Friday, November 22, 2024
Homeರಾಜ್ಯರಾಜ್ಯದಲ್ಲಿ ನದಿಗಳ ಜೋಡಣೆ ಅಧ್ಯಯನಕ್ಕೆ ಕೇಂದ್ರ ನಿಯೋಗ

ರಾಜ್ಯದಲ್ಲಿ ನದಿಗಳ ಜೋಡಣೆ ಅಧ್ಯಯನಕ್ಕೆ ಕೇಂದ್ರ ನಿಯೋಗ

ಬೆಂಗಳೂರು,ಜ.7- ದೇಶದಲ್ಲಿ ನದಿ ಜೋಡಣೆ ವಿಷಯ ಕುರಿತು ಅಧ್ಯಯನ ನಡೆ ಸುತ್ತಿರುವ ಕೇಂದ್ರ ಸಂಸದರ ನಿಯೋಗ ಇದೇ 17 ಮತ್ತು 18 ರಂದು ರಾಜ್ಯದಲ್ಲಿ ಪ್ರವಾಸ ಕೈಗೊಂಡು ನಮ್ಮ ನದಿಗಳನ್ನು ವೀಕ್ಷಿಸಲಿದೆ ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ನದಿ ಜೋಡಣೆ ದೇಶಾದ್ಯಂತ ದೊಡ್ಡ ವಿಷಯವಾಗಿ ಚರ್ಚೆಯಾಗುತ್ತಿದೆ. ಇದರ ಬಗ್ಗೆ ಸದ್ಯಕ್ಕೆ ವಿಸ್ತೃತವಾದ ಸಮಾಲೋಚನೆಗಳು ನಡೆಯುತ್ತಿವೆ. 31 ಜನ ಸಂಸದರ ನಿಯೋಗ ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ನೀರಾವರಿ ಸಮಸ್ಯೆಗಳ ಬಗ್ಗೆ ಸಮಾಲೋಚನೆ ನಡೆಸಲಿದೆ ಎಂದು ಹೇಳಿದರು. ಇಂದು ಬೆಳಿಗ್ಗೆ ಪತ್ರಿಕಾಗೋಷ್ಠಿಯಲ್ಲಿ, ಕೃಷ್ಣ ಮೇಲ್ದಂಡೆ ಯೋಜನೆಯ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದು ನಿಂತಿರುವ ಮೆಣಸಿನಕಾಯಿ ಬೆಳೆಗಳನ್ನು ಸಂರಕ್ಷಿಸಲು ತಕ್ಷಣದಿಂದಲೇ 2.75 ಟಿಎಂಸಿ ನೀರನ್ನು ಕಾಲುವೆಗಳಿಗೆ ಹರಿಸಲಾಗುತ್ತಿದೆ ಎಂದು ತಿಳಿಸಿದರು.

ಕೃಷ್ಣ ಮೇಲ್ದಂಡೆ ಯೋಜನೆ ವ್ಯಾಪ್ತಿಯ ರಾಯಚೂರು, ಬಾಗಲಕೋಟೆ, ಯಾದಗಿರಿ ಸೇರಿದಂತೆ ವಿವಿಧ ಜಿಲ್ಲೆಗಳ ರೈತರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಚಿವರು, ಜಿಲ್ಲಾಧಿಕಾರಿಗಳು, ನೀರಾವರಿ ಅಧಿಕಾರಿಗಳು ಸೇರಿದಂತೆ ಎಲ್ಲರೊಂದಿಗೆ ನಿನ್ನೆ ರಾತ್ರಿ ವಿಡಿಯೋ ಕಾನರೆನ್ಸ್ ಸಭೆ ನಡೆಸಲಾಗಿದೆ. ಬೆಳೆದು ನಿಂತಿರುವ ಮೆಣಸಿನಕಾಯಿ ಬೆಳೆಗೆ ನೀರು ಒದಗಿಸುವಂತೆ ಒತ್ತಾಯಿಸಿ ರೈತರು ಕಚೇರಿಯ ಮುಂದೆ ಗುಂಡಿ ತೋಡಿಕೊಂಡು ಅದರಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರವನ್ನು ಈ ರೀತಿಯ ಬ್ಲಾಕ್‍ಮೇಲ್ ಮಾಡುವುದು ಒಳ್ಳೆಯದಲ್ಲ ಎಂದು ನಾನು ಅವರಿಗೆ ತಿಳಿಸಿದ್ದೇನೆ ಎಂದರು.

ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳೆರಡರಿಂದಲೂ ಒಟ್ಟು 154 ಟಿಎಂಸಿ ನೀರು ಸಂಗ್ರಹ ಸಾಮಥ್ರ್ಯವಿದೆ. ಆದರೆ ಪ್ರಸ್ತುತ 2 ಜಲಾಶಯಗಳಿಂದಲೂ 47.01 ಟಿಎಂಸಿ ಮಾತ್ರ ಲಭ್ಯವಿದೆ. ಇದರಲ್ಲಿ ಕುಡಿಯುವ ನೀರು ಹಾಗೂ ಇತರ ಅಗತ್ಯಗಳಿಗಾಗಿ ಮುಂದಿನ ಜೂನ್ 30 ರವರೆಗೂ 38.788 ಟಿಂಎಂಸಿ ನೀರಿನ ಅಗತ್ಯವಿದೆ. ಬಾಷ್ಪೀಕರಣ ಹಿನ್ನೀರಿನ ಬಳಕೆಗೆ 3.90 ಟಿಎಂಸಿ ನೀರನ್ನು ರಕ್ಷಿಸಬೇಕು. ಆಲಮಟ್ಟಿಯಿಂದ ನಾರಾಯಣಪುರ ಜಲಾಶಯಕ್ಕೆ ನೀರು ಹರಿಯುವಾಗ 1.50 ಟಿಎಂಸಿ ಸರಬರಾಜು ನಷ್ಟವಾಗಲಿದೆ. ಇದನ್ನೆಲ್ಲಾ ಪರಿಗಣಿಸಿದರೆ ಒಟ್ಟು 44.188 ಟಿಎಂಸಿಯನ್ನು ಕಾಯ್ದಿರಿಸಬೇಕು. ಬಳಕೆಗೆ ಲಭ್ಯವಿರುವುದು 2.8 ಟಿಎಂಸಿ ಮಾತ್ರ. ಇದರಲ್ಲಿ 2.75 ಟಿಎಂಸಿಯನ್ನು ತಕ್ಷಣದಿಂದಲೇ ಹರಿಸಲಾಗುವುದು ಎಂದು ತಿಳಿಸಿದರು.

ಪ್ರತಿ ಜಿಲ್ಲೆಗಳಲ್ಲಿ ಆರ್ಟ್ ಗ್ಯಾಲರಿ ಸ್ಥಾಪನೆ : ಸಿಎಂ ಸಿದ್ದರಾಮಯ್ಯ

ಬಿಡುಗಡೆ ಮಾಡುವ ನೀರನ್ನು ಅಚ್ಚುಕಟ್ಟು ಭಾಗದ ಕೊನೆಯವರೆಗೂ ತಲುಪಿಸುವ ಜವಾಬ್ದಾರಿಯನ್ನು ಖುದ್ದು ರೈತ ಮುಖಂಡರು, ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು, ಪೊಲೀಸ್ ಇಲಾಖೆಯವರು ನಿರ್ವಹಿಸಬೇಕಿದೆ ಎಂದು ಹೇಳಿದರು.

ರಾಜ್ಯದಲ್ಲಿ 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಕೃಷ್ಣಾ ಮೇಲ್ದಂಡೆ ಅಚ್ಚುಕಟ್ಟು ಭಾಗದಲ್ಲಿ 92 ತಾಲೂಕುಗಳು ಬರಪೀಡಿತವಾಗಿದೆ. ಸದ್ಯಕ್ಕೆ ಮಳೆ ಬರುವ ನಿರೀಕ್ಷೆ ಕಡಿಮೆ ಇದೆ. ಹೀಗಾಗಿ ಜಲಾಶಯದಲ್ಲಿನ ನೀರನ್ನು ಕಾಯ್ದುಕೊಳ್ಳುವುದು ಅತ್ಯಂತ ಮುಖ್ಯವಾಗಿದೆ ಎಂದರು.

RELATED ARTICLES

Latest News