Sunday, September 8, 2024
Homeಮನರಂಜನೆಇಂದು ರೆಬೆಲ್‌ ಸ್ಟಾರ್‌ ಅಂಬರೀಶ್‌ 72ನೇ ಹುಟ್ಟುಹಬ್ಬ

ಇಂದು ರೆಬೆಲ್‌ ಸ್ಟಾರ್‌ ಅಂಬರೀಶ್‌ 72ನೇ ಹುಟ್ಟುಹಬ್ಬ

ಬೆಂಗಳೂರು, ಮೇ 29- ಇಂದು ನಟ ರೆಬೆಲ್‌ ಸ್ಟಾರ್‌ ಅಂಬರೀಶ್‌ ಅವರ 72ನೇ ಹುಟ್ಟುಹಬ್ಬ. ಕನ್ನಡ ಚಿತ್ರರಂಗದ ದಿಗ್ಗಜರನ್ನ ನೆನಪಿಸಿಕೊಂಡಾಗ ಅಂಬರೀಶ್‌ ಅವರು ಮೊದಲ ಸಾಲಲ್ಲಿ ನಿಲ್ಲುತ್ತಾರೆ. ಅವರು ಅಭಿನಯಿಸಿದ ಸಿನಿಮಾಗಳು ಅವರ ಕಲಾ ಪ್ರತಿಭೆಯನ್ನು ಇಂದಗೂ ಎಂದೆಂದಿಗೂ ಜೀವಂತವಾಗಿರಿಸುತ್ತವೆ. ಅದರಲ್ಲೂ ನಾಗರಹಾವು ಚಿತ್ರದಲ್ಲಿನ ಆಂಗ್ರಿ ಯಂಗ್‌ ಮ್ಯಾನ್‌ ಜಲೀಲನ ಲುಕ್ಕನ್ನು ಯಾರೂ ಮರೆಯುವಂತಿಲ್ಲ.

ಅಂಬರೀಶ್‌ ಅವರದ್ದು ವರ್ಣ ರಂಜಿತ ವ್ಯಕ್ತಿತ್ವ, ಸಿನಿಮಾ, ರಾಜಕೀಯ ಎರಡು ಕ್ಷೇತ್ರಗಳಲ್ಲಿ ಸೈ ಅನಿಸಿಕೊಂಡಿದ್ದಾರೆ. ಕಾವೇರಿ ನೀರಿಗಾಗಿ ತನ್ನ ಸಚಿವ ಸ್ಥಾನವನ್ನು ತ್ಯಾಗ ಮಾಡಿದ ತ್ಯಾಗಮಯಿ, ಕಲಿಯುಗದ ಕರ್ಣನಂದೇ ಮನೆಮಾತಾಗಿದ್ದ ಅಂಬಿ ದಾನದಲ್ಲಿ ಎತ್ತಿದ ಕೈ. ನೇರ ನುಡಿ, ಯಾರಿಗೂ ಕೇರ್‌ ಮಾಡದೆ ಜೀವನ ನಡೆಸಿದವರು.

ಭಾರತದ ಎಲ್ಲಾ ಕ್ಷೇತ್ರಗಳ ಪ್ರಮುಖ ಗಣ್ಯರ ಸ್ನೇಹ ಬೆಳೆಸಿದ್ದ ಸ್ನೇಹಜೀವಿ. ಕನ್ನಡ ಚಿತ್ರರಂಗದ ದೊಡ್ಡಣ್ಣನಂತೆ ಏನೇ ಸಮಸ್ಯೆಗಳು ಬಂದರು ಪರಿಹರಿಸುತ್ತಿದ್ದರು. ಮಂಡ್ಯದ ಮಗನಾಗಿ ಹುಟ್ಟಿದ ಅಂಬರೀಶ್‌ ಡೆಲ್ಲಿಯ ತನಕ ಕನ್ನಡದ ಕೀರ್ತಿ ಪತಾಕೆಯನ್ನು ಹಾರಿಸಿ ಅನಾರೋಗ್ಯದ ಕಾರಣ ಕನ್ನಡಿಗರನ್ನ ಅಗಲಿದ್ದು ಮಾತ್ರ ದುಃಖಕರ ವಿಷಯ.ಇಂದಿಗೂ ಅವರ ಮೇಲಿನ ಅಭಿಮಾನ ಅಭಿಮಾನಿಗಳಲ್ಲಿ ಕಿಂಚಿತ್ತು ಕಡಿಮೆಯಾಗಲಿಲ್ಲ.

ಮಂಡ್ಯ, ಬೆಂಗಳೂರು ಸೇರಿದಂತೆ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಅಭಿಮಾನಿ ಬಳಗ ಇವರು ಹುಟ್ಟುಹಬ್ಬವನ್ನು ಆಚರಿಸಿದೆ. ಕಂಠೀರವ ಸ್ಟುಡಿಯೋದಲ್ಲಿರುವ ಸಮಾಧಿ ಸ್ಥಳಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳು ಬಂದು ನಮಸ್ಕರಿಸಿದ್ದಾರೆ. ಅಷ್ಟೇ ಅಲ್ಲದೆ ವಿವಿಧ ಕಾರ್ಯಕ್ರಮಗಳನ್ನು ಹಮಿಕೊಂಡಿದ್ದರು. ಕುಟುಂಬದ ಸದಸ್ಯರು ಬಂದು ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.

RELATED ARTICLES

Latest News