ಬೆಂಗಳೂರು,ಸೆ.29- ಕನ್ನಡದ ಹೆಸರಾಂತ ನಾಟಕಕಾರ, ರಂಗಭೂಮಿ ಕಲಾವಿದ, ನಿದೇರ್ಶಕ ಹಾಗೂ ಉತ್ತರಕನ್ನಡದ ಆಡು ಭಾಷೆಯ ಮೂಲಕ ಹಾಸ್ಯ ಪ್ರಜ್ಞೆಗೆ ಹೆಸರುವಾಸಿಯಾಗಿದ್ದ ಯಶವಂತ ಸರದೇಶಪಾಂಡೆ ಅವರು ಹೃದಯಘಾತದಿಂದ ನಿಧನರಾಗಿದ್ದಾರೆ. ಮನೆಯಲ್ಲಿದ್ದ ಅವರಿಗೆ ಬೆಳಗ್ಗೆ ಎದೆನೋವು ಕಾಣಿಸಿಕೊಂಡಿತ್ತು ತಕ್ಷಣವೇ ಕುಟುಂಬದ ಸದಸ್ಯರು ಪೋರ್ಟೀಸ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ ಮಾಲತಿ, ಪುತ್ರಿ ದೋಸ್ತಿಯನ್ನು ಅಗಲಿದ್ದಾರೆ. ಅವರಿಗೆ 61ವರ್ಷ ವಯಸ್ಸಾಗಿತ್ತು.
ಸರದೇಶಪಾಂಡೆ ಅವರ ನಿಧನದ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಖ್ಯಾತ ಕನ್ನಡ ರಂಗಭೂಮಿ ನಟ, ರಾಜ್ಯಾದ್ಯಂತ ಅನೇಕ ನಾಟಕಗಳಲ್ಲಿ ನಟಿಸಿ-ನಿರ್ದೇಶಿಸಿ ಅತ್ಯಂತ ಜನಪ್ರೀಯ ನಾಟಕಕಾರರಾಗಿದ್ದ ನಮ ಹುಬ್ಬಳ್ಳಿಯ ಯಶವಂತ ಸರದೇಶಪಾಂಡೆ ಅವರು ಇಂದು ಬೆಳಿಗ್ಗೆ ನಿಧನರಾದ ವಿಷಯ ತಿಳಿದು ಅತ್ಯಂತ ದುಃಖವಾಗಿದೆ. ಅವರ ಆಲ್ ದಿ ಬೆಸ್ಟ್ ನಾಟಕ ಅಭೂತಪೂರ್ವ ಯಶಸ್ಸು ಕಂಡಿತು. ಕಿರುತೆರೆ ಮತ್ತು ಚಲನಚಿತ್ರಗಳಲ್ಲಿಯೂ ಇವರು ಪಾತ್ರವಹಿಸುತ್ತಿದ್ದರು ಎಂದು ಅವರು ಬರೆದುಕೊಂಡಿದ್ದಾರೆ.
ರಂಗ ಕಲಾವಿದ ಯಶವಂತ ಸರದೇಶಪಾಂಡೆ ಅವರು ಮೂಲತಃ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದವರು. 1965 ಜೂನ್ 13ರಂದು ಶ್ರೀಧರರಾವ್ ಸೆರದೇಶಪಾಂಡೆ, ಕಲ್ಪನಾದೇವಿ ಅವರ ತಂದೆತಾಯಿಗಳು. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೀಕಿನ ಹೆಗ್ಗೋಡಿನ ನಿನಾಸಂ ನಾಟಕ ಸಂಸ್ಥೆಯಿಂದ ಡಿಪ್ಲೊಮಾ ಪದವಿ ಹಾಗೂ ನ್ಯೂಯಾರ್ಕ್ ವಿಶ್ವವಿದ್ಯಾಯದಿಂದ ನಾಟಕ ರಚನೆ, ಚಲನ ಚಿತ್ರ ಸಂಭಾಷಣೆಯ ವಿಶೇಷ ತರಬೇತಿ ಪಡೆದಿದ್ದರು.
ಅಂಧಯುಗ, ಇನ್ಸ್ಪೆಕ್ಟರ್ ಜನರಲ್, ಮಿಡ್ಸಮರ್ ನೈಟ್್ಸಡ್ರೀಮ್, ಬಾಡಿಗೆ ಮನೆ, ಕಿತ್ತೂರು ರಾಣಿ ಚೆನ್ನಮ, ಪುಷ್ಪರಾಣಿ, ಗಲಿವರನ ಯಾತ್ರೆ, ಬೆಪ್ಪುತಕ್ಕಡಿ ಬೋಳೇ ಶಂಕರ, ತುಂಟ ಮಕ್ಕಳ ತಂಟೆ, ಮಕ್ಕಳೆರಡೇ ಇರಲಿ, ಕುಂಟಾ ಕುಂಟ ಕುರವತ್ತಿ ಮುಂತಾದ ಅರವತ್ತಕ್ಕೂ ಹೆಚ್ಚು ನಾಟಕಗಳ ನಿರ್ದೇಶನ ಮಾಡಿದ್ದಾರೆ. ರಂಗವರ್ತುಲ, ಬೇಂದ್ರೆ ರಂಗಾವಳಿಯ ಮುಖಾಂತರ ಬೇಂದ್ರೆಯವರ ಎಲ್ಲ ನಾಟಕಗಳನ್ನೂ ರಂಗಕ್ಕೆ ತಂದ ಕೀರ್ತಿ ಇವರಿಗೆ ಸೇರುತ್ತದೆ.
ರೇಡಿಯೋ, ದೂರದರ್ಶನ ಕಾರ್ಯಕ್ರಮಗಳಲ್ಲಿ ಲಕ್ಷಾಂತರ ಪ್ರೇಕ್ಷಕರನ್ನು ನಗಿಸಿದ ನಾಟಕಗಳ ನಿರ್ದೇಶಕ, ನಟ, ಆಲ್ ದಿ ಬೆಸ್ಟ್, ರಾಶಿ ಚಕ್ರ, ಸಹಿ ರೀ ಸಹಿ, ದಿಲ್ ಮಾಂಗೆ ಮೋರ್ ನಗೆ ನಾಟಕಗಳನ್ನು ತಿಳಿಹಾಸ್ಯದ ಜೊತೆಗೆ ಎಂ.ಟಿ.ಆರ್ ಸಹಯೋಗದೊಡನೆ ರಂಗ ಸಂಭ್ರಮದ ಕಾರ್ಯಕ್ರಮಗಳನ್ನು ಯೋಜಿಸಿದ್ದಾರೆ.
ರಾಶಿ ಚಕ್ರ ನಗೆ ನಾಟಕದಲ್ಲಿ ಪ್ರೇಕ್ಷಕರನ್ನು ನಕ್ಕು ನಗಿಸುವ ಏಕವ್ಯಕ್ತಿ ಅಭಿನಯ, ಯದ್ವಾ-ತದ್ವಾ, ಬಣ್ಣದ ಬುಗುರಿ, ದಶಾವತಾರ, ಪರ್ವ, ತುಂತುರು ಧಾರಾವಾಹಿಗಳ ನಟ, ಧಾರಾವಾಹಿಗಳ ಸಂಭಾಷಣಾಕಾರ, ಅತಿಥಿ, ಮರ್ಮ, ಜೂಜಾಟ, ಸ್ಟೂಡೆಂಟ್, ಅಮೃತಧಾರೆ, ರಾಮಶಾಮಭಾಮ ಚಲನಚಿತ್ರಗಳಲ್ಲೂ ಅಭಿನಯಿಸಿದ್ದರು.
ಸಿನಿಮಾದಲ್ಲೂ ಛಾಪು ಮೂಡಿಸಿದ್ದ ದೇಶಪಾಂಡೆ
ಯದ್ವಾ-ತದ್ವಾ, ಬಣ್ಣದ ಬುಗುರಿ, ದಶಾವತಾರ, ಪರ್ವ, ತುಂತುರು ಧಾರಾವಾಹಿಗಳ ನಟ, ಧಾರಾವಾಹಿಗಳ ಸಂಭಾಷಣಾಕಾರ, ಅತಿಥಿ, ಮರ್ಮ, ಜೂಜಾಟ, ಸ್ಟೂಡೆಂಟ್, ಅಮೃತಧಾರೆ, ರಾಮಶಾಮಭಾಮ ಚಲನಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ಸಹಿ ರೀ ಸಹಿ (ಮೂಲ:ಮರಾಠಿ) ಕಾಲಚಕ್ರ ಐಡಿಯಾ ಮಾಡ್ಯಾರ ಎಂಬ ಚಲನಚಿತ್ರ ನಿರ್ಮಾಣ, ರಾಮ ಶ್ಯಾಮ ಭಾಮ ಎಂಬ ಚಲನಚಿತ್ರಕ್ಕೆ ಸಂಭಾಷಣೆ ಬರೆದಿದ್ದು ಕಮಲಹಾಸನ್ ರ ಪಾತ್ರದಲ್ಲಿ ಉತ್ತರಕರ್ನಾಟಕದ ಆಡುಭಾಷೆಯನ್ನು ಆಡಿಸಿದ್ದಾರೆ.
