Monday, September 16, 2024
Homeರಾಜ್ಯರೇಣುಕಾಸ್ವಾಮಿ ಪರಿ ಪರಿಯಾಗಿ ಬೇಡಿದರೂ ಬಿಡದೆ ಬಗೆಬಗೆಯಾಗಿ ಹಿಂಸಿಸಿ ಕೊಂದ 'ಡಿ' ಗ್ಯಾಂಗ್

ರೇಣುಕಾಸ್ವಾಮಿ ಪರಿ ಪರಿಯಾಗಿ ಬೇಡಿದರೂ ಬಿಡದೆ ಬಗೆಬಗೆಯಾಗಿ ಹಿಂಸಿಸಿ ಕೊಂದ ‘ಡಿ’ ಗ್ಯಾಂಗ್

Renukaswamy tortured And Murdered

ಬೆಂಗಳೂರು,ಸೆ.5- ಅಣ್ಣಾ….ನಾನು ನಿಮ್ಮ ಪಕ್ಕಾ ಅಭಿಮಾನಿ…. ಇನುಂದೆ ಅಂತಹ ಕೆಲಸ ಮಾಡಲ್ಲ ಪ್ಲೀಸ್ ನನ್ನ ಬಿಟ್ಟುಬಿಡಿ ಎಂದು ರೇಣುಕಾಸಾಮಿ ಕುಕ್ಕರ ಕಾಲಿನಲ್ಲಿ ಕುಳಿತು ಕೈ ಮುಗಿದು ಪರಿ ಪರಿಯಾಗಿ ಬೇಡಿಕೊಂಡರೂ ದರ್ಶನ್ ಅಂಡ್ ಗ್ಯಾಂಗ್ನ ರಾಕ್ಷಸ ಮನಸು ಕರಗದೆ ಆತನನ್ನು ನಿರ್ದಯಿಯಾಗಿ ಕೊಲೆ ಮಾಡಿರುವುದಕ್ಕೆ ಪೊಲೀಸರಿಗೆ ಪಕ್ಕಾ ಸಾಕ್ಷ್ಯ ದೊರೆತಿದೆ.

ಎರಡು ಲಾರಿಗಳ ಮಧ್ಯೆ ಬಿಳಿ ಬನಿಯನ್ ಮತ್ತು ನೀಲಿ ಜೀನ್‌್ಸ ತೊಟ್ಟ ರೇಣುಕಾಸ್ವಾಮಿ ಕುಕ್ಕರ ಕಾಲಿನಲ್ಲಿ ಕುಳಿತು ಪ್ರಾಣ ಬಿಕ್ಷೆ ನೀಡುವಂತೆ ಪರಿ ಪರಿಯಾಗಿ ಬೇಡಿಕೊಳ್ಳುತ್ತಿರುವ ಪೋಟೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಈ ನನ್ನ ಮಗನನ್ನು ಯಾವುದೆ ಕಾರಣಕ್ಕೂ ಜೀವ ಸಹಿತ ಉಳಿಸಬೇಡಿ ಎಂದು ಪವಿತ್ರಾಗೌಡ ಉಳಿದ ಆರೋಪಿಗಳನ್ನು ಪ್ರೋತ್ಸಾಹಿಸುತ್ತಿರುವುದನ್ನು ಆರೋಪಿಯೊಬ್ಬ ಸೆರೆ ಹಿಡಿದಿರುವುದರಿಂದ ದರ್ಶನ್ ಅಂಡ್ ಗ್ಯಾಂಗ್ನ ಪ್ರತಿಯೊಂದು ಕೃತ್ಯವೂ ರೆಕಾರ್ಡ್ ಅಗಿ ಹೋಗಿದೆ.

