ಬೆಂಗಳೂರು,ಏ.19– ಶಿವಮೊಗ್ಗ, ತೀರ್ಥಹಳ್ಳಿ ಹಾಗೂ ಬೀದರ್ ನಗರಗಳಲ್ಲಿ ನಡೆದ ಸಿಇಟಿ ಪರೀಕ್ಷೆಗೆ ಹಾಜರಾದ ಬ್ರಾಹಣ ಸಮುದಾಯದ ಕೆಲವು ವಿದ್ಯಾರ್ಥಿಗಳಿಂದ ಧಾರ್ಮಿಕ ಚಿಹ್ನೆಯಾದ ಯಜೋಪವೀತ(ಜನಿವಾರ) ಅನ್ನು ಪರೀಕ್ಷಾಧಿಕಾರಿಗಳು ಬಲವಂತವಾಗಿ ತೆಗೆಸಿದ ಘಟನೆಗೆ ಸಂಬಂಧಿಸಿದಂತೆ ಆಕ್ರೋಶ ವ್ಯಕ್ತವಾಗಿದೆ ಎಂದು ಅಖಿಲ ಕರ್ನಾಟಕ ಬ್ರಾಹಣ ಮಹಾಸಭಾಧ್ಯಕ್ಷ
ಎಸ್. ರಘುನಾಥ್ ತಿಳಿಸಿದರು.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಕರಣ ಸಂಬಂಧ ಶಿವಮೊಗ್ಗ ಮತ್ತು ಬೀದರ್‌ನಲ್ಲಿನ ಬ್ರಾಹಣ ಮುಖಂಡರು ಪ್ರತಿಭಟನೆ ನಡೆಸಿ, ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಇದು ನಮ ಧರ್ಮ, ಸಂಸ್ಕೃತಿಯ ಮೇಲೆ ನಡೆದ ನಿರ್ದಯವಾದ ದಾಳಿ. ಇದನ್ನು ನಾವು ಸುಲಭವಾಗಿ ಮನ್ನಣೆ ನೀಡುವುದಿಲ್ಲ. ತಪ್ಪಿತಸ್ಥರನ್ನು ಕೂಡಲೇ ಸೇವೆಯಿಂದ ಅಮಾನತು ಮಾಡಬೇಕು ಹಾಗೂ ಸರ್ಕಾರ ಕ್ಷಮೆ ಕೇಳಬೇಕು ಎಂದು ಅವರು ಆಗ್ರಹಿಸಿದರು.
ಸಿಇಟಿ ಪರೀಕ್ಷಾಧಿಕಾರಿ ಗಳನ್ನು ತಕ್ಷಣವೇ ಸೇವೆಯಿಂದ ಅಮಾನತು ಮಾಡಬೇಕು.
ದೌರ್ಜನ್ಯಕ್ಕೊಳಗಾದ ವಿದ್ಯಾರ್ಥಿಗಳೆದುರು ಭೇಷರತ್ ಕ್ಷಮೆ ಕೇಳಬೇಕು.
ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಮಾರ್ಗಸೂಚಿ ಹಾಗೂ ಕ್ರಮಗಳನ್ನು ಕೈಗೊಳ್ಳಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸಬೇಕು. ತನಿಖೆ ನಡೆಸಿದ ನಂತರ ಮಾಹಿತಿ ಮಹಾಸಭೆಗೆ ನೀಡಬೇಕು ಎಂದರು.
ಜಾತಿ ಜನಗಣತಿಯಲ್ಲೂ ಬ್ರಾಹಣ ಸಮುದಾಯದ ವಿರುದ್ಧ ಅಸಮಾನತೆ, ಕಾಂತರಾಜ ಆಯೋಗ ನೀಡಿರುವ ವರದಿಯಲ್ಲಿ ಬ್ರಾಹಣರ ಸಂಖ್ಯೆಯನ್ನು ಕೇವಲ 2.98% ಎಂದು ತೋರಿಸಲಾಗಿದೆ. ಆದರೆ ಈ ಜನಗಣತಿ ವೈಜ್ಞಾನಿಕವಾಗಿ ನಡೆದಿಲ್ಲ ಎಂಬ ಶಂಕೆ ಮಹಾಸಭೆಯವರಿಗೆ ವ್ಯಕ್ತವಾಗಿದೆ. ಬಹುತೇಕ ಮನೆಗಳನ್ನು ಸಂಪರ್ಕಿಸಲಿಲ್ಲ, ಸರಿಯಾದ ಪದ್ಧತಿಯಲ್ಲಿ ಸಮೀಕ್ಷೆ ನಡೆದಿಲ್ಲ. ಈ ವರದಿ ನಮ ಸಮುದಾಯದ ಪರಿಗೆ ಅಪಮಾನವಾಗಿದ್ದು, ತಿರಸ್ಕರಿಸಲಾಗಬೇಕು
ಎಂದು ರಘುನಾಥ್ ಅವರು ಹೇಳಿದರು.
