Friday, June 28, 2024
Homeರಾಜ್ಯರೇಣುಕಾಸ್ವಾಮಿ ಕೊಲೆ ಪ್ರಕರಣ : ಆರೋಪಿಗಳ ಮೊಬೈಲ್‌ಗಳ ಪರಿಶೀಲನೆ

ರೇಣುಕಾಸ್ವಾಮಿ ಕೊಲೆ ಪ್ರಕರಣ : ಆರೋಪಿಗಳ ಮೊಬೈಲ್‌ಗಳ ಪರಿಶೀಲನೆ

ಬೆಂಗಳೂರು, ಜೂ.23- ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದು ಇದುವರೆಗೂ 139 ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಇದೀಗ ಆರೋಪಿಗಳ ಮೊಬೈಲ್ಗಳನ್ನು ಪರಿಶೀಲನೆಗೆ ಒಳಪಡಿಸಲಿದ್ದಾರೆ.ಈ ಪ್ರಕರಣದಲ್ಲಿ ಪ್ರಮುಖ ಆರೋಪಿಗಳನ್ನು ಬಂಧಿಸಿ 12 ದಿನಗಳ ಕಾಲ ತಮ ಕಸ್ಟಡಿಯಲ್ಲಿಟ್ಟುಕೊಂಡು ಸುದೀರ್ಘ ವಿಚಾರಣೆ ನಡೆಸಿರುವ ವಿಜಯನಗರ ಉಪವಿಭಾಗದ ಪೊಲೀಸರು ಹಲವು ಸ್ಥಳಗಳಲ್ಲಿ ಮಹಜರು ನಡೆಸಿ ನೂರಾರು ಸಾಕ್ಷ್ಯಗಳನ್ನು ಜಪ್ತಿ ಮಾಡಿದ್ದಾರೆ.

ಪ್ರಮುಖ ಸಾಕ್ಷ್ಯ ಕಲೆ ಹಾಕಲು ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳ ಮೊಬೈಲ್ಗಳನ್ನು ಈಗಾಗಲೇ ವಶಕ್ಕೆ ಪಡೆದಿರುವ ಪೊಲೀಸರು ಇದೀಗ ಅವುಗಳನ್ನು ಎಫ್ಎಸ್ಎಲ್ಗೆ ಕಳುಹಿಸಿ ಡಾಟಾ ರಿಟ್ರೀವ್ ಮಾಡಿಸಲಾಗುತ್ತಿದೆ.ರೇಣುಕಾಸ್ವಾಮಿ ಕೊಲೆಯಾದ ದಿನ ಬಂಧಿತರಾಗಿರುವ ಆರೋಪಿಗಳ ಪೈಕಿ ಯಾರ್ಯಾರು ಎಲ್ಲಿದ್ದರು, ಯಾರಿಗೆ ಕರೆ ಮಾಡಿದರು, ಅಂದು ಘಟನೆಯ ವಿಡಿಯೋ ಮಾಡಲಾಗಿತ್ತೇ?, ಯಾರು ಯಾರಿಗೆ ಎಷ್ಟು ಹಣ ಕಳುಹಿಸಿದರು ಎಬೆಂಲ್ಲಾ ಮಾಹಿತಿಗಾಗಿ ಆರೋಪಿಗಳ ಮೊಬೈಲ್ ಪರಿಶೀಲನೆ ಮಾಡಲಾಗುತ್ತಿದ್ದು, ಇದರಿಂದ ಇನ್ನಷ್ಟು ವಿಷಯಗಳು ಬೆಳಕಿಗೆ ಬರಲಿವೆ.

ಆರೋಪಿ ರಾಘವೇಂದ್ರ ಹಾಗೂ ಕೊಲೆಯಾಗಿರುವ ರೇಣುಕಾಸ್ವಾಮಿ ಮೊಬೈಲ್ಗಳು ಸುಮನಹಳ್ಳಿ ರಾಜಕಾಲುವೆಗೆ ಎಸೆದಿರುವುದರಿಂದ ಸತತ ಹುಡುಕಾಟ ನಡೆಸಿದರೂ ಆ ಮೊಬೈಲ್ಗಳು ಇದುವರೆಗೂ ಪತ್ತೆಯಾಗಿಲ್ಲ.

ಸಿಮ್ ಖರೀದಿ: ಈ ಇಬ್ಬರ ಮೊಬೈಲ್ಗಳು ದೊರೆಯದ ಕಾರಣ ಅವರ ಸಿಮ್ಗಳನ್ನು ಹೊಸದಾಗಿ ಪಡೆದು ಅದರಲ್ಲಿ ಇರುವಂತಹ ಸಂದೇಶಗಳು, ಕರೆ ಮಾಹಿತಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಒಂದು ವೇಳೆ ಆ ಎರಡು ಮೊಬೈಲ್ಗಳು ಸಿಕ್ಕಿದ್ದಲ್ಲಿ ಪೊಲೀಸರ ತನಿಖೆಗೆ ಸಾಕಷ್ಟು ಸಹಕಾರಿ ಆಗಲಿದೆ.ಈ ಪ್ರಕರಣದಲ್ಲಿ ಈಗಾಗಲೇ 139 ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದು, ಈ ಪೈಕಿ ಕೆಲವು ವಸ್ತುಗಳನ್ನು ಎಫ್ಎಸ್ಎಲ್ ಪರೀಕ್ಷೆಗೆ ಕಳುಹಿಸಲಾಗಿದ್ದು, ಅದರ ವರದಿ ಬಂದಲ್ಲಿ ಇನ್ನಷ್ಟು ವಿವರಗಳು ಲಭ್ಯವಾಗಲಿವೆ.

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ ಇದುವರೆಗೂ 17 ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಲಯ ಮುಂದೆ ಹಾಜರು ಪಡಿಸಿದಾಗ ನ್ಯಾಯಾಲಯ ಎಲ್ಲಾ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.ಒಟ್ಟಾರೆ ಈ ಪ್ರಕರಣದಲ್ಲಿ ದೊರೆತಿರುವ ಎಲ್ಲಾ ಸಾಕ್ಷ್ಯಗಳನ್ನು ಹೇಗೆ ಕ್ರೂಢೀಕರಿಸಿ ಪೊಲೀಸರು, ಹೇಗೆ ಚಾರ್ಜ್ಶೀಟ್ ತಯಾರಿಸುತ್ತಾರೆ ಎಂಬುದರ ಮೇಲೆ ದರ್ಶನ್ ಪ್ರಕರಣ ನಿಂತಿದೆ.

RELATED ARTICLES

Latest News