ಬೆಂಗಳೂರು, ಜ.18- ಬಿಬಿಎಂಪಿ ಶಾಲೆ ಮಕ್ಕಳಿಗೆ ರಸ್ತೆ ಸುರಕ್ಷತೆ ಕುರಿತು ಜಾಗತಿ ಮೂಡಿಸುವುದರ ಜೊತೆಗೆ ಹೆಲೆಟ್ ವಿತರಣೆ ಮಾಡಲಾಯಿತು.ಪಿಳ್ಳಣ್ಣ ಗಾರ್ಡನ್ನಲ್ಲಿರುವ ಬಿಬಿಎಂಪಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಹಮಿಕೊಳ್ಳಲಾಗಿದ್ದ ಅಂತರ ಶಾಲಾ ವಿಜ್ಞಾನ ಪ್ರದರ್ಶನದಲ್ಲಿ ಸ್ವಯಂ ಸೇವಾ ಸಂಘಟನೆ ವತಿಯಿಂದ ಬಿಬಿಎಂಪಿ ಶಾಲೆಯಲ್ಲಿ 10 ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹೆಲೆಟ್ ವಿತರಿಸಲಾಯಿತು.
ಇದರ ಜೊತೆಗೆ ದ್ವಿಚಕ್ರ ವಾಹನ ಚಲಾಯಿಸುವ ಮತ್ತು ಸವಾರಿ ಮಾಡುವಾಗ ಕಡ್ಡಾಯವಾಗಿ ಹೆಲೆಟ್ ಧರಿಸಬೇಕು ಮತ್ತು ಟ್ರಾಫಿಕ್ ನಿಯಮಗಳನ್ನು ಪಾಲಿಸಬೇಕು ಹಾಗೂ ಕೆಂಪುದೀಪ ತೋರಿದಾಗ ವಾಹನ ನಿಲ್ಲಸಬೇಕು, ಹಸಿರು ದೀಪ ತೋರಿದಾಗ ವಾಹನ ಸಾಗಬೇಕು ಎಂದು ಅರಿವು ಮೂಡಿಸಲಾಯಿತು.
ಪೂರ್ವ ವಲಯ ಸಹಾಯಕ ವಿದ್ಯಾಧಿಕಾರಿ ಹೆಚ್.ಜೆ.ಕುಮಾರ್, ಪ್ರಾಂಶುಪಾಲ ಸೋಮಶೇಖರ್ ಎನ್. ಎಸ್, ಚೈಲ್ಡ್ ರೈಟ್ಸ್ ಆಂಡ್ ಯೂ ಸಾಮಾಜಿಕ ಸೇವಾ ಸಂಘಟನೆ ಪದಾಧಿಕಾರಿಗಳು ಪಾಲ್ಗೊಂಡಿದ್ದರು.