ಬೆಂಗಳೂರು, ಮೇ 26 – ಫಾರ್ಮ್‌ಹೌಸ್‌ನಲ್ಲಿ ರೇವು ಪಾರ್ಟಿ ಮಾಡಿ ಸಿಕ್ಕಿಬಿದ್ದರುವ 31 ಮಂದಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ, ರಕ್ತ ಪರೀಕ್ಷೆ ಮಾಡಿಸಿ ದೇವನಹಳ್ಳಿ ಠಾಣೆ ಪೊಲೀಸರು ನೋಟೀಸ್ ನೀಡಿ ಬೇಲ್ ಮೇಲೆ ಕಳುಹಿಸಿದ್ದಾರೆ.
ಪ್ರಕರಣ ಸಂಬಂಧ ಮೂವರನ್ನು ಬಂಧಿಸಲಾಗಿದೆ. ಫಾರ್ಮ್‌ಹೌಸ್ ಮಾಲೀಕರಾಗಿ ರುವ ಶಿವಾಜಿನಗರದ ನಿವಾಸಿಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಲಾಗಿದೆ. ದೇವನಹಳ್ಳಿ ತಾಲ್ಲೂಕಿನ ಕನ್ನಮಂಗಲ ಸಮೀಪದ ಫಾರ್ಮ್‌ಹೌಸ್ ನ್ನು ಬರ್ತ್‌ಡೆ ಪಾರ್ಟಿಗೆಂದು ಪಡೆದು ರೇವು ಪಾರ್ಟಿ ಮಾಡಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.
ಮೊನ್ನೆ ರಾತ್ರಿ ಫಾರ್ಮ್‌ಹೌಸನಲ್ಲಿ ರೇವು ಪಾರ್ಟಿ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ನಿನ್ನೆ ಬೆಳಗಿನ ಜಾವ ಪೊಲೀಸರು ದಾಳಿ ಮಾಡಿದಾಗ ಜೋರಾಗಿ ಡಿಜೆ ಹಾಕಿಕೊಂಡು ಕುಣಿಯುತ್ತಾ ನಶೆಯಲ್ಲಿ ಪಾರ್ಟಿಯಲ್ಲಿ ತೊಡಗಿರುವುದು ಕಂಡು ಬಂದಿದೆ.
ಪೊಲೀಸರು ಾರ್ಮ್‌ಹೌಸನ್ನು ಪರಿಶೀಲನೆ ನಡೆಸಿದಾಗ ಗಾಂಜಾ,ಕೊಕೇನ್, ಚರಸ್ ಸೇರಿದಂತೆ ಇನ್ನಿತರ ಮಾದಕ ವಸ್ತುಗಳು ಪತ್ತೆಯಾಗಿದ್ದು, ಅವುಗಳನ್ನೇಲ್ಲಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಫಾರ್ಮ್‌ಹೌಸನ್ನು ಬುಕ್ ಮಾಡಿದ್ದವರು ಯಾರು, ಮಾದಕ ವಸ್ತುಗಳನ್ನು ಯಾರು ಸರಬರಾಜು ಮಾಡಿದ್ದಾರೆ, ಎಲ್ಲಿಂದ ತರಲಾಗಿದೆ ಎಂಬಿತ್ಯಾದಿ ಮಾಹಿತಿಗಳನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.