ಬೆಂಗಳೂರು, ಮಾ.19- ಸಿಇಟಿ (ಸಾಮಾನ್ಯ ಪ್ರವೇಶ ಪರೀಕ್ಷೆ) ಪರೀಕ್ಷೆಗೆ ಈ ಬಾರಿ ದಾಖಲೆ ಮಟ್ಟದ ನೋಂದಣಿಯಾಗಿದೆ. ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ಗಳ ಸಾಮಾನ್ಯ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಏಪ್ರಿಲ್ನಲ್ಲಿ ನಡೆಸುವ ಸಿಇಟಿ ಪರೀಕ್ಷೆಗೆ 3.75. 399 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಕಳೆದ ವರ್ಷಕ್ಕಿಂತ ಈ ಬಾರಿಯ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದಾರೆ.
ಸಿಇಟಿಗೆ ಅರ್ಜಿ ಸಲ್ಲಿಸಲು ನೀಡಿದ ಗಡುವು ಮುಕ್ತಾಯಗೊಂಡಿದ್ದರೂ, ವಿದ್ಯಾರ್ಥಿಗಳು ಮತ್ತು ಪೊಷಕರ ಬೇಡಿಕೆ ಮೇರೆಗೆ ಮಾ.18 ರಿಂದ 20ರವರೆಗೆ 3 ದಿನಗಳ ಅವಕಾಶ ನೀಡಲಾಗಿದೆ. ನೋಂದಾಯಿಸಿದವರಿಗೆ ಶುಲ್ಕ ಪಾವತಿಸಲು ಮಾ.21 ಕೊನೆಯ ದಿನವಾಗಿರುತ್ತದೆ. ಇದು ಕಡೆಯ ಅವಕಾಶವಾಗಿದ್ದು, ಮತ್ತೆ ಕಾಲಾವಯನ್ನು ವಿಸ್ತರಿಸುವುದಿಲ್ಲವೆಂದು ಪರೀಕ್ಷಾ ಪ್ರಾಧಿಕಾರ ಹೇಳಿದೆ.
ಪ್ರಾಧಿಕಾರದ ವೆಬ್ಸೈಟ್ htpps//kea kar.nic.in ಮೂಲಕ ಅರ್ಜಿ ಸಲ್ಲಿಸಬಹುದು. ನೋಂದಣಿ ಮಾಡಿಕೊಳ್ಳಬಹುದು. ಏ.18 ಮತ್ತು 19ರಂದು ಸಿಇಟಿ ಪರೀಕ್ಷೆ ನಡೆಯಲಿದ್ದು, ಈಗ ಅರ್ಜಿ ಸಲ್ಲಿಸುವವರು ಬೆಂಗಳೂರು ನಗರ ಪರೀಕ್ಷಾ ಕೇಂದ್ರಗಳಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ ಇದೆ ಎಂದು ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.