Saturday, August 16, 2025
Homeರಾಜ್ಯಬೆಂಗಳೂರಿನ ಟನಲ್‌ ರಸ್ತೆ ನಿರ್ಮಾಣಕ್ಕೆ ಮುಗಿಬಿದ್ದ ಪ್ರತಿಷ್ಠಿತ ಸಂಸ್ಥೆಗಳು

ಬೆಂಗಳೂರಿನ ಟನಲ್‌ ರಸ್ತೆ ನಿರ್ಮಾಣಕ್ಕೆ ಮುಗಿಬಿದ್ದ ಪ್ರತಿಷ್ಠಿತ ಸಂಸ್ಥೆಗಳು

Reputable companies bid for the construction of Bangalore's tunnel road

ಬೆಂಗಳೂರು, ಆ.16– ನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಟನಲ್‌ ರಸ್ತೆ ನಿರ್ಮಾಣ ಕಾಮಗಾರಿಯ ಗುತ್ತಿಗೆ ಪಡೆಯಲು ದೇಶದ ಹಲವಾರು ಸಂಸ್ಥೆಗಳು ಮುಂದೆ ಬಂದಿವೆ.
ಅದಾನಿ, ಎಲ್‌‍ಅಂಡ್‌ಟಿ, ಮೇಘಾ, ಐಟಿಡಿ, ವಿಶ್ವಸಮುದ್ರ, ಟಾಟಾ ಸಮೂಹ ಸಂಸ್ಥೆಗಳು, ಜಯಶಂಕರ್‌, ಸೀಗಲ್‌9. ಆಫ್ಕಾನ್‌್ಸನಂತಹ ಘಟನಾಘಟಿ ಸಂಸ್ಥೆಗಳು ಬಿಡ್‌ ಮಾಡಿವೆ.

17.698 ಕೋಟಿ ವೆಚ್ಚದಲ್ಲಿ ಸಿಲಿಕಾನ್‌ ಸಿಟಿಯ ಬಹು ನಿರೀಕ್ಷಿತ ಟನಲ್‌ ರಸ್ತೆ ನಿರ್ಮಿಸಲು ಟೆಂಡರ್‌ ಕರೆಯಲಾಗಿದೆ. ನಗರದ ಹೆಬ್ಬಾಳ ಜಂಕ್ಷನ್‌ ನಿಂದ ಶೇಷಾದ್ರಿ ರಸ್ತೆ ವರೆಗೆ..ಶೇಷಾದ್ರಿ ರಸ್ತೆಯಿಂದ ಸಿಲ್‌್ಕ ಬೋರ್ಡ್‌ ಜಂಕ್ಷನ್‌ ವರೆಗೆ ಟನಲ್‌ ರಸ್ತೆ ನಿರ್ಮಿಸುವ ಎರಡು ಪ್ಯಾಕೇಜ್‌ಗಳನ್ನು ಈ ಯೋಜನೆ ಹೊಂದಿವೆ.

ಈ ಯೋಜನೆಯ ಬಿಡ್‌ ಮಾಡಿ ಶೇ. 60 ರಷ್ಟು ಹಣ ಹೂಡಿಕೆ ಮಾಡಿ ಟನಲ್‌ ರಸ್ತೆ ನಿರ್ಮಾಣ ಮಾಡಬೇಕು. ಕಾಮಗಾರಿ ಪೂರ್ಣಗೊಂಡ ನಂತರ 30 ವರ್ಷಗಳ ಕಾಲ ಟೋಲ್‌ ಸಂಗ್ರಹ ಮಾಡಲು ಅವಕಾಶ ನೀಡಲಾಗುತ್ತದೆ.

RELATED ARTICLES

Latest News