ಈ ಹಿನ್ನೆಲೆಯಲ್ಲಿ ಬ್ರಾಹಣರ ಜನಗಣತಿಯನ್ನು ವೈಜ್ಞಾನಿಕವಾಗಿ ಮತ್ತೊಮೆ ನಡೆಸಬೇಕೆಂದು ಮಹಾಸಭೆ ಸರ್ಕಾರವನ್ನು ಒತ್ತಾಯಿಸಿದರು.
ಜನಿವಾರ ಪ್ರಕರಣ ಅಮಾನವೀಯ: ಶರವಣ ಟೀಕೆ
ಶಿವಮೊಗ್ಗ ಜಿಲ್ಲೆಯಲ್ಲಿ ವಿದ್ಯಾರ್ಥಿಯೊಬ್ಬ ಧರಿಸಿದ್ದ ಜನಿವಾರ ತೆಗೆಸಿರುವುದು ಹಾಗೂ ಬೀದರ್‌ನಲ್ಲಿ ಜನಿವಾರ ತೆಗೆಯದ ಕಾರಣಕ್ಕೆ ವಿದ್ಯಾರ್ಥಿ ಸಿಇಟಿ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಿರುವುದು ಅಮಾನವೀಯ ವಿಚಾರವಾಗಿದೆ ಎಂದು ವಿಧಾನ ಪರಿಷತ್ ನ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ ಟಿ.ಎ.ಶರವಣ ಹೇಳಿದ್ದಾರೆ.
ಧರ್ಮದ ಆಧಾರದ ಮೇಲೆ ಆಡಳಿತ ಯಂತ್ರ ನಡೆಸುತ್ತಿರುವುದು ಸರಿಯಲ್ಲ. ವಿದ್ಯಾರ್ಥಿಗಳಿಗಾಗಿರುವ ತೊಂದರೆಯನ್ನು ಬಲವಾಗಿ ಖಂಡಿಸುವುದಾಗಿ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಭಾರತದ ಇತಿಹಾಸದಲ್ಲೇ ಇಂಥ ಅವಮಾನಕರ ಘಟನೆ ಇನ್ನೊಂದು ನಡೆದಿಲ್ಲ. ಹಿಂದೂ ಸಂಸ್ಕೃತಿಗೆ , ಆಚರಣೆಗೆ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಇಂಥ ಅಪಚಾರಕ್ಕೆ ಕೊನೆಯೇ ಇಲ್ಲ. ಜನಿವಾರ ಧರಿಸಿ ಬಂದ ಕಾರಣಕ್ಕೆ ಸಿಇಟಿ ಪರೀಕ್ಷೆ ಗೆ ನಿರಾಕರಿಸಿ, ವಿದ್ಯಾರ್ಥಿಗಳ ಬದುಕಿಗೆ ಈ ಸರ್ಕಾರ ಕೊಳ್ಳಿ ಇಟ್ಟಿದೆ ಎಂದು ಅವರು ಆರೋಪಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣ ಮಧ್ಯ ಪ್ರವೇಶಿಸಿ ವಿದ್ಯಾರ್ಥಿಯ ಭವಿಷ್ಯಕ್ಕೆ ನ್ಯಾಯ ದೊರಕಿಸಿಕೊಡಬೇಕು. ಪರೀಕ್ಷೆಗೆ ಹಾಜರಾಗದ ವಿದ್ಯಾರ್ಥಿಗೆ ಮತ್ತೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು. ಇದಕ್ಕೆ ಕಾರಣರಾದ ಅಧಿಕಾರಿಗಳನ್ನು ವಜಾ ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ.