Friday, April 4, 2025
Homeರಾಷ್ಟ್ರೀಯ | Nationalಪರೇಡ್ ರಿಹರ್ಸಲ್‍ನಿಂದ ಇಂಡಿಯನ್ ಗೇಟ್ ಬಳಿ ಟ್ರಾಫಿಕ್ ಜಾಮ್

ಪರೇಡ್ ರಿಹರ್ಸಲ್‍ನಿಂದ ಇಂಡಿಯನ್ ಗೇಟ್ ಬಳಿ ಟ್ರಾಫಿಕ್ ಜಾಮ್

ನವದೆಹಲಿ, ಜ 11 (ಪಿಟಿಐ) ಗಣರಾಜ್ಯೋತ್ಸವ ಪರೇಡ್ ರಿಹರ್ಸಲ್‍ನಿಂದಾಗಿ ಕೇಂದ್ರ ದೆಹಲಿಯ ಇಂಡಿಯಾ ಗೇಟ್ ಬಳಿ ನಾಲ್ಕು ಗಂಟೆಗಳ ಕಾಲ ಸಂಚಾರ ದಟ್ಟಣೆ ಉಂಟಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಜಯ್ ಚೌಕ್ ಮತ್ತು ಸುತ್ತಮುತ್ತಲಿನ ಕ್ರಾಸಿಂಗ್‍ಗಳನ್ನು ತಪ್ಪಿಸುವಂತೆ ದೆಹಲಿ ಸಂಚಾರ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿಕೊಂಡಿದ್ದಾರೆ.

ಗಣರಾಜ್ಯೋತ್ಸವದ ಪರೇಡ್ ಪೂರ್ವಾಭ್ಯಾಸದ ಕಾರಣ ಇಂದು 7.00 ಗಂಟೆಯಿಂದ 11.30 ಗಂಟೆಗಳವರೆಗೆ ವಿಜಯ್ ಚೌಕ್, ರಫಿ ಮಾರ್ಗ-ಕರ್ತವ್ಯಪಥ್ ಕ್ರಾಸಿಂಗ್, ಜನಪಥ್-ಕಾರ್ತವ್ಯಪಥ್ ಕ್ರಾಸಿಂಗ್, ಮತ್ತು ಮಾನ್ ಸಿಂಗ್ ರಸ್ತೆ- ಕರ್ತವ್ಯಪಥ್ ಕ್ರಾಸಿಂಗ್ ಅನ್ನು ದಯವಿಟ್ಟು ತಪ್ಪಿಸಿ ಎಂದು ಅದು ದೆಹಲಿ ಪೊಲೀಸರು ಎಕ್ಸ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

ಶಿವಮೊಗ್ಗದಿಂದ ಗೀತಾ ಶಿವರಾಜಕುಮಾರ್ ಸ್ಪರ್ಧೆ..?

ನಿನ್ನೆ ಪರೇಡ್ ರಿಹರ್ಸಲ್‍ನಿಂದಾಗಿ ರಾಷ್ಟ್ರ ರಾಜಧಾನಿಯಲ್ಲಿ ವಿಪರಿತ ಟ್ರಾಫಿಕ್ ಜಾಮ್ ಉಂಟಾಗಿತ್ತು ಇದನ್ನು ಗಮನದಲ್ಲಿಟ್ಟುಕೊಂಡು ಪೋಲೀಸರು ಈ ಪೋಸ್ಟ್ ಮಾಡಿದ್ದಾರೆ.

RELATED ARTICLES

Latest News