Friday, October 18, 2024
Homeರಾಷ್ಟ್ರೀಯ | Nationalಪ್ರಭಾವಿ ಕೈಗಾರಿಕೋದ್ಯಯಾದರೂ ಶತಕೋಟ್ಯಾಧೀಶರ ಪಟ್ಟಿಯಲ್ಲಿ ಎಂದೂ ಕಾಣಿಸಿಕೊಳ್ಳದ ರತನ್ ಟಾಟಾ

ಪ್ರಭಾವಿ ಕೈಗಾರಿಕೋದ್ಯಯಾದರೂ ಶತಕೋಟ್ಯಾಧೀಶರ ಪಟ್ಟಿಯಲ್ಲಿ ಎಂದೂ ಕಾಣಿಸಿಕೊಳ್ಳದ ರತನ್ ಟಾಟಾ

Ratan Tata controlled 30 companies in over 100 countries but never made it to any Billionaires List

ನವದೆಹಲಿ, ಅ.10- ನಿನ್ನೆ ನಿಧನರಾದ ಭಾರತದ ಉದ್ಯಮ ಕ್ಷೇತ್ರದ ದೈತ್ಯ ವ್ಯಕ್ತಿಯಾದ ರತನ್‌ ಟಾಟಾ ಅವರು ವಿಶ್ವದ ಅತ್ಯಂತ ಪ್ರಭಾವಿ ಕೈಗಾರಿಕೋದ್ಯಮಿಗಳಲ್ಲಿ ಒಬ್ಬರಾಗಿದ್ದರು. ಆದರೂ ಶತಕೋಟ್ಯಾಧೀಶರ ಪಟ್ಟಿಯಲ್ಲಿ ಎಂದೂ ಕಾಣಿಸಿಕೊಳ್ಳಲಿಲ್ಲ.

ಅವರು ಆರು ಖಂಡಗಳಲ್ಲಿ ನೂರಕ್ಕೂ ಅಧಿಕ ದೇಶಗಳಲ್ಲಿ 300ಕ್ಕೂ ಹೆಚ್ಚು ಕಂಪನಿಗಳ ನಿಯಂತ್ರಣ ಹೊಂದಿದ್ದರೂ ಕಪಟವಿಲ್ಲದ ಜೀವನ ನಡೆಸಿದವರು.ಬುಧವಾರ ರಾತ್ರಿ ಮುಂಬೈನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ 86 ವರ್ಷ ವಯಸ್ಸಿನ ರತನ್‌ ಟಾಟಾ ಅವರು, ತಮ ಘನತೆ ಮತ್ತು ಔದಾರ್ಯಕ್ಕಾಗಿ ಜಾತ್ಯತೀತ ಜೀವಂತ ಸಂತ ಎಂದೇ ಕರೆಸಿಕೊಂಡಿದ್ದರು.

1962ರಲ್ಲಿ ನ್ಯೂಯಾರ್ಕ್‌ ಇಥಾಕದ ಕಾರ್ನಲ್‌ ವಿಶ್ವವಿದ್ಯಾನಿಲಯದಿಂದ ಆರ್ಕಿಟೆಕ್ಚರ್‌ನಲ್ಲಿ ಬಿಎಸ್‌‍ಸಿ ಪದವಿ ಗಳಿಸಿದ ಬಳಿಕ ಟಾಟಾ ಅವರು ಕುಟುಂಬದ ಕಂಪನಿಗೆ ಸೇರ್ಪಡೆಯಾದರು.

ಪ್ರಾರಂಭದಲ್ಲಿ ತಮ ಉದ್ಯಮದ ಮಳಿಗೆಗಳಲ್ಲಿ ಕಾರ್ಯನಿರ್ವಹಿಸಿದ ಟಾಟಾ ಅವರು ಟಾಟಾ ಸಮೂಹದ ಅನೇಕ ವ್ಯವಹಾರಗಳಲ್ಲಿ ಅನುಭವ ಪಡೆದುಕೊಂಡು 1971ರಲ್ಲಿ ನ್ಯಾಷನಲ್‌ ರೇಡಿಯೋ ಮತ್ತು ಎಲೆಕ್ಟ್ರಾನಿಕ್‌್ಸ ಕಂಪನಿಯ ನೇತೃತ್ವ ವಹಿಸಿಕೊಂಡರು.

ಬಳಿಕ 1991ರಲ್ಲಿ ತಮ ದೊಡ್ಡಪ್ಪ, ಅರ್ಧಶತಮಾನಕ್ಕೂ ಹೆಚ್ಚು ಕಾಲ ಟಾಟಾ ಸಮೂಹದ ಅಧ್ಯಕ್ಷರಾಗಿದ್ದ ಜೆಆರ್‌ಡಿ ಟಾಟಾ ಅವರಿಂದ ಟಾಟಾ ಸಮೂಹದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.

