Sunday, November 10, 2024
Homeಬೆಂಗಳೂರುರಸ್ತೆ ಅಪಘಾತ : ಸೀಮಂತದ ದಿನವೇ, ಪತಿ ಕಣ್ಣೆದುರೇ ತುಂಬು ಗರ್ಭಿಣಿ ಸಾವು

ರಸ್ತೆ ಅಪಘಾತ : ಸೀಮಂತದ ದಿನವೇ, ಪತಿ ಕಣ್ಣೆದುರೇ ತುಂಬು ಗರ್ಭಿಣಿ ಸಾವು

ನೆಲಮಂಗಲ,ಆ.7- ಸೀಮಂತಕ್ಕೆ ಹೊರಟಿದ್ದ ತುಂಬು ಗರ್ಭಿಣಿ ಪತಿಯ ಕಣ್ಣೆದುರೇ ಭೀಕರ ರಸ್ತೆ ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ ಎಡೆಹಳ್ಳಿ ಕ್ರಾಸ್‌‍ ಬಳಿ ನಡೆದಿದೆ.

ತಾಲ್ಲೂಕಿನ ತೋಟನಹಳ್ಳಿ ಗ್ರಾಮದ ನಿವಾಸಿ ಸಿಂಚನ ಮೃತಪಟ್ಟ ಗೃಹಿಣಿ. ಇಂದು ಸಿಂಚನ ಸೀಮಂತ ಕಾರ್ಯವಿದ್ದು, ಈ ಹಿನ್ನೆಲೆಯಲ್ಲಿ ದಂಪತಿ ದೇವಸ್ಥಾನಕ್ಕೆ ತೆರಳಿ ಪೂಜೆ ಮುಗಿಸಿಕೊಂಡು ಮನೆಗೆ ವಾಪಸ್‌‍ ಬರುತ್ತಿದ್ದಾಗ ಹಿಂದಿನಿಂದ ವೇಗವಾಗಿ ಬಂದ ಜಲ್ಲಿ ತುಂಬಿದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಗರ್ಭಿಣಿ ಸಿಂಚನ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕಣ್ಣೆದುರೇ ಪತ್ನಿ ಹಾಗೂ ಇನ್ನೂ ಕಣ್ಣುಬಿಡದ ಕಂದಮ ನರಳಿನರಳಿ ಸಾವನ್ನಪ್ಪಿದ್ದು, ಪತಿಯ ಆಕ್ರಂದನ ಮುಗಿಲು ಮುಟ್ಟಿತ್ತು.ಸುದ್ದಿ ತಿಳಿಯುತ್ತಿದ್ದಂತೆ ನೆಲಮಂಗಲ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸೀಮಂತದ ಸಂಭ್ರಮದಲ್ಲಿದ್ದ ಕುಟುಂಬ ಸದಸ್ಯರಿಗೆ ಈ ಒಂದು ದುರಂತ ಬರಸಿಡಿಲಿನಂತೆ ಅಪ್ಪಳಿಸಿದ್ದು, ಸೀಮಂತ ಮನೆ ಸೂತಕದ ಮನೆಯಾಗಿತ್ತು.

RELATED ARTICLES

Latest News