ಮನೆ ಖರೀದಿಸುವವರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್

0
860
Home Loan

ನವದೆಹಲಿ,ಆ.7– ಜುಲೈ 23, 2024 ರ ಮೊದಲು ಮನೆಗಳನ್ನು ಖರೀದಿಸಿದ ವ್ಯಕ್ತಿಗಳಿಗೆ ಭೂಮಿ ಮಾರಾಟದ ಮೇಲಿನ (ಲಾಂಗ್‌ ಟರ್ಮ್‌ ಕ್ಯಾಪಿಟಲ್‌ ಗೇನ್ಸ್ ) ತೆರಿಗೆಗೆ ದೀರ್ಘಾವಧಿಯ ಬಂಡವಾಳ ಲಾಭದ ಮೇಲೆ ಎರಡು ತೆರಿಗೆ ದರಗಳ ನಡುವೆ ಆಯ್ಕೆ ನೀಡುವ ಮೂಲಕ ಸರ್ಕಾರವು ಮಹತ್ವದ ಪರಿಹಾರವನ್ನು ನಾಗರಿಕರಿಗೆ ಕಲ್ಪಿಸಿದೆ.

ಬಜೆಟ್‌ 2024-25 ಎಲ್‌ ಟಿಜಿಸಿಯನ್ನು ಶೇಕಡಾ 20ರಿಂದ ಶೇಕಡಾ 12.5ಕ್ಕೆ ಇಳಿಸಲು ಪ್ರಸ್ತಾಪಿಸಿದ್ದು, ಸೂಚ್ಯಂಕ ಪ್ರಯೋಜನಗಳು ತೆಗೆದು ಹಾಕಿತು. ಹೊಸ ದರಗಳು ಜುಲೈ 23, 2024 ರಿಂದ ಜಾರಿಗೆ ಬಂದಿದೆ.

ಇಂಡೆಕ್ಸೇಶನ್‌ ಪ್ರಯೋಜನವು ಹಣದುಬ್ಬರಕ್ಕೆ ಸರಿ ಹೊಂದಿಸಿದ ನಂತರ ಬಂಡವಾಳ ಆಸ್ತಿಗಳ ಮಾರಾಟದಿಂದ ಉಂಟಾಗುವ ಲಾಭಗಳನ್ನು ಲೆಕ್ಕಾಚಾರ ಮಾಡಲು ತೆರಿಗೆದಾರರಿಗೆ ಅವಕಾಶ ಮಾಡಿಕೊಟ್ಟಿತು. ಬಜೆಟ್‌ನಲ್ಲಿ ಪ್ರಸ್ತಾಪಿಸಲಾದ ಬದಲಾವಣೆಗಳು ಎಲ್ಟಿಸಿಜಿ ತೆರಿಗೆ ಹೊರೆಯನ್ನು ಹೆಚ್ಚಿಸುತ್ತವೆ ಎಂದು ತೆರಿಗೆ ತಜ್ಞರು ಹೇಳುತ್ತಾರೆ.

ಲೋಕಸಭೆಯ ಸದಸ್ಯರಿಗೆ ವಿತರಿಸಲಾದ ಹಣಕಾಸು ಮಸೂದೆ, 2024 ರ ತಿದ್ದುಪಡಿಗಳ ಪ್ರಕಾರ, ಜುಲೈ 23, 2024 ರ ಮೊದಲು ಮನೆಗಳನ್ನು ಖರೀದಿಸಿದ ವ್ಯಕ್ತಿಗಳು ಅಥವಾ ಹೊಸ ಯೋಜನೆಯ ಅಡಿಯಲ್ಲಿ ತೆರಿಗೆಗಳನ್ನು ಶೇ. 12.5 ಸೂಚ್ಯಂಕವಿಲ್ಲದೆ ಮತ್ತು ಹಳೆಯ ಯೋಜನೆ ಶೇ.20ರಷ್ಟು ಇಂಡೆಕ್ಸೇಶನ್‌ ಮತ್ತು ಎರಡಕ್ಕಿಂತ ಕಡಿಮೆ ತೆರಿಗೆಯನ್ನು ಪಾವತಿಸುವಂತೆ ಸೂಚಿಸಲಾಗಿದೆ.

ಬಜೆಟ್‌ ಮಂಡನೆ ನಂತರ ಆದಾಯ ತೆರಿಗೆ ಇಲಾಖೆಯು ರಿಯಲ್‌ ಎಸ್ಟೇಟ್‌ ವಲಯದಲ್ಲಿ ದೀರ್ಘಾವಧಿಯ ಬಂಡವಾಳ ಲಾಭ ತೆರಿಗೆ ದರವನ್ನು ಕಡಿತಗೊಳಿಸಿರುವುದರಿಂದ ಬಹುಪಾಲು ತೆರಿಗೆದಾರರಿಗೆ ಗಣನೀಯ ತೆರಿಗೆ ಉಳಿತಾಯ ನಿರೀಕ್ಷಿಸಲಾಗಿದೆ.

2024-25ರ ಬಜೆಟ್‌ನಲ್ಲಿ ತಂದ ಬದಲಾವಣೆಗಳ ಪ್ರಕಾರ, 2001 ರ ಮೊದಲು ಖರೀದಿಸಿದ ಅಥವಾ ಪಿತ್ರಾರ್ಜಿತವಾಗಿ ಪಡೆದ ಆಸ್ತಿಗಳ ಮೇಲಿನ ತೆರಿಗೆದಾರರಿಗೆ ಸೂಚ್ಯಂಕ ಪ್ರಯೋಜನವನ್ನು ಸರ್ಕಾರವು ಉಳಿಸಿಕೊಂಡಿದೆ.