ಬೆಂಗಳೂರು,ಆ.14- ಎಷ್ಟೇ ಹಣಬಲ, ತೋಳ್ಬಲ, ಜನಪ್ರಿಯತೆ, ಐಶ್ವರ್ಯ, ಅಂತಸ್ತು ಇದ್ದರೂ ಕಾನೂನಿನ ಮುಂದೆ ಎಲ್ಲವೂ ನಗಣ್ಯ ಎಂಬುದನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಸಾಬೀತು ಮಾಡಿದೆ.
ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠದ ನ್ಯಾಯಮೂರ್ತಿ ವಿಶ್ವಜೀತ್ ಶೆಟ್ಟಿ ಅವರು, ರೇಣುಕಸ್ವಾಮಿ ಕೊಲೆ ಪ್ರಕರಣದ 1ನೇ ಆರೋಪಿ ಪವಿತ್ರಗೌಡ , 2ನೇ ಆರೋಪಿ ದರ್ಶನ್ ಸೇರಿದಂತೆ ಏಳು ಆರೋಪಿಗಳಿಗೆ ನೀಡಿದ್ದ ಜಾಮೀನು ರದ್ದುಪಡಿಸಿ, ನ್ಯಾಯಾಲಯಕ್ಕೆ ತಕ್ಷಣವೇ ಶರಣಾಗಬೇಕು ಇಲ್ಲವೇ ಬಂಧಿಸಬೇಕೆಂದು ಪೊಲೀಸರಿಗೆ ಸೂಚನೆ ಕೊಟ್ಟಿದೆ.
ಸುಪ್ರೀಂಕೋರ್ಟ್ ನೀಡಿರುವ ಈ ತೀರ್ಪು ಆರೋಪಿಗಳಿಗೆ ಸರಿಯಾದ ಪಾಠ ಎಂದು ವ್ಯಾಖ್ಯಾನಿಸಲಾಗಿದ್ದು, ಕಾನೂನು ದೇಶದ ಎಲ್ಲಾ ಪ್ರಜೆಗಳಿಗೂ ಒಂದೇ ಎಂಬುದನ್ನು ಸಾರಿ ಹೇಳಿದೆ. ಕಾನೂನಿನ ಮುಂದೆ ಯಾರೂ ದೊಡ್ಡವರೂ ಇಲ್ಲ ಚಿಕ್ಕವರೂ ಅಲ್ಲ. ಎಲ್ಲರೂ ಒಂದೇ ಆದೇಶದಲ್ಲಿ ಹೇಳಿರುವುದು ಕತ್ತಲಲ್ಲಿ ಬೆಳಕು ಹುಡುಕುವವರಿಗೆ ದಾರಿದೀಪವಾಗಿದೆ ಎಂದು ಹೇಳಲಾಗುತ್ತಿದೆ.
ನ್ಯಾಯಾಲಯ ಎಷ್ಟು ಕಠೋರವಾಗಿ ಆದೇಶ ಬರೆದಿದೆ ಎಂದರೆ ಜೈಲಿನಲ್ಲಿ ಯಾವುದೇ ರೀತಿ ವಿಶೇಷ ಸವಲತ್ತುಗಳು, ಧೂಮಪಾನ ಮಾಡುವುದು ಕಂಡುಬಂದರೆ ಜೈಲಿನ ಅಧೀಕ್ಷಕರು ಸೇರಿದಂತೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ಕೊಟ್ಟಿರುವುದು ಜೈಲುಗಳ ಸುಧಾರಣೆಗೂ ಈ ತೀರ್ಪು ಮುನ್ನುಡಿ ಬರೆದಿದೆ.