ಅಷ್ಟೆ ಆಗಿದ್ದರೆ ಪರ್ವಾಗಿಲ್ಲ.. ದರ್ಶನ್ ಅಂಡ್ ಟೀಮ್ನ ಪ್ರತಿಯೊಂದು ಕೃತ್ಯವನ್ನು ತನ್ನ ಫೋನಿನಲ್ಲಿ ಸೆರೆ ಹಿಡಿದ ಆರೋಪಿ ಅಷ್ಟು ದೃಶ್ಯಗಳನ್ನು ತನ್ನ ಮತ್ತೊಬ್ಬ ಸ್ನೇಹಿತನಿಗೆ ಕಳುಹಿಸಿರುವುದರಿಂದ ಎಲ್ಲಾ ಸಾಕ್ಷ್ಯಗಳು ಪೊಲೀಸರ ಕೈ ಸೇರಿವೆ. ಹೀಗಾಗಿಯೇ ಒಂದು ಜೀವ ತೆಗೆಯಲು ಪ್ರೋತ್ಸಾಹಿಸಿದ ಪವಿತ್ರಾಗೌಡ ಅವರನ್ನು ಎ-ಒನ್ ಆರೋಪಿಯನ್ನಾಗಿ ಮಾಡಲಾಗಿದೆ.

ಹೇಗೆ ನಡೆಯಿತು ಕೊಲೆ: ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಅಪಹರಿಸಿದ ದಾಸನ ಗ್ಯಾಂಗ್ ಸೀದಾ ಆತನನ್ನು ಪಟ್ಟಣಗೆರೆಯಲ್ಲಿನ ಜಯಣ್ಣ ಶೆಡ್ಗೆ ಕರೆತಂದಿದೆ. ನಂತರ ದರ್ಶನ್ ಸೇರಿದಂತೆ ಆತನ 12 ಮಂದಿ ಚೇಲಾಗಳು ಮನಸ್ಸೋ ಇಚ್ಚೆ ಥಳಿಸಿದ್ದಾರೆ.

ಮೊದಲು ರೇಣುಕಾಸ್ವಾಮಿಯ ಬಟ್ಟೆ ಬಿಚ್ಚಿಸಿದ ಗ್ಯಾಂಗ್ ಬಿಳಿ ಬನಿಯನ್ ಮತ್ತು ನೀಲಿ ಜೀನ್ಸ್ ನಲ್ಲಿದ್ದ ಆತನ ಮೇಲೆ ಲಾಠಿ, ರಿಪೀಸ್ ಪಟ್ಟಿಯಿಂದ ಎಲ್ಲೆಂದರಲ್ಲಿ ಥಳಿಸಿದ್ದಾರೆ. ಈ ಸಂದರ್ಭದಲ್ಲಿ ಪವಿತ್ರಾಗೌಡ ತನ್ನ ಚಪ್ಪಲಿ ತೆಗೆದು ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ್ದಾರೆ. ಆಗ ಆಕೆ ಹೊಡೆಯುತ್ತಿದ್ದ ಚಪ್ಪಲಿಯನ್ನು ಕಿತ್ತುಕೊಂಡು ದರ್ಶನ್ ಕೂಡ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ್ದಾರೆ.

ಮಾತ್ರವಲ್ಲ, ಮೆಗ್ಗಾನ್ ಯಂತ್ರದಿಂದ ರೇಣುಕಾಸ್ವಾಮಿಗೆ ಕರೆಂಟ್ ಶಾಕ್ ನೀಡಲಾಗಿದೆ. ಆರೋಪಿಗಳ ಹಲ್ಲೆಯಿಂದ ತಲೆಯಲ್ಲಿ ರಕ್ತ ಸೋರುತ್ತಿದ್ದರೂ ಆತ ಕುಕ್ಕರ ಕಾಲಿನಲ್ಲಿ ಕುಳಿತು ತನ್ನ ಆರಾಧ್ಯ ದೈವ ಎಂದು ಭಾವಿಸಿದ್ದ ದರ್ಶನ್ಗೆ ತನ್ನ ಎರಡು ಕೈಗಳನ್ನು ಮುಗಿದು ಅಣ್ಣಾ ನಾನು ನಿಮ ಕಟ್ಟಾ ಅಭಿಮಾನಿ, ಇನುಂದೆ ಇಂತಹ ಕೆಲಸ ಮಾಡಲ್ಲ ತಪ್ಪಾಯ್ತು… ದಯವಿಟ್ಟು ನನ್ನ ಬಿಟ್ಟುಬಿಡಿ ಎಂದು ಬೇಡಿಕೊಳ್ಳುತ್ತಿದ್ದಾರೆ. ಪವಿತ್ರಾಗೌಡ ಈ ನನ್ನ ಮಗನನ್ನುಯಾವುದೇ ಕಾರಣಕ್ಕೂ ಜೀವ ಸಹಿತ ಉಳಿಸಬೇಡಿ ಎಂದು ಪ್ರೋತ್ಸಾಹಿಸಿದ್ದರಿಂದ ಪ್ರೇರೆಪಿತನಾದ ದರ್ಶನ್ ಆತನ ತಲೆಯನ್ನು ಹಿಂದಿದ್ದ ಲಾರಿಗೆ ಅಪ್ಪಳಿಸಿದ್ದಾರೆ.