ವಿದ್ಯಾಭ್ಯಾಸ:
ಹೆಗ್ಗೋಡು ನಿನಾಸಂ ರಂಗಭೂಮಿ ಸಂಸ್ಥೆಯಲ್ಲಿ ರಂಗಭೂಮಿ ಕಲೆಗಳಲ್ಲಿ ಡಿಪ್ಲೊಮಾ 1985-86 ನ್ಯೂಯಾರ್ಕ್ ವಿಶ್ವವಿದ್ಯಾಲಯ, 1996ರಲ್ಲಿ ಸಿನಿಮಾ ಮತ್ತು ನಾಟಕ ಬರವಣಿಗೆಯಲ್ಲಿ ಪ್ರಮಾಣಪತ್ರ ಕೋರ್ಸ್ ಪಡೆದಿದ್ದರು.
ಪ್ರಶಸ್ತಿಗಳು
ರಾಜ್ಯೋತ್ಸವ ಪ್ರಶಸ್ತಿ 2010 ಕರ್ನಾಟಕದ ಅತ್ಯುನ್ನತ ನಾಗರಿಕ ಪ್ರಶಸ್ತಿ, ಸನ್ಫೀಸ್ಟ್-ಉದಯ ಪ್ರಶಸ್ತಿ 2006 ಅತ್ಯುತ್ತಮ ಸಂಭಾಷಣೆಗಾಗಿ – ರಾಮ ಶಾಮ ಭಾಮ ಚಿತ್ರ, 2003 ರಲ್ಲಿ ಆರ್ಯಭಟ್ಟ ಪ್ರಶಸ್ತಿ, 2005 ರಲ್ಲಿ ಮಯೂರ್ ಪ್ರಶಸ್ತಿ, 2008 ರಲ್ಲಿ ಅಭಿನಯ ಭಾರತಿ ಪ್ರಶಸ್ತಿ, 2008 ರಲ್ಲಿ ರಂಗಧ್ರುವ ಪ್ರಶಸ್ತಿ, 2008 ರಲ್ಲಿ ಗ್ಲೋಬಲನ್ ಪ್ರಶಸ್ತಿಗಳು ಬಂದಿದ್ದವು.
ನಾಟಕಗಳು: ಜನಪ್ರಿಯ ರಂಗಕರ್ಮಿ, ಸಿರ್ದೇಶಪಾಂಡೆಯವರ ಬಹುತೇಕ ನಾಟಕಗಳು 500 ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿವೆ ಮತ್ತು ಆಲ್ ದಿ ಬೆಸ್ಟ್ , ರಾಶಿಚಕ್ರ , ಒಲವೇ ಜೀವನ ಶಾಕ್ಷಾತ್ಕಾರ , ನೀನಾನಾದ್ರೆ ನಾನೀನೇನಾ , ಸಹಿ ರಿ ಸಹಿ , ಒಂದಾತ ಭಟ್ರು , ಅಂಧಾಯುಗ , ಸಾಹೇಬರು ಮಂದೆ ಡೋರ್ ಮಿಸ್ಸಿಂಗ್ , ಮಿಸ್ಸಿಂಗ್ ಮಂಡ್ರೆಡ್ ಡು ಹೆಚ್, ಮಿಸ್ಸಿಂಗ್ ಮಂಡ್ರೆಡ್ ಡೋರ್ ಕನ್ನಡ ನಾಟಕಗಳನ್ನು ಒಳಗೊಂಡಿದೆ.