ಎಲ್ಲರೂ ಸಮಾನರು. ಆದರೆ ದುಡ್ಡಿದ್ದವರಿಗೆ ಒಂದು, ದುಡ್ಡು ಇಲ್ಲದವರಿಗೆ ಇನ್ನೊಂದು ಎಂಬ ಮಾತು ಜನಸಾಮಾನ್ಯರಲ್ಲಿ ಕೇಳಿಬರುತ್ತಿತ್ತು. ಇದಕ್ಕೆ ಅಪವಾದವೆಂಬಂತೆ ಎಷ್ಟೇ ಜನಪ್ರಿಯತೆ, ದುಡ್ಡು, ಹಣಬಲ, ತೋಳ್ಬಲ, ಪ್ರಭಾವವಿದ್ದರೂ ನ್ಯಾಯಾಲಯದ ಮುಂದೆ ಯಾವುದೂ ನಡೆಯುವುದಿಲ್ಲ ಎಂಬುದು ತೀರ್ಪಿನಿಂದ ಸ್ಪಷ್ಟವಾಗುತ್ತದೆ. ಅಂದಹಾಗೆ ಚಿಕ್ಕ ವಯಸ್ಸಿನಲ್ಲೇ ಜನಪ್ರಿಯತೆಯ ಉತ್ತುಂಗದಲ್ಲಿದ್ದ ದರ್ಶನ್ ಮಾಡಿಕೊಂಡ ಎಡವಟ್ಟುಗಳು ಒಂದಲ್ಲ ಎರಡಲ್ಲ.
ಹಲವು ಬಾರಿ ತಿದ್ದಿಕೊಳ್ಳುವ ಅವಕಾಶವಿದ್ದರೂ ಅವರು ಎಚ್ಚೆತ್ತುಕೊಳ್ಳಲಿಲ್ಲ. ಒಂದು ಕಡೆ ರಾಜ್ಯದ ಪ್ರತಿಷ್ಟಿತ ಕುಟುಂಬದ ಮಕ್ಕಳಿಗೆ ಸರಿಸಮನಾಗಿ ತನಗೆ ಸಿಕ್ಕ ಜನಪ್ರಿಯತೆ, ಹುಚ್ಚು ಅಭಿಮಾನ ಪ್ರತಿ ಚಿತ್ರಕ್ಕೂ ತೆಗೆದುಕೊಳ್ಳುತ್ತಿದ್ದ ಕೋಟಿಗಟ್ಟಲೇ ಸಂಭಾವನೆ ಯಾವುದೂ ಅವರಿಗೆ ತಲೆ ನಿಲ್ಲುವಂತೆ ಮಾಡುತ್ತಿರಲಿಲ್ಲ. ಎಲ್ಲವೂ ನಶೆಯಲ್ಲಿ ತೇಲುವಂತೆ ಮಾಡಿತ್ತು.
ಪತ್ನಿ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣದಲ್ಲಿ ಜೈಲು ಪಾಲಾದಾಗಲೇ ಅವರು ಎಚ್ಚೆತ್ತುಕೊಂಡಿದ್ದರೆ ಅವರು ಇಂದು ಶ್ರೀಕೃಷ್ಣನ ಜನಸ್ಥಳಕ್ಕೆ ಹೋಗುವ ಸಂದರ್ಭಗಳು ಬರುತ್ತಿರಲಿಲ್ಲ.
ದರ್ಶನ್ ವಿವಾದಗಳು :
ಪತ್ನಿ ಮೇಲೆ ಹಲ್ಲೆ:
2011ರಲ್ಲಿ ನಟ ದರ್ಶನ್ ಪತ್ನಿ ವಿಜಯಲಕ್ಷಿ ಮೇಲೆ ಹಲ್ಲೆ ಮಾಡಿ ಮೊದಲ ಬಾರಿ ಜೈಲು ಸೇರಿದ್ದರು. ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದಂತೆ ವಿಜಯಲಕ್ಷಿ ಅವರ ಮೇಲೆ ತೀವ್ರ ಹಲ್ಲೆ ಮಾಡಿದ್ದರು. ವಿಜಯಲಕ್ಷಿ ಅವರ ಮುಖಕ್ಕೆ, ಕೈಗೆ ಗಾಯ ಮಾಡಿದ್ದರು. ವಿಜಯಲಕ್ಷಿ ಅವರೇ ದರ್ಶನ್ ವಿರುದ್ಧ ದೂರು ನೀಡಿದ್ದರು. ದೂರಿನ ಆಧಾರದಲ್ಲಿ ದರ್ಶನ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಆ ಬಳಿಕ ವಿಜಯಲಕ್ಷಿ ಅವರು ದೂರು ವಾಪಸ್ ಪಡೆದರಾದರೂ ಕ್ರಿಮಿನಲ್ ಪ್ರಕರಣವಾಗಿದ್ದರಿಂದ ತನಿಖೆ ಮುಂದುವರೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ 28 ದಿನಗಳ ಕಾಲ ದರ್ಶನ್ ಜೈಲಿನಲ್ಲಿದ್ದರು.
