Wednesday, September 11, 2024
Homeಮನರಂಜನೆಡಾರ್ಲಿಂಗ್‌ ಕೃಷ್ಣ ಮನೆಗೆ ಪುಟ್ಟಗೌರಿ ಆಗಮನ, ಹೆಣ್ಣುಮಗುವಿಗೆ ಜನ್ಮ ನೀಡಿದ ನಟಿ ಮಿಲನಾ

ಡಾರ್ಲಿಂಗ್‌ ಕೃಷ್ಣ ಮನೆಗೆ ಪುಟ್ಟಗೌರಿ ಆಗಮನ, ಹೆಣ್ಣುಮಗುವಿಗೆ ಜನ್ಮ ನೀಡಿದ ನಟಿ ಮಿಲನಾ

Kannada actor Milana Nagraj welcomes baby girl with Darling Krishna

ಬೆಂಗಳೂರು, ಸೆ.5- ಮದರಂಗಿ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಡಾರ್ಲಿಂಗ್‌ ಕೃಷ್ಣ ಎಂದೇ ಬಿಂಬಿಸಿಕೊಂಡಿರುವ ಕೃಷ್ಣನ ಮನೆಗೆ ಗೌರಿ ಹಬ್ಬದ ಮುನ್ನ ದಿನ ಪುಟ್ಟ ಗೌರಿ (ಹೆಣ್ಣು ಮಗು) ಆಗಮನವಾಗಿದೆ.

ಲವ್‌ ಮಾಕ್ಟೇಲ್‌ ಚಿತ್ರದ ನಂತರ ನಿಜ ಜೀವನದಲ್ಲೂ ಒಂದಾಗಿದ್ದ ಡಾರ್ಲಿಂಗ್‌ ಕೃಷ್ಣ ಹಾಗೂ ಮಿಲನಾ ಜೋಡಿ ಗಮನ ಸೆಳೆದಿದ್ದರು. ಇಂದು ಮುಂಜಾನೆ ಮಿಲನಾ ನಾಗರಾಜ್‌ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

`ಮಗಳು ಹುಟ್ಟಿದ್ದಾಳೆ. ತಾಯಿ, ಮಗು ಆರೋಗ್ಯವಾಗಿದ್ದಾರೆ. ಈ ಪಯಣದಲ್ಲಿ ಮಿಲನಾ ನಾಗರಾಜ್‌ ಅನುಭವಿಸಿದ ನೋವು, ಮಾಡಿದ ತ್ಯಾಗ, ತೋರಿದ ಧೈರ್ಯಕ್ಕೋಸ್ಕರ ನನಗೆ ಆಕೆಯ ಬಗ್ಗೆ ಹೆಮ್ಮೆ ಇದೆ. ಈ ಜರ್ನಿಯಲ್ಲಿ ಸಾಗುವ ಎಲ್ಲ ತಾಯಂದರಿಗೆ ನನ್ನ ಸೆಲ್ಯೂಟ್‌. ಇದನ್ನು ನೋಡಿ ನನಗೆ ಮಹಿಳೆಯರ ಮೇಲೆ ಇದ್ದ ಗೌರವ ದುಪ್ಪಟ್ಟಾಗಿದೆ.

ನಾನು ಅದೃಷ್ಟವಂತ ತಂದೆ ಮತ್ತು ನನಗೆ ಹೆಮ್ಮೆ ಇದೆ ಯಾಕೆಂದರೆ ನನಗೀಗ ಮಗಳಿದ್ದಾಳೆ’ ಎಂದು ತಮ್ಮ ಸಂತಸವನ್ನು ಕೂಡ ಸಾಮಾಜಿಕ ಜಾಲತಾಣದ ಮೂಲಕ ಡಾರ್ಲಿಂಗ್‌ ಕೃಷ್ಣ ಹಂಚಿಕೊಂಡಿದ್ದಾರೆ.

RELATED ARTICLES

Latest News