Tuesday, November 4, 2025
Homeಬೆಂಗಳೂರುರಿಯಲ್‌ ಎಸ್ಟೆಟ್‌ ಉದ್ಯಮಿ ಹತ್ಯೆ ಪ್ರಕರಣ : 9 ಮಂದಿ ಬಂಧನ

ರಿಯಲ್‌ ಎಸ್ಟೆಟ್‌ ಉದ್ಯಮಿ ಹತ್ಯೆ ಪ್ರಕರಣ : 9 ಮಂದಿ ಬಂಧನ

ಬೆಂಗಳೂರು, ಮೇ 11- ನಡು ರಸ್ತೆಯಲ್ಲೇ ಮಾಜಿ ರೌಡಿ, ರಿಯಲ್‌ ಎಸ್ಟೆಟ್‌ ಉದ್ಯಮಿ ಕಾರ್ತಿಕೇಯನ್‌ನನ್ನು ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ 9 ಮಂದಿ ಆರೋಪಿಗಳನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಧರ್ಮ, ಐಶಾಕ್‌, ಸುಲ್ತಾನ್‌, ಗೋಕುಲ್‌, ಬಸವರಾಜು, ಜಾನ್‌ ಡೇವಿಡ್‌, ಸೀನಾ, ಪವನ್‌, ಅರಸು ಬಂಧಿತ ಆರೋಪಿಗಳು.ಮೇ. 7 ರ ಸಂಜೆ 7 ಗಂಟೆ ಸುಮಾರಿನಲ್ಲಿ ಬಾಣಸವಾಡಿಯ ಎಸ್‌‍.ಆರ್‌. ಪಾಳ್ಯದ ತನ್ನ ಮನೆ ಸಮೀಪದಲ್ಲೇ ಕಾರ್ತಿಕೇಯನ್‌ ವಾಯುವಿಹಾರ ಮಾಡುತ್ತಿದ್ದಾಗ ಎಂಟತ್ತು ಮಂದಿಯ ಗುಂಪು ನಾಲ್ಕು ಬೈಕ್‌ಗಳಲ್ಲಿ ಲಾಂಗು, ಮಚ್ಚುಗಳನ್ನು ಹಿಡಿದು ಬಂದು ಏಕಾಏಕಿ ಕಾರ್ತಿಕೇಯನ್‌ ಮೇಲೆ ದಾಳಿ ಮಾಡಿ ಮನಬಂದಂತೆ ಹಲ್ಲೆ ನಡೆಸಿ ನಡು ರಸ್ತೆಯಲ್ಲೆ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿತ್ತು.

ಪೆನ್‌ಡ್ರೈವ್‌ ಪ್ರಕರಣವನ್ನು ನ್ಯಾಯಾಧೀಶರಿಂದ ತನಿಖೆ ಮಾಡಿಸಲು ಸಿ.ಟಿ.ರವಿ ಒತ್ತಾಯ
- Advertisement -

ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದ ಬಾಣಸವಾಡಿ ಠಾಣೆ ಪೊಲೀಸರು 9 ಮಂದಿ ಬಂಧಿಸಿ ವಿಚಾರಣೆಗೆ ಒಳಪಡಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

- Advertisement -
RELATED ARTICLES

Latest News