Sunday, October 20, 2024
Homeಮನರಂಜನೆನಟಿ ಪ್ರಿಯಾಂಕ ಗ್ಲಾಮರ್ ಕಿಂಚಿತ್ತೂ ಕಡಿಮೆಯಾಗಿಲ್ಲ ಎಂದ ಉಪ್ಪಿ

ನಟಿ ಪ್ರಿಯಾಂಕ ಗ್ಲಾಮರ್ ಕಿಂಚಿತ್ತೂ ಕಡಿಮೆಯಾಗಿಲ್ಲ ಎಂದ ಉಪ್ಪಿ

Real Star Upendra on Priyanka Glamour

ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿರುವ ಹಿರಿಯ ನಟಿ ಪ್ರಿಯಾಂಕಾ ಉಪೇಂದ್ರ ಆಕ್ಷನ್ ಕ್ವೀನ್ ಆಗಿ ಕಾಣಿಸಿಕೊಂಡಿರುವ ಉಗ್ರಾವತಾರ ಚಿತ್ರ ನವೆಂಬರ್ ತಿಂಗಳಲ್ಲಿ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಹಾಡು ಪ್ರದರ್ಶನ ಮತ್ತು ಟ್ರೈಲರ್ ಬಿಡುಗಡೆ ಇತ್ತು. ಅಂದ ಹಾಗೆ “ಉಗ್ರವತಾರ” ಚಿತ್ರ ಕನ್ನಡ , ತೆಲುಗು, ತಮಿಳು ,ಮಲೆಯಾಳಂ ಭಾಷೆಯಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ಟ್ರೈಲರ್ ಬಿಡುಗಡೆ ಮಾಡಿದ ನಟ ಉಪೇಂದ್ರ ಮಾತನಾಡಿ, ಪತ್ನಿ ಪ್ರಿಯಾಂಕ ಇಷ್ಟೊಂದು ಆಕ್ಷನ್ ಮಾಡುತ್ತಾರೆ ಅಂದುಕೋಂಡರಲಿಲ್ಲ ಅದ್ಬುತವಾಗಿ ಮಾಡಿದ್ದಾರೆ. ಚಿತ್ರ ನಾನು ನೋಡಿದ್ದೇನೆ ಪೊಲೀಸ್ ಪಾತ್ರ ಎನ್ನುತ್ತಿದ್ದಂತೆ ಪ್ರಿಯಾಂಕ ನಟಿಸಲು ಒಪ್ಪಿಕೊಂಡರು. ಆದರೆ ಆಕ್ಷನ್ ಸೀನ್ ಮಾಡಿ ಮನೆಗೆ ಬಂದಾಗ ಮೈಮೇಲೆ ತರಚಿದ ಮಾರ್ಕ್ ತೋರಿಸುತ್ತಿದ್ದರು, ತುಂಬಾ ಗ್ಲಾಮರ್ ಆಗಿ ನಿರ್ದೇಶಕರು ತೋರಿಸಿದ್ದಾರೆ ಪ್ರಿಯಾಂಕ ಅವರದು ಕಡಿಮೆಯಾಗದ ಗ್ಲಾಮರ್ ಎಂದರು.

ಪ್ರಿಯಾಂಕ ಮಾತನಾಡಿ, ಆಕ್ಷನ್ ಸನ್ನಿವೇಶ ಮಾಡುವಾಗ ಅದರ ಕಷ್ಟ ಗೊತ್ತಾಯಿತು. ಪ್ರತಿ ಸಿನಿಮಾದಲ್ಲಿ ಆಕ್ಷನ್ ಮಾಡುವ ನಟರಿಗೆ ಮತ್ತು ಸಾಹಸ ನಿರ್ದೇಶಕರು ಮತ್ತು ಅವರ ತಂಡಕ್ಕೆ ತಲೆ ಬಾಗಿ ನಮಸ್ಕರಿಸುವೆ . ಚಿತ್ರದಲ್ಲಿ ಸುರಕ್ಷಾ ಅಪ್ ಸೇರಿಂದತೆ ಮಹಿಳೆಯರ ಸುರಕ್ಷತೆಯ ಬಗ್ಗೆ ಚಿತ್ರದಲ್ಲಿ ಹೇಳಲಾಗಿದೆ.

ಎಲ್ಲರೂ ಚಿತ್ರಮಂದಿರಕ್ಕೆ ಬಂದು ಚಿತ್ರ ನೋಡಿ ಎಂದರು.ನಿರ್ದೇಶಕ ಗುರುಮೂರ್ತಿ ಮಾತನಾಡಿ, ಸಾಮಾಜಿಕ ಕಳಕಳಿ ಇರುವ ಸಿನಿಮಾ, ಹೆಣ್ಣು ಮತ್ತು ಭೂ ತಾಯಿಗೆ ಶರಣಾಗಿರಬೇಕು. ನಾಲ್ಕು ಭಾಷೆಯಲ್ಲಿ ಚಿತ್ರದ ಡಬ್ಬಿಂಗ್ ಮಾಡಿದ್ದೇವೆ.

ಸಮಾಜದಲ್ಲಿ ನಡೆಯುವ ಘಟನೆ ಮುಂದಿಟ್ಟುಕೊಂಡು ಸಿನಿಮಾ ಮಾಡಲಾಗಿದೆ ಎಂದರು.ಚಿತ್ರವನ್ನು ಎಸ್.ಜಿ ಸತೀಶ್ ನಿರ್ಮಾಣ ಮಾಡಿದ್ದಾರೆ. ರವಿ ಬಸ್ರೂರು ಸಂಗೀತಕ್ಕೆ ಸಾತ್ ಕೊಟ್ಟಿದ್ದಾರೆ. ಪ್ರವೀಣ್ ಸೂರ್ಯ ಉಗ್ರಾವತಾರದಲ್ಲಿ ವಿಭಿನ್ನ ಪಾತ್ರಕ್ಕೆಬಣ್ಣ ಹಚ್ಚಿದ್ದಾರೆ

RELATED ARTICLES

Latest News