Thursday, December 5, 2024
Homeಬೆಂಗಳೂರುಬಿಬಿಎಂಪಿಯಲ್ಲಿ ದಾಖಲೆಯ ಆಸ್ತಿ ತೆರಿಗೆ ಸಂಗ್ರಹ

ಬಿಬಿಎಂಪಿಯಲ್ಲಿ ದಾಖಲೆಯ ಆಸ್ತಿ ತೆರಿಗೆ ಸಂಗ್ರಹ

Record property tax collection in BBMP

ಬೆಂಗಳೂರು, ಡಿ.1– ಬಿಬಿಎಂಪಿಯಲ್ಲಿ ಈ ಬಾರಿ ದಾಖಲೆ ಆಸ್ತಿ ತೆರಿಗೆ ಸಂಗ್ರಹ ಮಾಡಿ ಇತಿಹಾಸ ನಿರ್ಮಿಸಲಾಗಿದೆ.ನಿನ್ನೆಯವರೆಗೆ ಬಿಬಿಎಂಪಿಯಲ್ಲಿ 4284 ಕೋಟಿ ರೂ.ಗಳ ಆಸ್ತಿ ತೆರಿಗೆ ಸಂಗ್ರಹ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆಸ್ತಿ ತೆರಿಗೆ ಸಂಗ್ರಹಕ್ಕೆ ಇನ್ನು ಮಾರ್ಚ್ ತಿಂಗಳವರೆಗೆ ಅವಕಾಶವಿದ್ದು ಆ ವೇಳೆಗೆ 5200 ಕೋಟಿ ರೂ.ಗಳ ತೆರಿಗೆ ಸಂಗ್ರಹಕ್ಕೆ ಗುರಿ ಇರಿಸಿಕೊಳ್ಳಲಾಗಿದೆ.ಆಸ್ತಿ ತೆರಿಗೆ ಸಂಗ್ರಹದ ಜೊತೆಗೆ ನಗರದ ಎಲ್ಲಾ ನಾಗರೀಕರಿಗೂ ಇ ಖಾತಾ ನೀಡಲು ಬಿಬಿಎಂಪಿ ಬದ್ದವಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

RELATED ARTICLES

Latest News