Thursday, September 19, 2024
Homeಅಂತಾರಾಷ್ಟ್ರೀಯ | Internationalಭಾರತ-ಸಿಂಗಾಪುರ ನಡುವೆ ಮಹತ್ವದ ಒಪ್ಪಂದಗಳಿಗೆ ಪ್ರಧಾನಿ ಮೋದಿ ಸಹಿ

ಭಾರತ-ಸಿಂಗಾಪುರ ನಡುವೆ ಮಹತ್ವದ ಒಪ್ಪಂದಗಳಿಗೆ ಪ್ರಧಾನಿ ಮೋದಿ ಸಹಿ

India, Singapore announce agreements on semiconductors, healthcare

ಸಿಂಗಾಪುರ,ಸೆ.5- ಸೆಮಿ ಕಂಡಕ್ಟರ್ ಒಪ್ಪಂದ ಸೇರಿದಂತೆ ಸಿಂಗಾಪುರದೊಂದಿಗೆ ಹಲವಾರು ಮಹತ್ವದ ಒಪ್ಪಂದಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಹಿ ಹಾಕಿದ್ದಾರೆ.ಎರಡು ದಿನಗಳ ಪ್ರವಾಸಕ್ಕೆ ಆಗಮಿಸಿರುವ ಪ್ರಧಾನಿ ಮೋದಿ ಅವರು ಇಂದು ಸಿಂಗಾಪುರ ಪ್ರಧಾನಿ ಲಾರೆನ್‌್ಸ ವಾಂಗ್ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದ ನಂತರ ಹಲವಾರು ಒಪ್ಪಂದಗಳಿಗೆ ಸಹಿ ಹಾಕಿದರು.

ಡಿಜಿಟಲ್ ತಂತ್ರಜ್ಞಾನ, ಆರೋಗ್ಯ ಮತ್ತು ಔಷಧ, ಶೈಕ್ಷಣಿಕ ಸಹಕಾರ ಮತ್ತು ಕೌಶಲ್ಯ ಅಭಿವದ್ಧಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪ್ರಧಾನಿ ಮೋದಿ ಮತ್ತು ಲಾರೆನ್‌್ಸ ವಾಂಗ್ ಅವರ ಸಮುಖದಲ್ಲಿ ಭಾರತ ಮತ್ತು ಸಿಂಗಾಪುರದ ನಡುವೆ ಹಲವಾರು ಒಪ್ಪಂದಗಳಿಗೆ ಸಹಿ ಹಾಕಲಾಯಿತು.

ಈ ಸಂದರ್ಭದಲ್ಲಿ ವಿದೇಶಾಂಗ ಸಚಿವ ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಇತರ ಹಿರಿಯ ಅಧಿಕಾರಿಗಳು ಪ್ರಧಾನಿ ಮೋದಿಯವರೊಂದಿಗೆ ಉಪಸ್ಥಿತರಿದ್ದರು. ಇದಾದ ನಂತರ, ಪಿಎಂ ಮೋದಿ ಸಿಂಗಾಪುರದ ಸಂಸತ್ತನ್ನು ತಲುಪಿದರು, ಅಲ್ಲಿ ಇಬ್ಬರೂ ನಾಯಕರು ಪರಸ್ಪರ ದೇಶದ ಮಂತ್ರಿಗಳು ಮತ್ತು ನಿಯೋಗ ಸದಸ್ಯರನ್ನು ಭೇಟಿ ಮಾಡಿದರು.

ಭಾರತ-ಸಿಂಗಾಪುರ ಸೆಮಿಕಂಡಕ್ಟರ್ ಇಕೋಸಿಸ್ಟಮ್ ಪಾಲುದಾರಿಕೆಗೆ ಸಂಬಂಧಿಸಿದಂತೆ ಒಪ್ಪಂದಕ್ಕೆ ಸಹಿ ಹಾಕಿವೆ ಎರಡೂ ದೇಶಗಳು ಸೆಮಿಕಂಡಕ್ಟರ್ ಕ್ಲಸ್ಟರ್ ಅಭಿವದ್ಧಿ ಮತ್ತು ಸೆಮಿಕಂಡಕ್ಟರ್ ವಿನ್ಯಾಸ ಮತ್ತು ಉತ್ಪಾದನೆಯ ಮೇಲೆ ಕೇಂದ್ರೀಕರಿಸಲು ತೀರ್ಮಾನಿಸಿವೆ.
ಆರು ವರ್ಷಗಳ ನಂತರ ಪ್ರಧಾನಿ ಮೋದಿ ಸಿಂಗಾಪುರ ತಲುಪಿದ್ದಾರೆ.

ಮೋದಿಯವರ ಸಿಂಗಾಪುರ ಭೇಟಿ ಭಾರತದ ಆಕ್ಟ್ ಈಸ್ಟ್ ನೀತಿಗೆ ಮಹತ್ವದ್ದಾಗಿದೆ. ಆಸಿಯಾನ್ ದೇಶಗಳಲ್ಲಿ ಸಿಂಗಾಪುರ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ. ಈ ಸಂದರ್ಭದಲ್ಲಿ, ಪ್ರಧಾನಿ ಮೋದಿ ಅವರು ವ್ಯಾಪಾರ ನಾಯಕರು ಮತ್ತು ಅನೇಕ ದೊಡ್ಡ ಕಂಪನಿಗಳ ಸಿಇಒಗಳನ್ನು ಭೇಟಿ ಮಾಡಲಿದ್ದಾರೆ.

ಈ ಅವಧಿಯಲ್ಲಿ, ದಕ್ಷಿಣ ಚೀನಾ ಸಮುದ್ರ ಮತ್ತು ವ್ಯಾನಾರ್ನಂತಹ ಪ್ರಾದೇಶಿಕ ಸಮಸ್ಯೆಗಳನ್ನು ಚರ್ಚಿಸುವ ಸಾಧ್ಯತೆಗಳಿವೆ. ದಕ್ಷಿಣ ಚೀನಾ ಸಮುದ್ರದ ಕೆಲವು ಭಾಗಗಳು ತನ್ನದೇ ಎಂದು ಚೀನಾ ಹೇಳಿಕೊಂಡಿದೆ, ಇದರಿಂದಾಗಿ ಪ್ರಾದೇಶಿಕ ಮಟ್ಟದಲ್ಲಿ ಶಾಂತಿಗೆ ಧಕ್ಕೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಭಾರತದ ಆಕ್ಟ್ಈಸ್ಟ್ ಪಾಲಿಸಿ ಅಡಿಯಲ್ಲಿ, ಬ್ರೂನಿ ಮತ್ತು ಸಿಂಗಾಪುರಕ್ಕೆ ಮೋದಿ ಭೇಟಿ ನೀಡಿರುವುದು ಮಹತ್ವ ಪಡೆದುಕೊಂಡಿದೆ.

ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡುವ ತಮ ಬದ್ಧತೆಯನ್ನು ಪುನರುಚ್ಚರಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ತನ್ನ ಮೂರನೇ ಅವಧಿಯಲ್ಲಿ ದೇಶವನ್ನು ಅರೆವಾಹಕಗಳ ಉತ್ಪಾದನಾ ಕೇಂದ್ರವನ್ನಾಗಿ ಮಾಡಲಾಗುವುದು ಎಂದು ಇತ್ತೀಚೆಗಷ್ಟೇ ಹೇಳಿದ್ದರು.

RELATED ARTICLES

Latest News