ಕೋಲ್ಕತಾ, ಮಾ. 20: ಬರೊಬ್ಬರಿ 7 ತಿಂಗಳ ನಂತರ ಆರ್‌ಜಿಕರ್ ಆಸ್ಪತ್ರೆಯಲ್ಲಿ ಅತ್ಯಾಚಾರಕ್ಕಿಡಾಗಿ ಕೊಲೆಯಾದ ವೈದ್ಯೆಯ ಮರಣ ಪ್ರಮಾಣವನ್ನು ಆಕೆಯ ಪೋಷಕರಿಗೆ ಹಸ್ತಾಂತರಿಸಲಾಗಿದೆ.
ಮರಣ ಪ್ರಮಾಣ ಪತ್ರ ನೀಡುವಂತೆ ಪೋಷಕರು ಒತ್ತಡ ಹಾಕುತ್ತಿದ್ದರೂ ಪತ್ರ ನೀಡಲು ಮೀನಾಮೇಷ ಎಣಿಸುತ್ತಿದ್ದ ಬಂಗಾಳ ಸರ್ಕಾರ ಇದೀಗ ದಿಢೀರ್ ಅವರ ಮನೆಗೆ ಭೇಟಿ ನೀಡಿ ಪ್ರಮಾಣ ಪತ್ರ ನೀಡಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಪಶ್ಚಿಮ ಬಂಗಾಳದ ಆರೋಗ್ಯ ಕಾರ್ಯದರ್ಶಿ ಎನ್ ಎಸ್ ನಿಗಮ್ ಅವರೊಂದಿಗೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಮತ್ತು ಉಪ ಪ್ರಾಂಶುಪಾಲ, ವರೊಂದಿಗೆಮೃತ ವೈದ್ಯರ ನಿವಾಸಕ್ಕೆ ಭೇಟಿ ನೀಡಿ ಮೂಲ ಮರಣ ಪ್ರಮಾಣಪತ್ರವನ್ನು ಪೋಷಕರಿಗೆ ತಲುಪಿಸಿದರು.
ಅವರಿಗೆ ಮೂಲ ಮರಣ ಪ್ರಮಾಣಪತ್ರದ ಅಗತ್ಯವಿತ್ತು. ಇಂದು, ನಾನು ಇಲ್ಲಿಗೆ ಬಂದು ಅದನ್ನು ಅವರಿಗೆ ಹಸ್ತಾಂತರಿಸಿದೆ. ಯಾವುದೇ ಚರ್ಚೆಗಳು ನಡೆದಿಲ್ಲ ಎಂದು ನಿಗಮ್ ಹೇಳಿದರು. ಸರ್ಕಾರಿ ಸ್ವಾಮ್ಯದ ಸಂಸ್ಥೆಯಲ್ಲಿ ದುರಂತ ಘಟನೆ ನಡೆದ ದಿನವಾದ ಆಗಸ್ಟ್ 9 ರಿಂದ ಮರಣ ಪ್ರಮಾಣಪತ್ರಕ್ಕಾಗಿ ಒತ್ತಾಯಿಸುತ್ತಿದ್ದ ಸಂತ್ರಸ್ತೆಯ ತಂದೆ, ಆರೋಗ್ಯ ಕಾರ್ಯದರ್ಶಿ ಇದ್ದಕ್ಕಿದ್ದಂತೆ ನಮ್ಮ ನಿವಾಸಕ್ಕೆ ಬಂದು ಮೂಲ ದಾಖಲೆಯನ್ನು ನೀಡಿದರು ಎಂದು ಹೇಳಿದರು.
ನಾವು ಅದನ್ನು ಪಡೆಯಲು ಹೆಣಗಾಡುತ್ತಿದ್ದೇವೆ. ನಾವು ಜನವರಿಯಲ್ಲಿ ಇಮೇಲ್ ಕಳುಹಿಸಿದ್ದೇವೆ ಮತ್ತು ಅದರ ನಂತರವೂ ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಗೆ ಹೋಗಬೇಕಾಯಿತು. ಆದರೆ ಯಾರೂ ಸಹಕರಿಸಲಿಲ್ಲ ಎಂದು ಅವರು ಆರೋಪಿಸಿದರು.