ಹಾಂಕಾಂಗ್, ಅ.9- ಇಲ್ಲಿನ ಕಟ್ಟಡವೊಂದರಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಬೆಂಕಿ ಅನಾಹುತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು 12 ಮಂದಿ ಗಾಯಗೊಂಡಿದ್ದಾರೆ. ಹಾಂಗ್ ಕಾಂಗ್‍ನ ಜೋರ್ಡಾನ್‍ನಲ್ಲಿರುವ ನ್ಯೂ ಲಕ್ಕಿ ಹೌಸ್ ಎಂಬ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ.ಪ್ರಸ್ತುತ ಮೂವರು ಪುರುಷರು ಮತ್ತು ಒಬ್ಬ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಟ್ಟಡದ ಒಳಗಿರುವವರಿಂದ ಸಹಾಯಕ್ಕಾಗಿ ಇನ್ನೂ ಕರೆಗಳು ಬರುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.ಬೆಳಿಗ್ಗೆ 7:53 ಕ್ಕೆ ಬೆಂಕಿ ಬಿದ್ದಿರುವ ಬಗ್ಗೆ ಬಂದ ಮಾಹಿತಿ ನಂತರ ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದರು ಎಂದು ಅಕಾರಿಗಳು ತಿಳಿಸಿದ್ದಾರೆ.
ಸೌತ್ ಚೀನಾ ಮಾನಿರ್ಂಗ್ ಪೋಸ್ಟ್ ಸೇರಿದಂತೆ ಸ್ಥಳೀಯ ಮಾಧ್ಯಮಗಳು ಮೊದಲ ಮಹಡಿಯಲ್ಲಿರುವ ಜಿಮ್‍ನಲ್ಲಿ ಬೆಂಕಿ ಕಾಣಿಸಿಕೊಂಡು ವ್ಯಾಯಾಮ ಮಾಡಲು ಬಂದಿದ್ದ ಅನೇಕರು ಆತಂಕಗೊಂಡು ಅಲ್ಲಿಂದ ಜೀವ ಉಳಿಸಿಕೊಳಲು ಪರದಾಡಿದ್ದಾರೆ.ಸುಮಾರು ಮೂರು ತಾಸಿನ ನಂತರ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ವರದಿ ತಿಳಿಸಿದೆ.