ಅದು ಭಾರತವು ತನ್ನ ಆರ್ಥಿಕತೆಯನ್ನು ಮುಕ್ತಗೊಳಿಸಿದ ವರ್ಷವಾಗಿತ್ತು. 1868ರಲ್ಲಿ ಚಿಕ್ಕ ಜವಳಿ ಮತ್ತು ವ್ಯಾಪಾರ ಸಂಸ್ಥೆಯಾಗಿ ಆರಂಭಗೊಂಡಿದ್ದ ಟಾಟಾ ಸಮೂಹವನ್ನು ಉಪ್ಪಿನಿಂದ ಉಕ್ಕಿನವರೆಗೆ, ಕಾರುಗಳಿಂದ ಸಾಫ್‌್ಟವೇರ್‌ವರೆಗೆ, ವಿದ್ಯುತ್‌ ಘಟಕಗಳಿಂದ ಏರ್‌ಲೈನ್‌್ಸವರೆಗೆ ಹರಡಿಕೊಂಡ ಜಗತ್ತಿನ ಅತ್ಯಂತ ಶಕ್ತಿಶಾಲಿ ಉದ್ಯಮ ಸಮೂಹವನ್ನಾಗಿ ಬೆಳೆಸುವಲ್ಲಿ ರತನ್‌ ಜೀ ಸಫಲರಾದರು.

ಅವರು ಎರಡು ದಶಕಕ್ಕೂ ಅಧಿಕ ಕಾಲ ಟಾಟಾ ಸಮೂಹದ ಪ್ರಮುಖ ನಿಯಂತ್ರಕ ಸಂಸ್ಥೆ ಟಾಟಾ ಸನ್ಸ್ ನ ಅಧ್ಯಕ್ಷರಾಗಿದ್ದರು. ಈ ಅವಧಿಯಲ್ಲಿ ಅವರು ಅತ್ಯಂತ ಪರಿಣಾಮಕಾರಿಯಾಗಿ ಉದ್ಯಮ ಸಮೂಹವನ್ನು ವಿಸ್ತರಿಸಿದರು.

2000ನೇ ಇಸವಿಯಲ್ಲಿ ಲಂಡನ್‌ ಮೂಲದ ಟೆಟ್ಲಿ ಟೀ ಕಂಪನಿಯನ್ನು 431.1 ದಶಲಕ್ಷ ಅಮೆರಿಕ ಡಾಲರ್‌ಗಳಿಗೆ, ದಕ್ಷಿಣ ಕೊರಿಯಾದ ಟ್ರಕ್‌ ತಯಾರಿಕ ಸಂಸ್ಥೆ ಡೇವೂ ಮೋಟಾರ್‌ರ‍ಸನನ್ನು 2004ರಲ್ಲಿ 102 ದಶಲಕ್ಷ ಡಾಲರ್‌ಗಳಿಗೆ, ಆಂಗ್ಲೋ-ಡಚ್‌ ಉಕ್ಕು ಉತ್ಪಾದಕ ಕಂಪನಿ ಕೋರಸ್‌‍ ಗ್ರೂಪ್‌ನ್ನು 11.3 ಶತಕೋಟಿ ಡಾಲರ್‌ಗಳಿಗೆ ಉನ್ನತ ಕಾರ್‌ ಬ್ರಾಂಡ್‌ಗಳಾದ ಜಾಗ್ವಾರ್‌ ಮತ್ತು ಲ್ಯಾಂಡ್‌ಓವರ್‌ನ್ನು ಫೋರ್ಡ್‌ ಮೋಟಾರ್‌ ಕಂಪನಿಯಿಂದ 2.3 ಶತಕೋಟಿ ಡಾಲರ್‌ ಪಾವತಿಸಿ ಸ್ವಾಧೀನ ಪಡಿಸಿಕೊಂಡರು.