ಸಹ ನಟನ ಮೇಲೆ ಹಲ್ಲೆ:
2019ರಲ್ಲಿ ಬಿಡುಗಡೆಯಾದ ಯಜಮಾನ ಸಿನಿಮಾದ ಚಿತ್ರೀಕರಣದ ಸಮಯದಲ್ಲಿಯೂ ಸಹ ದರ್ಶನ್ ವಿರುದ್ಧ ಹಲ್ಲೆ ಆರೋಪ ಕೇಳಿ ಬಂದಿತ್ತು. ಸಿನಿಮಾದ ಹಾಡೊಂದರ ಶೂಟಿಂಗ್ ನಡೆಯಬೇಕಾದರೆ ಮೊಬೈಲ್ ನಲ್ಲಿ ರೆಕಾರ್ಡಿಂಗ್ ಮಾಡುತ್ತಿದ್ದ ಶಿವಶಂಕರ್ ಹೆಸರಿನ ವ್ಯಕ್ತಿಯೊಬ್ಬರ ಮೇಲೆ ದರ್ಶನ್ ಹಲ್ಲೆ ಮಾಡಿದ್ದಾರೆ ಎನ್ನಲಾಗಿತ್ತು. ಆದರೆ ಈ ಬಗ್ಗೆ ದೂರು ದಾಖಲಾಗಿರಲಿಲ್ಲ.
ಉಮಾಪತಿ-ದರ್ಶನ್ ವಿವಾದ:
ರಾಬರ್ಟ್ ಚಿತ್ರ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಹಾಗೂ ದರ್ಶನ್ ನಡುವೆ 2021ರಲ್ಲಿ ವಿವಾದ ಎದ್ದಿತ್ತು. ಉಮಾಪತಿ ಶ್ರೀನಿವಾಸ್, ತಮ ಹೆಸರು ಬಳಸಿಕೊಂಡು 25 ಕೋಟಿ ರೂ.ಸಾಲ ಪಡೆದು ವಂಚನೆಗೆ ಯತ್ನಿಸಿದ್ದಾರೆ ಎಂದು ದರ್ಶನ್ ಆರೋಪಿಸಿ ದೂರು ಸಹ ದಾಖಲಿಸಿದ್ದರು.
ಆದರೆ ಉಮಾಪತಿ ಶ್ರೀನಿವಾಸ್ ಆ ಆರೋಪವನ್ನು ತಳ್ಳಿ ಹಾಕಿದ್ದಲ್ಲದೆ ತಮ ಪರವಾಗಿ ಸಾಕ್ಷ್ಯಗಳನ್ನು ಸಹ ಬಿಡುಗಡೆ ಮಾಡಿದ್ದರು. ಆ ಘಟನೆ ಬಳಿಕ ಉಮಾಪತಿ ಅವರು ದರ್ಶನ್‌ರಿಂದ ಅಂತರ ಕಾಯ್ದುಕೊಂಡರು.
