Monday, November 25, 2024
Homeಕ್ರೀಡಾ ಸುದ್ದಿ | Sportsವಿಶ್ವದ ನಂ.1 ಸ್ಥಾನಕ್ಕೆ ಲಗ್ಗೆ ಇಟ್ಟ ರೋಹನ್ ಬೋಪಣ್ಣ

ವಿಶ್ವದ ನಂ.1 ಸ್ಥಾನಕ್ಕೆ ಲಗ್ಗೆ ಇಟ್ಟ ರೋಹನ್ ಬೋಪಣ್ಣ

ಮೆಲ್ಬೋರ್ನ್, ಜ.24 (ಪಿಟಿಐ) : ಭಾರತದ ರೋಹನ್ ಬೋಪಣ್ಣ ಅವರು ಇಲ್ಲಿ ತಮ್ಮ ಜೊತೆಗಾರ ಮ್ಯಾಥ್ಯೂ ಎಬ್ಡೆನ್ ಅವರೊಂದಿಗೆ ಆಸ್ಟ್ರೇಲಿಯನ್ ಓಪನ್‍ನ ಸೆಮಿಫೈನಲ್ ತಲುಪಿದ ನಂತರ ಪುರುಷರ ಡಬಲ್ಸ್‍ನಲ್ಲಿ ವಿಶ್ವ ನಂ.1 ಶ್ರೇಯಾಂಕವನ್ನು ಸಾಸಿದ ಅತ್ಯಂತ ಹಿರಿಯ ಟೆನಿಸ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ವಿಶ್ವ ನಂ. 3 ಆಗಿದ್ದ ಬೋಪಣ್ಣ ಮತ್ತು ಆಸ್ಟ್ರೇಲಿಯನ್ ಎಬ್ಡೆನ್ ಇಲ್ಲಿ ಒಂದು ಗಂಟೆ 46 ನಿಮಿಷಗಳ ಕಾಲ ನಡೆದ ಕ್ವಾರ್ಟರ್ ಫೈನಲ್‍ನಲ್ಲಿ ಆರನೇ ಶ್ರೇಯಾಂಕದ ಅರ್ಜೆಂಟೀನಾದ ಜೋಡಿಯಾದ ಮ್ಯಾಕ್ಸಿಮೊ ಗೊನ್ಜಾಲೆಜ್ ಮತ್ತು ಆಂಡ್ರೆಸ್ ಮೊಲ್ಟೆನಿ ವಿರುದ್ಧ 6-4, 7-6 (5) ಅಂತರದ ಗೆಲುವು ದಾಖಲಿಸಿದರು.

ಎರಡನೇ ಶ್ರೇಯಾಂಕದ ಇಂಡೋ-ಆಸ್ಟ್ರೇಲಿಯನ್ ಜೋಡಿಯು ಸೆಮಿಫೈನಲ್‍ನಲ್ಲಿ ಶ್ರೇಯಾಂಕ ರಹಿತ ತೋಮಸ್ ಮಚಾಕ್ ಮತ್ತು ಝಿಜೆನ್ ಝಾಂಗ್ ಅವರೊಂದಿಗೆ ಕಾದಾಡಲಿದ್ದಾರೆ. ಟೂರ್ನಿಯ ಅಂತ್ಯದ ನಂತರ ಬೋಪಣ್ಣ ಹೊಸ ಅಂಕಪಟ್ಟಿ ಅಲಂಕರಿಸಲಿದ್ದಾರೆ.

ಅಯೋಧ್ಯೆಯತ್ತ ಹರಿದು ಬರತ್ತಲೇ ಇದೆ ಭಕ್ತ ಸಾಗರ

ಇದಕ್ಕೂ ಮುನ್ನ ಅಮೆರಿಕದ ರಾಜೀವ್ ರಾಮ್ ವಿಶ್ವದ ನಂ. 1 ಅವರು ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ 38 ನೇ ವಯಸ್ಸಿನಲ್ಲಿ ಅಕ್ಟೋಬರ್ 2022 ರಲ್ಲಿ ಅಗ್ರ ಶ್ರೇಯಾಂಕವನ್ನು ಸಾಸಿದ್ದರು.ಮತ್ತೊಂದೆಡೆ, ಎಬ್ಡೆನ್ ವಿಶ್ವದ 2 ನೇ ಸ್ಥಾನವನ್ನು ತಲುಪಲು ಸಿದ್ಧರಾಗಿದ್ದಾರೆ.

2013 ರಲ್ಲಿ ಮೊದಲ ಬಾರಿಗೆ ವಿಶ್ವದ ನಂ. 3 ರ್ಯಾಂಕ್ ಗಳಿಸಿದ್ದ ಬೋಪಣ್ಣ, ಲಿಯಾಂಡರ್ ಪೇಸ್, ಮಹೇಶ್ ಭೂಪತಿ ಮತ್ತು ಸಾನಿಯಾ ಮಿರ್ಜಾ ನಂತರ ಡಬಲ್ಸ್‍ನಲ್ಲಿ ವಿಶ್ವದ ನಂಬರ್ ಒನ್ ರ್ಯಾಂಕ್ ಪಡೆದ ನಾಲ್ಕನೇ ಭಾರತೀಯರಾಗಿದ್ದಾರೆ.ಅವರು ಯುಎಸ್‍ಎಯ ಆಸ್ಟಿನ್ ಕ್ರಾಜಿಸೆಕ್ ಮತ್ತು ಅವರ ಕ್ರೊಯೇಷಿಯಾದ ಪಾಲುದಾರ ಇವಾನ್ ಡೋಡಿಗ್ ಎರಡನೇ ಸುತ್ತಿನಲ್ಲಿ ಸೋತ ನಂತರ ಅಗ್ರ ಸ್ಥಾನವನ್ನು ಪಡೆದುಕೊಳ್ಳುತ್ತಾರೆ.

ಬೋಪಣ್ಣ ಅವರು 2017 ರಲ್ಲಿ ಕೆನಡಾದ ಗ್ಯಾಬ್ರಿಯೆಲಾ ಡಬ್ರೊವ್ಸ್ಕಿ ಅವರೊಂದಿಗೆ ಫ್ರೆಂಚ್ ಓಪನ್‍ನಲ್ಲಿ ಮಿಶ್ರ ಡಬಲ್ಸ್ ಪ್ರಶಸ್ತಿಯನ್ನು ಗೆದಿದ್ದರು. ಆದಾಗ್ಯೂ, 2010 ರಲ್ಲಿ ಪಾಕಿಸ್ತಾನದ ಐಸಾಮ್ -ಉಲ್ -ಹಕ್ ಖುರೆಶ್ ಮತ್ತು 2023 ರಲ್ಲಿ ಎಬ್ಡೆನ್ ಅವರೊಂದಿಗೆ ಅಮೆರಿಕ ಓಪನ್‍ನಲ್ಲಿ ಎರಡು ಬಾರಿ ರನ್ನರ್-ಅಪ್ ಮುಗಿಸಿದ ನಂತರ ಪುರುಷರ ಡಬಲ್ಸ್‍ನಲ್ಲಿ ಪ್ರಶಸ್ತಿಯನ್ನು ತಪ್ಪಿಸಿಕೊಂಡಿದ್ದರು.

RELATED ARTICLES

Latest News