Saturday, November 1, 2025
Homeಜಿಲ್ಲಾ ಸುದ್ದಿಗಳು | District Newsಶಾಲೆ ಬೀಗ ಮುರಿದು ಸಿಸಿಟಿವಿ ಸಮೇತ 80 ಸಾವಿರ ನಗದು ದೋಚಿದ ಖದೀಮರು

ಶಾಲೆ ಬೀಗ ಮುರಿದು ಸಿಸಿಟಿವಿ ಸಮೇತ 80 ಸಾವಿರ ನಗದು ದೋಚಿದ ಖದೀಮರು

ಮೈಸೂರು, ಜೂ.16- ಶಾಲೆ ಬೀಗ ಮುರಿದು ಸಿಸಿ ಟಿವಿ ಡಿವಿಆರ್‌ ಸಮೇತ 80 ಸಾವಿರ ನಗದು ದೋಚಿದ ಘಟನೆ ಜಿಲ್ಲೆಯ ಹುಣಸೂರು ತಾಲೂಕು ಬಿಳಿಕೆರೆ ಹೋಬಳಿಯ ಮರದೂರು ಗ್ರಾಮದ ಬಳಿ ನಡೆದಿದೆ. ಲ್ಯಾಸಿಲೆಟ್‌ ಶಾಲೆಯಲ್ಲಿ ಈ ಘಟನೆ ನಡೆದಿದೆ.

ಕೃತ್ಯ ನಡೆಸಿದ ಖದೀಮರು ಪೊಲೀಸರಿಗೆ ಸುಳಿವು ತಪ್ಪಿಸಲು ಸಿಸಿ ಕ್ಯಾಮರಾದ ಡಿವಿಆರ್‌ ಅನ್ನು ಕ್ದೊಯ್ದಿದ್ದಾರೆ.ಸ್ಥಳಕ್ಕೆ ಬೆರಳಮುದ್ರೆ ಘಟಕದ ಸಿಬ್ಬಂದಿಗಳು ಹಾಗೂ ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಿಳಿಕೆರೆ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
RELATED ARTICLES

Latest News