ಭಾರತದ ಅತ್ಯಂತ ಯಶಸ್ವಿ ಉದ್ಯಮ ನಾಯಕರಷ್ಟೇ ಅವರು ತಮ ದಾನ- ಧರ್ಮಗಳ ಚಟುವಟಿಕೆಗಳಿಗೂ ಹೆಸರುವಾಸಿಯಾದವರು. ದಾನ, ಧರ್ಮಗಳಲ್ಲಿ ಅವರ ವೈಯಕ್ತಿಕ ಪಾಲ್ಗೊಳ್ಳುವಿಕೆ ತೀರ ಮುಂಚೆಯೇ ಆರಂಭವಾಯಿತು.1970ರ ದಶಕದಲ್ಲಿ ಅವರು ಆಗಾಖಾನ್‌ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜು ಯೋಜನೆಯನ್ನು ಆರಂಭಿಸಿದರು. ಈ ಮೂಲಕ ಭಾರತದ ಪ್ರಮುಖ ಆರೋಗ್ಯ ಸಂಸ್ಥೆಗಳಲ್ಲಿ ಒಂದಕ್ಕೆ ಅಸ್ತಿಭಾರ ಹಾಕಿದರು.

1991ರಲ್ಲಿ ಟಾಟಾ ಸನ್ಸ್ ನ ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ ಟಾಟಾ ರವರ ದಾನ, ಧರ್ಮಗಳಿಗೆ ಹೊಸ ವೇಗ ದೊರಕಿತು. ಅವರು ತಮ ಮುತ್ತಾತ ಜೆಮ್‌ಶೆಡ್‌ ಜೀ ಅವರು ಸ್ಥಾಪಿಸಿದ್ದ ಟಾಟಾ ಟ್ರಸ್ಟ್‌ ಅನ್ನು ಕ್ರಿಯಾಶೀಲವಾಗಿ ಮುನ್ನೆಡೆಸಿದರು.ಟಾಟಾ ಇನ್‌ಸ್ಟಿಟ್ಯೂಟ್‌ ಆಫ್‌ ಸೋಷಿಯಲ್‌ ಸೈನ್ಸಸ್‌‍ನಂತಹ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಪ್ರಮುಖ ಸಾಮಾಜಿಕ ಅಗತ್ಯತೆಗಳನ್ನು ಪೂರೈಸಿದರು ಮತ್ತು ಭಾರತದಾದ್ಯಂತ ಶೈಕ್ಷಣಿಕ ಚಟುವಟಿಕೆಗಳಿಗೆ ದೇಣಿಗೆ ನೀಡಿದರು.

ಶ್ರೇಷ್ಠತೆ ಮತ್ತು ಔನ್ನತ್ಯಕ್ಕೆ ಮಾದರಿಯಾಗಿದ್ದ ಟಾಟಾ ಅವರು ವಿವಾದಗಳಿಗೂ ಹೊರತಾಗಿರಲಿಲ್ಲ. 2008 ರಲ್ಲಿ 2 ಜಿ ಟೆಲಿಕಾಂ ಪರವಾನಗಿ ಹಗರಣದಲ್ಲಿ ಅವರ ಸಂಸ್ಥೆ ನೇರವಾಗಿ ಭಾಗಿಯಾಗಿರದಿದ್ದರೂ ಲಾಬಿಗಾರ್ತಿ ನೀರಾ ರಾಡಿಯಾ ಅವರೊಂದಿಗಿನ ದೂರವಾಣಿ ಸಂಭಾಷಣೆ ಪ್ರಕರಣದಲ್ಲಿ ಅವರನ್ನು ವಿವಾದಕ್ಕೆಳೆಯಲಾಯಿತು. ಬಳಿಕ ಅವರು ನಿರ್ದೋಷಿ ಎಂಬದು ಸಾಬೀತಾಯಿತು.

2012 ರಲ್ಲಿ ಟಾಟಾ ಅವರು ತಮ ಡೆಪ್ಯುಟಿ ಆಗಿದ್ದ ಸೈರಸ್‌‍ ಮಿಸ್ತ್ರಿ ಅವರಿಗೆ ಟಾಟಾ ಸನ್‌್ಸನ ನಿಯಂತ್ರಣದ ಅಧಿಕಾರ ವಹಿಸಿಕೊಟ್ಟರು. ಆದರೆ ಟಾಟಾ ಕುಟುಂಬದವರಲ್ಲದ ಮೊದಲ ಅಧ್ಯಕ್ಷರೊಂದಿಗೆ ಕಾರ್ಯ ನಿರ್ವಹಿಸಲು ಮಾಲೀಕರಿಗೆ ತೊಡಕಾಗಿ 2016 ರಲ್ಲಿ ಮಿಸ್ತ್ರಿ ಪದಚ್ಯುತಗೊಂಡರು.

