ಬೆಂಗಳೂರು, ಫೆ.27-ಕಾಂಗ್ರೆಸ್‌ನಲ್ಲಿ ದಿನೇ ದಿನೇ ಒಳಜಗಳ ಹೆಚ್ಚಾಗುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ ನಡೆಯಲಿದೆ. ಅದಕ್ಕೆ ಈಗ ನಡೆಯುತ್ತಿರುವ ಬೆಳವಣಿಗೆಗಳು ಮುನ್ಸೂಚನೆಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೇಂದ್ರ ಗೃಹ ಸಚಿವ ಅಮಿತ್ ಷಾ ಜತೆ ಡಿಕೆಶಿ ವೇದಿಕೆ ಹಂಚಿಕೊಂಡಿದ್ದಕ್ಕೆ ಕಾಂಗ್ರೆಸ್ ನಲ್ಲಿ ಆಕ್ಷೇಪ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಶಿವರಾತ್ರಿಯ ಸಂದರ್ಭದಲ್ಲಿ ಇಶಾ ಫೌಂಡೇಶನ್ ಕಾರ್ಯಕ್ರಮದಲ್ಲಿ ಡಿಕೆಶಿ ಭಾಗವಹಿಸಿದ್ದರು. ಅದೊಂದು ಧಾರ್ಮಿಕ ಕಾರ್ಯಕ್ರಮ, ಶಿವರಾತ್ರಿ ಸಂದರ್ಭದಲ್ಲಿ ಹೋಗಿದ್ದಾರೆ. ಅದಕ್ಕೆ ಡಿಕೆಶಿ ಅವರೇ ಉತ್ತರ ಕೊಡಬೇಕು ಎಂದು ಹೇಳಿದರು.
ಬಿಜೆಪಿ ನಿಯೋಗದಿಂದ ಸಿಎಂ ಭೇಟಿ ವಿಚಾರವಾಗಿ ಮಾತನಾಡಿ, ಬೆಂಗಳೂರು ಸೇರಿ ರಾಜ್ಯದ ಎಲ್ಲ ಕ್ಷೇತ್ರಗಳ ಶಾಸಕರಿಗೂ ಅನುದಾನ ಬೇಕಾಗಿದೆ. ಬೆಂಗಳೂರಿನಲ್ಲಿ ಗ್ರೇಟರ್ ಬೆಂಗಳೂರು ಯೋಜನೆ ಕೈಬಿಡಬೇಕು. ಬಿಬಿಎಂಪಿ ಚುನಾವಣೆ ನಡೆಸಬೇಕು.
ಶಾಸಕರ ಕ್ಷೇತ್ರಗಳಿಗೆ ಅನುದಾನ ಕೊಡಬೇಕು. ಈ ಎಲ್ಲಾ ವಿಚಾರ ಇಟ್ಟುಕೊಂಡು ನಾಳೆ ಸಿಎಂ ಅವರನ್ನು ನಾವು ಬೆಳಗ್ಗೆ 10.30 ಕ್ಕೆ ಕಾವೇರಿ ನಿವಾಸದಲ್ಲಿ ಭೇಟಿ ಮಾಡಲಿದ್ದೇವೆ ಎಂದರು.
ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಗೃಹ ಸಚಿವ ಅಮಿತ್ ಷಾ ಜತೆ ಡಿಕೆಶಿ ವೇದಿಕೆ ಹಂಚಿಕೊಂಡಿದ್ದಕ್ಕೆ ಆಕ್ಷೇಪ ವಿಚಾರವಾಗಿ ಡಿ.ಕೆ ಶಿವಕುಮಾರ್ ಅವರು, ಅಮಿತ್ ಷಾ ಜತೆ ರಾಜಕೀಯ ವೇದಿಕೆ ಹಂಚಿಕೊಳ್ಳಲಿಲ್ಲ.ರಾಜಕೀಯೇತರ ವೇದಿಕೆಯಲ್ಲಿ ಪಾಲ್ಗೊಂಡಿದ್ದರು. ಅವರು, ಸದ್ಗುರು ಆಹ್ವಾನ ಮೇರೆಗೆ ಹೋಗಿದ್ದಾರೆ. ಅದಕ್ಕೆ ಕಾಂಗ್ರೆಸ್ ನಲ್ಲಿ ಆಕ್ಷೇಪ ಬರುತ್ತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಡಿ. ಕೆ ಶಿವಕುಮಾರ್ ಕಾಂಗ್ರೆಸ್ ಅಧ್ಯಕ್ಷರು, ಆದರೆ ಆದ್ರೆ ಅಮಿತ್ ಷಾ ಬಿಜೆಪಿ ಅಧ್ಯಕ್ಷರಲ್ಲ.ಡಿಕೆಶಿಯವರನ್ನು ಕಾಂಗ್ರೆಸ್ ಒಳಗೇ ಟಾರ್ಗೆಟ್ ಮಾಡಲಾಗುತ್ತಿದೆ. ಅವರನ್ನು ಗುರಿಯಾಗಿಟ್ಟುಕೊಂಡು ಡಿ ಅಂಚಿಗೆ ಕಳಿಸುವ ಕೆಲಸ ಕಾಂಗ್ರೆಸ್ ನಲ್ಲಿ ಆಗುತ್ತಿದೆ. ಅವರೊಬ್ಬ ಹಿಂದೂವಾದಿ ಅನ್ನೋದು ಸಾಬೀತಾಗಿದೆ.ಹಾಗಾಗಿಯೇ ಕಾಂಗ್ರೆಸ್ ನಲ್ಲಿ ಅವರನ್ನು ಅಂಚಿಗೆ ಸರಿಸುವ ಕೆಲಸ ಶುರುವಾಗಿದೆ ಎಂದು ಆರೋಪಿಸಿದರು.
ಅಮಿತ್ ಷಾ ಭೇಟಿ ಆದರೂ ಎಂಬ ಕಾರಣಕ್ಕಾಗಿಯೇ ಬಿಜೆಪಿ ಸೇರುತ್ತಾರೆ ಎಂಬು ಭಾವಿಸಬೇಕಾಗಿಲ್ಲ, ಡಿಕೆಶಿ ಬಿಜೆಪಿಗೆ ಬರುತ್ತಾರೆ ಎನ್ನುವುದು ಎನ್ನುವುದು ಊಹಾಪೋಹ ಅಷ್ಟೇ. ಆದರೆ ಆ ವಿಷಯವನ್ನು ತಳ್ಳಿ ಹಾಕಲೂ ಆಗುವುದಿಲ್ಲ. ಈ ಹಿಂದೆಯೂ ಈಥರದ ಬೆಳವಣಿಗೆ ಆಗಿದೆ.ಬಿಜೆಪಿಗೆ ಬರುತ್ತಾರೋ ಇಲ್ಲವೋ ಎನ್ನುವ ಪ್ರಶ್ನೆಗೆ ಡಿಕೆಶಿ ಅವರೇ ಉತ್ತರ ಕೊಡಬೇಕು ಎಂದು ಹೇಳಿದರು.