2008 ರ ರಾಜ್ಯ ಚುನಾವಣೆಗಳ ಸಮಯದಲ್ಲಿ ಭಾರತೀಯ ಜನತಾ ಪಕ್ಷದ ಚುನಾವಣಾ ಪ್ರಚಾರ ಮತ್ತು ಪ್ರಣಾಳಿಕೆಯನ್ನು ಪ್ರಚಾರ ಮಾಡಲು ಸಿರ್ದೇಶ್ಪಾಂಡೆ ತಮ ನಾಟಕಗಳನ್ನು ಬಳಸಿದ್ದರು.
ಸಿನಿಮಾಗಳು:
ಸಿರ್ದೇಶಪಾಂಡೆ ಅವರು ಐಡಿಯಾ ಮಾಡ್ಯಾರ ಎಂಬ ಚಲನಚಿತ್ರವನ್ನು ನಿರ್ದೇಶಿಸಿ ನಿರ್ಮಿಸಿದ್ದರು. ರಾಮ ಶಾಮ ಭಾಮ , ಮಠ , ಜೂಟಾಟಟ , ಧಿಮಾಕು , ಶ್ರೀ ದಾನಮದೇವಿ , ಸ್ಟೂಡೆಂಟ್ , ತುತ್ತೂರಿ ಮತ್ತು ಅತಿಥಿ ಚಿತ್ರಗಳಿಗೆ ತಮ ಚಿತ್ರಕಥೆಗಳನ್ನು ಬರೆಯುವ ಮೂಲಕ ಕೊಡುಗೆ ನೀಡಿದ್ದರು. ಅತಿಥಿ ಚಿತ್ರದ ಸಹ ನಿರ್ದೇಶಕರೂ ಆಗಿದ್ದರು. ಅವರು ಹಿಂದಿಯಲ್ಲಿ ಶಾದಿ ಕೆ ಆಫ್ಟರ್ ಎಫೆಕ್ಟ್್ಸ ಮತ್ತು ಮರಾಠಿಯಲ್ಲಿ ಆನ್ ಡ್ಯೂಟಿ ಚೋವಿಸ್ತಾಸ್ನಂತಹ ವಿವಿಧ ಭಾಷೆಗಳಲ್ಲಿ ಸಿನಿಮಾಗಳಿಗಾಗಿ ಕೆಲಸ ಮಾಡಿದ್ದರು. ತಮ ಹೊಸ ಯೋಜನೆಯಾದ ಹಾಡು ಹಕ್ಕಿ ಹಾಡು ಎಂಬ ಕನ್ನಡ ಚಲನಚಿತ್ರ ನಿರ್ಮಾಣದಲ್ಲಿ ನಿರತರಾಗಿದ್ದಾರೆ . ಅವರು ಪ್ರಸ್ತುತ ಮಕ್ಕಳ ಆಧಾರಿತ ಚಲನಚಿತ್ರ ವೆರಿ ಗುಡ್ ಚಿತ್ರೀಕರಣದಲ್ಲಿದ್ದರು.
ಅಡ್ಡ ಹೆಸರುಗಳು:
ಶಿವಮೊಗ್ಗ ರಂಗಭೂಮಿ ಪ್ರಿಯರಿಂದ ನಗೇಯ ಸರ್ದಾರ್, ಉಡುಪಿ ಮಣಿಪಾಲದ ಜನರಿಂದ ೞನಗೇ ನಾಟಕಗಳ ಬಾದ್ಶಾ, ಬಳ್ಳಾರಿ ಕಲಾ ಪ್ರಿಯರಿಂದ ೞನಗೇಗಡಲ ನಾವಿಕ ಕರ್ನಾಟಕ ಪತ್ರಿಕಾ ಮಾಧ್ಯಮದಿಂದ ರಂಗಭೂಮಿಯ ಸೂಪರ್ ಸ್ಟಾರ್ ಒಲಿತು ಬಂದಿತ್ತು.ಉತ್ತಮ ಸಂಭಾಷಣೆ ರಚನೆಗಾಗಿ ಸನ್ಫೀಸ್ಟ್ ಉದಯ ಟಿವಿ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಮಯೂರ ಪ್ರಶಸ್ತಿ, ನಗೆ ಸರದಾರ ಪ್ರಶಸ್ತಿ ಮುಂತಾದ ಪ್ರಶಸ್ತಿ ಗೌರವಗಳು ಸಂದಿವೆ.