ಅಷ್ಟಾದರೂ ಅವರ ರಾಕ್ಷಸ ಮನಸು ಕರಗದೆ ರೇಣುಕಾಸ್ವಾಮಿಯ ಪ್ಯಾಂಟ್ ಬಿಚ್ಚಿಸಿ ಆತನ ಮರ್ಮಾಂಗಕ್ಕೆ ಜಾಡಿಸಿ ಒದ್ದಾಗ ವಿಲ ವಿಲ ಒದ್ದಾಡಿ ಪ್ರಾಣ ಬಿಟ್ಟಿದ್ದಾನೆ.ರೇಣುಕಾಸ್ವಾಮಿಯ ಪ್ರಾಣ ಪಕ್ಷಿ ಹಾರಿಹೋಯಿತು ಎಂಬುದು ತಿಳಿದಾಗ ಈ ಶವವನ್ನು ಹೇಗಾದರೂ ವಿಲೇವಾರಿ ಮಾಡಿ ಎಂದು ತನ್ನ ಪಟಾಲಂಗೆ ಆದೇಶಿಸಿ ದರ್ಶನ್ ಸ್ಥಳದಿಂದ ಜಾಗ ಖಾಲಿ ಮಾಡುವ ಎಲ್ಲ ದೃಶ್ಯಗಳು ಮೊಬೈಲ್ ಫೋನಿನಲ್ಲಿ ಸೆರೆಯಾಗಿವೆ.

ಪ್ರಾಣ ಕಳೆದುಕೊಂಡಿದ್ದ ರೇಣುಕಾಸ್ವಾಮಿಯ ದೇಹದ ಮೇಲೆ 39 ಗಾಯದ ಗುರುತುಗಳು ಪತ್ತೆಯಾಗಿರುವುದು ದರ್ಶನ್ ಅಂಡ್ ಗ್ಯಾಂಗ್ನ ರಾಕ್ಷಸಿ ಕೃತ್ಯಕ್ಕೆ ಸಾಕ್ಷಿಯಾಗಿದೆ.12 ಆರೋಪಿಗಳ ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆದು ಎಫ್ಎಸ್ಎಲ್ಗೆ ಕಳುಹಿಸಿದಾಗ ಆರೋಪಿಗಳಲ್ಲೇ ಒಬ್ಬ ತನ್ನ ಫೋನಿನಲ್ಲಿ ಸೆರೆ ಹಿಡಿದಿದ್ದ ಎಲ್ಲಾ ದೃಶ್ಯಗಳು ಪೊಲೀಸರಿಗೆ ಸಿಕ್ಕಿವೆ.

ಅದರಲ್ಲೂ ರೇಣುಕಾಸ್ವಾಮಿ ಮೇಲೆ ದರ್ಶನ್ ಅಂಡ್ ಗ್ಯಾಂಗ್ ನಡೆಸಿದ್ದ ಭೀಕರ ಹಲ್ಲೇ ದೃಶ್ಯಗಳ ಪ್ರಮುಖ ನಾಲ್ಕು ಫೋಟೋಗಳು ಪೊಲೀಸರಿಗೆ ಪಕ್ಕಾ ಸಾಕ್ಷಿಯಾಗಿವೆ.ಈ ಎಲ್ಲಾ ಸಾಕ್ಷ್ಯಾಧಾರಗಳನ್ನು ಪೊಲೀಸರು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ.

RELATED ARTICLES

Latest News