡಿಯೊ ಕಾಲ್ ಮೂಲಕ ಮಾತನಾಡುತ್ತಿದ್ದರು
5) ಈ ವೇಳೆ ನಗ್ನವಾಗಿ ಕರೆ ಮಾಡುವಂತೆ ಒತ್ತಾಯಿಸಿದಾಗ ನಾನು ನಿರಾಕರಿಸ್ದೆಿ
6) ಸ್ಪಾಟ್ ಒಂದಕ್ಕೆ ಬರುವುದಕ್ಕೆ ಹೇಳಿ ನಿನ್ನ ನೋಡಿದರೆ ಮೈ ಜುಮ್ ಎನಿಸುತ್ತೆ ಎಂದೇಳಿ ತಬ್ಬಿಕೊಳ್ಳಲು ಮುಂದಾದರು
7) ನಾನು ಆಕ್ಷೇಪಿಸಿದಾಗ ರಾಜಕೀಯಕ್ಕೆ ಬರಬೇಕಾದರೆ ಇದೆಲ್ಲಾ ಕಾಮನ್ ಎಂದರು
8) ನಾನು ಕಿರುಚಿಕೊಳ್ಳುತ್ತೇನೆ ಎಂದಾಗ ನಾನು ಶಾಸಕನಿದ್ದೇನೆ, ಅಪಾರ ಜನಬೆಂಬಲವಿದೆ ಸುಮನಿದ್ದರೆ ಸರಿ, ಇಲ್ಲವಾದರೆ ನಿನ್ನ ವಿರುದ್ಧವೇ ಕಂಪ್ಲೆಂಟ್ ನೀಡುತ್ತೇನೆ ಎಂದು ಹೆದರಿಸಿ ಅತ್ಯಾಚಾರ ಎಸಗಿದರು
9) ಅತ್ಯಾಚಾರದ ಬಳಿಕ ಈ ರೂಂನಲ್ಲಿ ಸೀಕ್ರೆಟ್ ಕ್ಯಾಮೆರಾಗಳನ್ನು ಇಟ್ಟಿದ್ದು, ಎಲ್ಲಾ ದೃಶ್ಯಗಳು ಸೆರೆಯಾಗಿವೆ, ಅವುಗಳನ್ನು ಎಡಿಟ್ ಮಾಡಿ ಹಂಚುತ್ತೇನೆ, ಹೇಳಿದಂತೆ ಕೇಳಬೇಕು ಎಂದು ಬಲವಂತಪಡಿಸಿ ಹನಿಟ್ರ್ಯಾಪ್ ಮಾಡಲು ಬಳಸಿಕೊಂಡರು
10) ಜತೆಗೆ ಚಿತ್ರೀಕರಿಸಿದ ವಿಡಿಯೊಗಳನ್ನು ಟಿವಿಯಲ್ಲಿ ಹಾಕಿ ನನಗೆ ತೋರಿಸಿದ್ದಾರೆ
11) ಇದೇ ವಿಡಿಯೋ ಇಟ್ಟುಕೊಂಡು 2020 ರಿಂದ 2022 ರ ಅವಧಿಯಲ್ಲಿ ನಿರಂತರ ಅತ್ಯಾಚಾರ ನಡೆಸಿದ್ದಾರೆ. ಇದೇ ವೇಳೆ ಹನಿಟ್ರ್ಯಾಪ್ಗೂ ಬಳಕೆ ಮಾಡಿಕೊಂಡಿದ್ದಾರೆ
12) ಹೇಳಿದಂತೆ ಕೇಳಲಿಲ್ಲ ಎಂದರೆ ಗಂಡ ಮತ್ತು ಮಕ್ಕಳಿಗೆ ವಿಡಿಯೊ ತೋರಿಸುವುದಾಗಿ ಬೆದರಿಕೆ ಹಾಕಿದ್ದಾರೆ.
13) ತನಗೆ ಪರಿಚಯ ಇರುವ ಮತ್ತೊಬ್ಬ ಮಹಿಳೆ ಜತೆ ಸೇರಿ ಆತ ಹೇಳಿದವರನ್ನು ಹನಿಟ್ರ್ಯಾಪ್ ಮಾಡಿಸಿದ್ದಾರೆ
14) ಮರ್ಯಾದೆ ಹಾಗು ಪ್ರಾಣಕ್ಕೆ ಅಂಜಿ ಶಾಸಕ ಮುನಿರತ್ನ ಹೇಳಿದಂತೆ ಕೇಳಿದ್ದೇನೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
15) ಮಹಿಳಾ ಕಾರ್ಪೊರೇಟರ್ ಅವರ ಪತಿಗೆ ಎಚ್ಐವಿ ಪೀಡಿತ ಮಹಿಳೆಯ ಮೂಲಕ ಹನಿಟ್ರ್ಯಾಪ್ ಮಾಡಿಸಿದ್ದರು. ಅವರ ಮಗನಿಗೂ ಹನಿಟ್ರ್ಯಾಪ್ ಮಾಡುವ ಪ್ರಯತ್ನ ಮಾಡಿದ್ದರು.
16) ಮುನಿರತ್ನ ಅವರ ವಿರುದ್ಧವಾಗಿ ಧ್ವನಿಯೆತ್ತಿದ ಮಹಿಳೆಯೊಬ್ಬರ ತೇಜೋವಧೆಗಾಗಿ ಷಡ್ಯಂತ್ರ ರೂಪಿಸಿದ್ದರು. ಹಲವರನ್ನು ಗುಂಪುಗೂಡಿಸಿ ಪ್ರವಾಸ ಮಾಡುವಂತೆ ಪುಸಲಾಯಿಸಿದ್ದು, ನಾನಾ ರೀತಿಯ ದೃಶ್ಯಗಳನ್ನು ಚಿತ್ರೀಕರಿಸಿದ್ದಾರೆ.
17) ಮಾಜಿ ಶಾಕಸಕರೊಬ್ಬರನ್ನು ಹನಿಟ್ರ್ಯಾಪ್ ಮಾಡಲು ಪ್ರಯತ್ನಿಸಿದ್ದರು ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಅತ್ಯಾಚಾರ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ರಾಮನಗರ ಉಪವಿಭಾಗದ ಪೊಲೀಸರು ಸಂತ್ರಸ್ತ ಮಹಿಳೆಯನ್ನು ಕೃತ್ಯ ನಡೆದ ನಗರದಲ್ಲಿನ ಗೋಡನ್ಗೆ ಕರೆತಂದು ಸ್ಥಳ ಮಹಜರು ನಡೆಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ.