Saturday, November 8, 2025
Homeರಾಜ್ಯವಿಕೃತ ಕಾಮಿ ಉಮೇಶ್‌ರೆಡ್ಡಿಗೆ ಜೈಲಿನಲ್ಲಿ ರಾಜಾತಿಥ್ಯ

ವಿಕೃತ ಕಾಮಿ ಉಮೇಶ್‌ರೆಡ್ಡಿಗೆ ಜೈಲಿನಲ್ಲಿ ರಾಜಾತಿಥ್ಯ

ಬೆಂಗಳೂರು,ನ.8- ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ವಿಕೃತಕಾಮಿ ಉಮೇಶ್‌ರೆಡ್ಡಿ ಹಾಗೂ ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣದ ಆರೋಪಿ ತರುಣ್‌ರಾಜ್‌ಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಕಾರಾಗೃಹದಲ್ಲಿರುವ ಲಷ್ಕರ್‌ ಉಗ್ರನ ಕೈಯಲ್ಲಿ ಅಂಡ್ರಾ ಯಿಡ್‌ ಮೊಬೈಲ್‌ ಇರುವುದು ಸಹ ವಿಡಿಯೋದಲ್ಲಿದೆ. ಈ ಹಿಂದೆ ನಟ ದರ್ಶನ್‌ಗೆ ರಾಜಾತಿಥ್ಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಖಡಕ್‌ ಆದೇಶ ನೀಡಿತ್ತು. ಹೀಗಿದ್ದರೂ ಈ ಕಾರಾಗೃಹದಲ್ಲಿ ಖೈದಿ ಹಾಗೂ ವಿಚಾರಣಾ ಖೈದಿಗಳಿಗೆ ಮೊಬೈಲ್‌ ಜೊತೆಗೆ ಸೆಲ್‌ನಲ್ಲಿ ಟಿವಿ ವ್ಯವಸ್ಥೆ ಸೇರಿದಂತೆ ವಿಶೇಷ ಸೌಲಭ್ಯಗಳು ಲಭ್ಯವಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆೆ.

ನಟ ದರ್ಶನ್‌ ಅವರಿಗೆ ಕಾರಾಗೃಹದಲ್ಲಿ ಹಾಸಿಗೆ ಮತ್ತು ದಿಂಬು ಪಡೆಯಲು ಕಷ್ಟವಾಗುತ್ತಿರುವ ಸಂದರ್ಭದಲ್ಲಿ ವಿಕೃತಕಾಮಿ ಉಮೇಶ್‌ರೆಡ್ಡಿ ಜೈಲಿನೊಳಗೆ ಮೊಬೈಲ್‌ನಲ್ಲಿ ಮಾತನಾಡುತ್ತಿರುವುದು, ಟಿವಿ ವೀಕ್ಷಿಸುತ್ತಿರುವ ವಿಡಿಯೋ ಕಂಡು ಬಂದಿದೆ. ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ವಿಕೃತಕಾಮಿ ಉಮೇಶ್‌ರೆಡ್ಡಿ ಟಿವಿ ನೋಡುತ್ತಾ ಕೀಪ್ಯಾಡ್‌ ಮೊಬೈಲ್‌ಗಳನ್ನು ಇಟ್ಟುಕೊಂಡು ಮಾತನಾಡುತ್ತಿರುವ ವಿಡಿಯೋ ವೈರಲ್‌ ಆಗಿದೆ.

ಗೋಲ್‌್ಡ ಸಗ್ಲಿಂಗ್‌ ಪ್ರಕರಣದಲ್ಲಿ ಬಂಧಿತನಾಗಿರುವ ರನ್ಯಾರಾವ್‌ ಸ್ನೇಹಿತ ಆರೋಪಿ ತರುಣ್‌ರಾಜ್‌ ಕಾರಾಗೃಹದೊಳಗೆ ಟಿವಿ ನೋಡುತ್ತಾ ಬಿಂದಾಸ್‌‍ ಲೈಫ್‌ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿವೆ. ಜೈಲಿನಲ್ಲಿರುವ ಖೈದಿಗಳಿಗೆ ವಿಶೇಷ ಸೌಲಭ್ಯಗಳು ನೀಡದಂತೆ ಸುಪ್ರೀಂ ಕೋರ್ಟ್‌ ಸ್ಪಷ್ಟ ಸೂಚನೆ ನೀಡಿದ್ದರೂ ಸಹ ಈ ಆದೇಶವನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಉಲ್ಲಂಘನೆಯಾಗುತ್ತಿದೆ ಎಂಬ ದೂರು ಕೇಳಿ ಬಂದಿದ್ದು, ಇದೀಗ ಇವರಿಗೆ ಸೌಲಭ್ಯ ನೀಡಿರುವ ಜೈಲು ಅಧಿಕಾರಿಗಳಿಗೆ ಸಂಕಷ್ಟ ಎದುರಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕಾರಾಗೃಹಗಳ ಎಡಿಜಿಪಿ ದಯಾನಂದ ಅವರು ತನಿಖೆಗೆ ಆದೇಶಿಸಿದ್ದಾರೆ.

RELATED ARTICLES

Latest News