ಷೇರುದಾರರಾದ ಟಾಟಾ ಅವರು ಮಿಸ್ತ್ರಿ ಅವರ ಅನೇಕ ನಿರ್ಧಾರಗಳಿಗೆ ಸಮತಿಸದೇ ಇದ್ದುದೇ ಮಿಸ್ತ್ರಿ ಅವರ ಪದಚ್ಯುತಿಗೆ ಕಾರಣ. ಚಿಕ್ಕ ಕಾರು ನ್ಯಾನೋ ತಯಾರಿಕೆಯಲ್ಲಿ ಉಂಟಾದ ನಷ್ಟದ ಕಾರಣ ನೀಡಿ ನಿಲ್ಲಿಸಲು ಮಿಸ್ತ್ರಿ ತೆಗೆದುಕೊಂಡ ನಿರ್ಧಾರವೂ ಸೇರಿತ್ತು.

ಮಿಸ್ತ್ರಿ ಅವರ ಪದಚ್ಯುತಿಯ ಬಳಿಕ ರತನ್‌ ಟಾಟಾ 2016 ರ ಅಕ್ಟೋಬರ್‌ನಲ್ಲಿ ಸಂಕ್ಷಿಪ್ತ ಅವಧಿಗೆ ಮಧ್ಯಂತರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಬಳಿಕ 2017 ರ ಜನವರಿಯಲ್ಲಿ ನಟರಾಜನ್‌ ಚಂದ್ರಶೇಖರನ್‌ ಅವರು ಟಾಟಾ ಸಮೂಹದ ಅಧ್ಯಕ್ಷರಾಗಿ ನೇಮಕಗೊಂಡ ನಂತರ ಪುನಃ ನಿವೃತ್ತಿಯಾದರು.

ಅಲ್ಲಿಂದೀಚೆಗೆ ರತನ್‌ ಟಾಟಾ ಅವರು ಟಾಟಾ ಸನ್ಸ್ ನ ಗೌರವ ಅಧ್ಯಕ್ಷರಾಗಿದ್ದರು. ಈ ಅವಧಿಯಲ್ಲಿ ಅವರು ಹೊಸ ಕ್ಯಾಪ್‌ ಧರಿಸಿ 21ನೇ ಶತಮಾನದ ಯುವ ಉದ್ಯಮಿಗಳಿಗೆ ನೆರವು ನೀಡತೊಡಗಿದರು. ಹೊಸಯುಗದ ತಂತ್ರಜ್ಞಾನ ಕೇಂದ್ರಿತ ನವೋದ್ಯಮಗಳಲ್ಲಿ ಬಂಡವಾಳ ಹೂಡಿಕೆ ಮಾಡಿ ದೇಶದ ಭವಿಷ್ಯ ರೂಪಿಸುವಲ್ಲಿ ಮಹತ್ವದ ಕೊಡುಗೆ ನೀಡಿದರು.

ತಮ ವ್ಯಕ್ತಿಗತ ಬಂಡವಾಳ ಹೂಡಿಕೆ ಕಂಪನಿ ಆರ್‌ಎನ್‌ಟಿ ಕ್ಯಾಪಿಟಲ್‌ ಅಡ್ವೈಸರ್‌ರ‍ಸ ಜೊತೆಗೆ ಟಾಟಾ ಅವರು ಓಲಾ ಎಲೆಕ್ಟ್ರಿಕ್‌, ಪೇಟಿಎಂ, ಸ್ನ್ಯಾಪ್‌ಡೀಲ್‌, ಲೆನ್‌್ಸಕಾರ್ಟ್‌ ಮತ್ತು ಝೀತೀಮ್‌ ಸೇರಿದಂತೆ 30 ಕ್ಕೂ ಅಧಿಕ ಸ್ಟಾರ್ಟ್‌-ಅಪ್‌ಗಳಲ್ಲಿ ಬಂಡವಾಳ ಹೂಡಿದರು.

ಕೆಲವು ತಿಂಗಳ ಹಿಂದೆ, ಮುಂಗಾರಿನ ಒಂದು ಸಂಜೆ ಟಾಟಾ ಅವರು ಮುಂಬೈ ನಗರದ ತಮ ಕೇಂದ್ರ ಕಚೇರಿಯ ಹೊರಗೆ ಯಾವುದೇ ನಿರಾಶ್ರಿತರಿಗೆ ಆಶ್ರಯ ಕಲ್ಪಿಸಬೇಕೆಂದು ಆದೇಶಿಸಿದ್ದರು. ಹಲವಾರು ಮಂದಿ ಈ ಸೂರಿನಡಿ ಆಶ್ರಯ ಪಡೆದರು. ಆದರೆ ಅವರ ಆಶ್ರಯದಾತ ಇನ್ನಿಲ್ಲವಾಗಿದ್ದಾರೆ.

RELATED ARTICLES

Latest News