ಬೆಂಗಳೂರು, ಜೂ.4- ಆರ್‌ಸಿಬಿ ಗೆಲುವಿನ ಜೋಷ್‌ನಲ್ಲಿ ಅಭಿಮಾನಿಗಳು ನಿನ್ನೆ ಒಂದೇ ರಾತ್ರಿ ಕುಡಿದಿರುವ ಬಿಯರ್ ಲೆಕ್ಕ ಕೇಳಿದರೆ ನೀವು ಬೆಚ್ಚಿ ಬೀಳೋದಂತೂ ಗ್ಯಾರೆಂಟಿ. ಆರ್‌ಸಿಬಿ ಗೆಲುವಿನತ್ತ ಮುನ್ನುಗುತ್ತಿದ್ದಂತೆ ಅಭಿಮಾನಿಗಳು ಟೆಬಲ್ ಮುಂದಿದ್ದ ಬಿಯರ್ ಖಾಲಿ ಮಾಡುತ್ತಿದ್ದರಿಂದ ನಿನ್ನೆ ಒಂದೇ ರಾತ್ರಿ ರಾಜ್ಯದಲ್ಲಿ 1.48 ಲಕ್ಷ ಬಾಕ್ಸ್ ಬಿಯರ್ ಖಾಲಿಯಾಗಿದೆ.
ಆರ್‌ಸಿಬಿ ಗೆಲವು ಸಾಧಿಸುತ್ತಿದ್ದಂತೆ ಮತ್ತೆ ಹುಚ್ಚೆದ್ದು ಕುಣಿದ ಅಭಿಮಾನಿಗಳು ಕಂಡ ಕಂಡ ಬಾರ್‌ಗಳಿಗೆ ನುಗ್ಗಿ ಕಂಠಪೂರ್ತಿ ಬಿಯರ್, ಮದ್ಯ ಸೇವನೆ ಮಾಡಿ ಸಂಭ್ರಮಾಚರಣೆ ನಡೆಸಿದ್ದಾರೆ.
ಹೀಗಾಗಿ 30.66 ಕೋಟಿ ಮೌಲ್ಯದ ಬಿಯರ್ ಕುಡಿದು ಕುಪ್ಪಳಿಸಿದ್ದಾರೆ. ಇದರ ಜೊತೆಗೆ ಇಂದು ನಗರಕ್ಕೆ ಕೊಹ್ಲಿ ಬಳಗ ಆಗಮಿಸುತ್ತಿರುವುದರಿಂದ ಇಂದು ಕೂಡ ಬೊಂಬಾಟ್ ವ್ಯಾಪಾರವಾಗುವ ನಿರೀಕ್ಷೆಯಲ್ಲಿದ್ದಾರೆ ಮದ್ಯದ ವ್ಯಾಪಾರಿಗಳು.ಇದುವರೆಗೂ ಒಂದೇ ರಾತ್ರಿಯಲ್ಲಿ ಈ ಪ್ರಮಾಣದ ಬಿಯರ್ ಮಾರಾಟವಾಗಿರಲಿಲ್ಲ ಎನ್ನುವುದನ್ನು ವ್ಯಾಪಾರಿಗಳು ಖಚಿತಪಡಿಸಿದ್ದಾರೆ.