Tuesday, July 8, 2025
Homeರಾಷ್ಟ್ರೀಯ | Nationalಆರ್‌ಸಿಬಿ ಬೌಲರ್‌ ಯಶ್‌ ದಯಾಳ್‌ ವಿರುದ್ಧ ಅತ್ಯಾಚಾರ ಪ್ರಕರಣ

ಆರ್‌ಸಿಬಿ ಬೌಲರ್‌ ಯಶ್‌ ದಯಾಳ್‌ ವಿರುದ್ಧ ಅತ್ಯಾಚಾರ ಪ್ರಕರಣ

RCB cricketer Yash Dayal accused of sexual exploitation

ಗಾಜಿಯಾಬಾದ್‌, ಜು. 8 (ಪಿಟಿಐ)- ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಪರ ಆಡುವ ಕ್ರಿಕೆಟಿಗ ಯಶ್‌ ದಯಾಳ್‌ ವಿರುದ್ಧ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದೆ.

ಬಿಎನ್‌ಎಸ್‌‍ ಸೆಕ್ಷನ್‌ 69 (ವಿವಾಹದ ಸುಳ್ಳು ಭರವಸೆ ಸೇರಿದಂತೆ ಮೋಸದ ವಿಧಾನಗಳಿಂದ ಲೈಂಗಿಕ ಸಂಭೋಗ) ಅಡಿಯಲ್ಲಿ ಉತ್ತರ ಪ್ರದೇಶದ ಇಂದಿರಾಪುರಂ ಪೊಲೀಸ್‌‍ ಠಾಣೆಯಲ್ಲಿ ದಯಾಳ್‌ (27) ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಐಜಿಆರ್‌ಎಸ್‌‍ (ಸಮಗ್ರ ದೂರು ಪರಿಹಾರ ವ್ಯವಸ್ಥೆ) ಮೂಲಕ ಮಹಿಳೆಯೊಬ್ಬರು ಜೂನ್‌ 21 ರಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಗೆ ದೂರು ನೀಡಿದ ನಂತರ, ಐದು ವರ್ಷಗಳ ಕಾಲ ಸಂಬಂಧ ಹೊಂದಿದ್ದ ಕ್ರಿಕೆಟಿಗ ತನ್ನನ್ನು ದೈಹಿಕವಾಗಿ ಶೋಷಿಸಿದ್ದಾರೆ ಎಂದು ಆರೋಪಿಸಿ ಈ ಕ್ರಮ ಕೈಗೊಳ್ಳಲಾಗಿದೆ.

ಪ್ರತಿಕ್ರಿಯೆಗಳಿಗಾಗಿ ದಯಾಳ್‌ ಅವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಈ ಬಾರಿ ಆರ್‌ಸಿಬಿ ಐಪಿಎಲ್‌ ಕಪ್‌ ಗೆಲ್ಲುವಲ್ಲಿಯೂ ಯಶ್‌ ದಯಾಳ್‌ ಪ್ರಮುಖ ಪಾತ್ರ ವಹಿಸಿದ್ದರು. ಈ ಬೆಳವಣಿಗೆ ನಂತರ ಅವರು ಉತ್ತಮ ಕ್ರಿಕೆಟಿಗನಾಗಿ ರೂಪುಗೊಳ್ಳುವ ಸಾಧ್ಯತೆಯೂ ಇತ್ತು. ಆದರೆ, ಇದೀಗ ಅವರ ವಿರುದ್ಧ ರೇಪ್‌ ಕೇಸ್‌‍ ದಾಖಲಾಗಿರುವುದು ಅವರ ಭವಿಷ್ಯದ ಮೇಲೆ ಕರಿನೆರಳು ಬಿದ್ದಾಂತಾಗಿದೆ.

RELATED ARTICLES

Latest News