ದಲಿತ ವ್ಯಕ್ತಿ ಮೇಲೆ ಹಲ್ಲೆ ಆರೋಪ: ದರ್ಶನ್ ಕುರಿತಾಗಿ ಸತತ ವಿವಾದಗಳು ನಡೆಯುತ್ತಿರುವ ಸಮಯದಲ್ಲಿ ನಿರ್ದೇಶಕ ಇಂದ್ರಜಿತ್ ಲಂಕೇಶ್, ದರ್ಶನ್, ದಲಿತ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಾಡಿದ್ದಾರೆಂಬ ಆರೋಪ ಮಾಡಿದರು. ಮೈಸೂರಿನ ಸಂದೇಶ್ ಪ್ರಿನ್‌್ಸ ಹೋಟೆಲ್‌ನಲ್ಲಿ ದಲಿತ ಸಪ್ಲೈಯರ್ ಒಬ್ಬನ ಮೇಲೆ ದರ್ಶನ್ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಯ್ತು.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಹೋಟೆಲ್‌ಗೆ ಭೇಟಿ ನೀಡಿ ತನಿಖೆಯನ್ನು ಸಹ ನಡೆಸಿದರು. ಆದರೆ ದರ್ಶನ್, ಹಲ್ಲೆ ಆರೋಪವನ್ನು ತಳ್ಳಿ ಹಾಕಿದರು.
ಸಂದೇಶ್ ನಾಗರಾಜ್ ಆಡಿಯೋ ಲೀಕ್:
ದರ್ಶನ್‌ಗೆ ಆಪ್ತವಾಗಿದ್ದ ನಿರ್ಮಾಪಕ ಸಂದೇಶ್ ನಾಗರಾಜ್, ನಿರ್ದೇಶಕ ಇಂದ್ರಜಿತ್ ಜೊತೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಒಂದು ಲೀಕ್ ಆಗಿತ್ತು. ಆಡಿಯೋನಲ್ಲಿ, ಸ್ವತಃ ಸಂದೇಶ್ ನಾಗರಾಜ್, ದರ್ಶನ್ ತಮ ಹೋಟೆಲ್?ನಲ್ಲಿ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಾಡಿದ್ದಾಗಿ ಹೇಳಿಕೊಂಡಿದ್ದರು. ಆ ಘಟನೆ ಬಳಿಕ ಸಂದೇಶ್ ಹಾಗೂ ದರ್ಶನ್ ಪರಸ್ಪರ ದೂರಾದರು.
ದರ್ಶನ್ ಫಾರಂ ಹೌಸ್ ಮೇಳೆ ದಾಳಿ: ದರ್ಶನ್‌ರ ಮೈಸೂರಿನ ಫಾರಂ ಹೌಸ್? ಮೇಲೆ ದಾಳಿ ನಡೆಸಿದ್ದ ಅರಣ್ಯ ಇಲಾಖೆ ಸಿಬ್ಬಂದಿ, ಕಾನೂನು ಬಾಹಿರವಾಗಿ ಸಾಕುತ್ತಿದ್ದ ಬಾರ್ ಹೆಡೆಡ್ ಗೂಸ್ ಹೆಸರಿನ ಪಕ್ಷಿಗಳನ್ನು ರಕ್ಷಿಸಿದ್ದರು. ಆ ಪಕ್ಷಿಗಳನ್ನು ಸಾಕಲು ದರ್ಶನ್ ಅರಣ್ಯ ಇಲಾಖೆಯ ಅನುಮತಿ ಪಡೆದುಕೊಂಡಿರಲಿಲ್ಲ.
ದರ್ಶನ್ ವಿರುದ್ಧ ಮಹಿಳಾ ಸಂಘಗಳ ದೂರು:
ಕಾಟೇರ ಸಿನಿಮಾದ ಸಕ್ಸಸ್ ಮೀಟ್?ನಲ್ಲಿ ಮಾತನಾಡಿದ್ದ ನಟ ದರ್ಶನ್, ಮಹಿಳೆಯರ ಬಗ್ಗೆ ಅಗೌರವದಿಂದ ಮಾತನಾಡಿದ್ದಾರೆಂದು ಆರೋಪಿಸಿ ಕೆಲ ಮಹಿಳಾಪರ ಸಂಘಟನೆಗಳು ದರ್ಶನ್ ವಿರುದ್ಧ ದೂರು ದಾಖಲಿಸಿದ್ದವು.