ಬೆಂಗಳೂರು, ಅ.16– ಆರ್‌ಎಸ್‌ಎಸ್‌ನ ಶತಮಾನೋತ್ಸವದಲ್ಲಿ ಭಾಗವಹಿಸಿದ್ದ ತಮ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಷೋಕಾಸ್ ನೋಟಿಸ್ ನೀಡಲಾಗಿದ್ದು, ಒಂದೆರಡು ದಿನಗಳಲ್ಲಿ ಅಮಾನತು ಗೊಳಿಸುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ ಇಲಾಖೆಯ ಖಾಯಂ ಸಿಬ್ಬಂದಿ ಹಾಗೂ ಅಧಿಕಾರಿಗಳು ಗಣವೇಷ ಧರಿಸಿ, ಶತಮಾನೋತ್ಸವದಲ್ಲಿ ಭಾಗವಹಿಸಿರುವುದನ್ನು ಗುರುತಿಸಲಾಗಿದೆ ಎಂದು ಹೇಳಿದರು.
ಸರ್ಕಾರಿ ನೌಕರರು ನಿಯಮಗಳನ್ನು ಸರಿಯಾಗಿ ಪಾಲಿಸದೇ ಇರುವ ಕಾರಣಕ್ಕೆ ತಾವು ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದೇನೆ. ಕೆಲವರು ಸರ್ಕಾರದ ಹಣವನ್ನು ಗುರುಪೂರ್ಣಿಮೆಗಾಗಿ ದೇಣಿಗೆ ನೀಡಿದ್ದಾರೆ. ಪಿಡಿಓಗಳಿಂದ 2 ಸಾವಿರ ರೂ. ಹಣ ಪಡೆದಿರುವ ಮಾಹಿತಿಯಿದೆ. ಅಧಿಕಾರಿಗಳು ತಮ ವೈಯಕ್ತಿಕ ಹಣವನ್ನು ದೇಣಿಗೆ ನೀಡಲಿ. ಆದರೆ ಸರ್ಕಾರದ ಹಣ ನೀಡಬಾರದು ಎಂದು ಎಚ್ಚರಿಕೆ ನೀಡಿದರು.
ಸರ್ಕಾರಿ ನೌಕರರು ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುವಂತಿಲ್ಲ ಎಂಬ ಸ್ಪಷ್ಟ ನಿಯಮ ಇದೆ. ಯಾರಿಗಾದರೂ ವೈಯಕ್ತಿಕವಾಗಿ ರಾಜಕೀಯ ಆಸೆ ಇದ್ದರೆ, ಸರ್ಕಾರಿ ಹುದ್ದೆಗೆ ರಾಜೀನಾಮೆ ಕೊಟ್ಟು ಹೋಗಲಿ ಎಂದು ಎಚ್ಚರಿಸಿದರು.
ಸರ್ಕಾರಿ ಶಾಲಾ ಆವರಣಗಳಲ್ಲಿ ಖಾಸಗಿ ಸಂಘಸಂಸ್ಥೆಗಳ ಚಟುವಟಿಕೆ ನಡೆಯಬಾರೆಂದು ಜಗದೀಶ್ ಶೆಟ್ಟರ್ ಕಾಲದಲ್ಲೇ ಸುತ್ತೋಲೆ ನಡೆಸಲಾಗಿತ್ತು. ನಾನು ಅದನ್ನೇ ಪ್ರತಿಪಾದಿಸಿದ್ದೇನೆ. ಸುತ್ತೋಲೆ ಹೊರಡಿಸಿದ ಬಿಜೆಪಿ ಸರ್ಕಾರ ಆರ್‌ಎಸ್‌ಎಸ್ ವಿರೋಧಿಯೇ ಎಂದು ಪ್ರಶ್ನಿಸಿದರು.
ಹಿಂದುತ್ವವನ್ನು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಸಿದ್ದರಾಮಯ್ಯ ಅವರು, ನಂಬದೇ ಇದ್ದರೂ ಡಿ.ಕೆ.ಶಿವಕುಮಾರ್ ಅವರಿಗೆ ನಂಬಿಕೆ ಜಾಸ್ತಿ. ಕೆಲವು ವಿಚಾರಗಳಲ್ಲಿ ನಾನು ನಂಬದೇ ಇದ್ದರೂ ನಮ ತಾಯಿ ನಂಬುತ್ತಾರೆ. ಯಾರ ನಂಬಿಕೆಗಳಿಗೂ ಧಕ್ಕೆಯಾಗಬಾರದು. ಹಾಗೆಯೇ ಸಂವಿಧಾನದ ಆಶಯಗಳು ಪಾಲನೆಯಾಗಬೇಕು ಎಂದರು.
ತಾವು ಈ ಹಿಂದೆ ಪಿಎಸ್‌ಐ ಹಗರಣವನ್ನು ಪ್ರಸ್ತಾಪಿಸುವಾಗಲೂ ಇದೇ ರೀತಿಯ ಟೀಕೆಗಳು ಕೇಳಿ ಬಂದಿದ್ದವು. ಈಗ ತಮ ವಿರುದ್ಧ ನಡೆಯುತ್ತಿರುವ ಷಡ್ಯಂತ್ರಗಳು ಅಚ್ಚರಿಯೇನಲ್ಲ.