Saturday, July 19, 2025
Homeರಾಜ್ಯರೌಡಿ ಬಿಕ್ಲು ಶಿವ ಕೊಲೆ ಪ್ರಕರಣ : ವಿಚಾರಣೆಗೆ ಹಾಜರಾದ ಶಾಸಕ ಭೈರತಿ ಬಸವರಾಜು

ರೌಡಿ ಬಿಕ್ಲು ಶಿವ ಕೊಲೆ ಪ್ರಕರಣ : ವಿಚಾರಣೆಗೆ ಹಾಜರಾದ ಶಾಸಕ ಭೈರತಿ ಬಸವರಾಜು

Rowdy Biklu Shiva murder case, MLA Bhairati Basavaraju appears for questioning

ಬೆಂಗಳೂರು, ಜು.19- ಕೊಲೆ ಪ್ರಕರಣವೊಂದರಲ್ಲಿ ಆರೋಪಿಯಾಗಿರುವ ಶಾಸಕ ಭೈರತಿ ಬಸವರಾಜು ಅವರು ವಿಚಾರಣೆಗೆ ತನಿಖಾಧಿಕಾರಿ ಮುಂದೆ ಹಾಜರಾದರು.ಈ ಹಿನ್ನೆಲೆಯಲ್ಲಿ ಭಾರತಿನಗರ ಪೊಲೀಸ್ ಠಾಣೆ ಮುಂಭಾಗ ಬ್ಯಾರಿಕೇಡ್‌ಗಳನ್ನು ಹಾಕಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಭೈರತಿಬಸವರಾಜು ಅವರು ಐದನೇ ಆರೋಪಿ.ಈಗಾಗಲೇ ಈ ಪ್ರಕರಣದಲ್ಲಿ ನಾಲ್ಕು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಉಳಿದವರಿಗಾಗಿ ಶೋಧ ಮುಂದುವರೆಸಿದ್ದಾರೆ.

ರೌಡಿ ಶಿವಪ್ರಕಾಶ್‌ ಕೊಲೆ ಪ್ರಕರಣ ಸಂಬಂಧ ಎಫ್‌ಐಆರ್ ನಲ್ಲಿ ಭೈರತಿಬಸವರಾಜು ಅವರ ಹೆಸರು ನಮೂದಿಸಿರುವುದರಿಂದ ಹೆಣ್ಣೂರು ಸಮೀಪದ ಭೈರತಿಯಲ್ಲಿರುವ ಅವರ ಮನೆಗೆ ಪೊಲೀಸರು ಹೋಗಿ ಎರಡು ದಿನದೊಳಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿ ಬಂದಿದ್ದರು.ಈ ಹಿನ್ನೆಲೆಯಲ್ಲಿ ಅವರು ಇಂದು ಮಧ್ಯಾಹ್ನ ವಿಚಾರಣೆಗೆ ಹಾಜರಾದರು.

ಕಳೆದ ಮಂಗಳವಾರ ರಾತ್ರಿ ನಗರದ ಹಲಸೂರು ಕೆರೆ ಬಳಿ ತನ್ನ ಮನೆಯ ಮುಂದೆ ರೌಡಿಶೀಟರ್ ಶಿವಪ್ರಕಾಶ್ ಆಲಿಯಾಸ್ ಬಿಕ್ಷು ಶಿವ ನಿಂತಿದ್ದಾಗ ಸ್ಯಾಂಟ್ರೋ ಕಾರಿನಲ್ಲಿ ಬಂದಿದ್ದ ಏಳೆಂಟು ಮಂದಿ ದುಷ್ಕರ್ಮಿಗಳು ಅಟ್ಟಾಡಿಸಿಕೊಂಡು ಮಾರಕಾಸ್ತ್ರಗಳಿಂದ ಮನಬಂದಂತೆ ಹಲ್ಲೆ ನಡೆಸಿ ಕೊಚ್ಚಿ ಕೊಲೆ ಮಾಡಿದ್ದರು.

ಈ ಬಗ್ಗೆ ಭಾರತಿನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಎಫ್‌ಐಆರ್ ನಲ್ಲಿ ಐದನೇ ಆರೋಪಿಯಾಗಿ ಭೈರತಿಬಸವರಾಜು ಅವರ ಹೆಸರನ್ನು ನಮೂದಿಸಿದ್ದಾರೆ. ಕಿತ್ತಗಾನಹಳ್ಳಿ ಜಮೀನಿನ ವಿಚಾರದಲ್ಲಿ ಈ ಕೊಲೆ ನಡೆದಿದೆ ಎಂಬುವುದು ಪೊಲೀಸರ ಇದುವರೆಗಿನ ತನಿಖೆಯಿಂದ ತಿಳಿದುಬಂದಿದೆ.

RELATED ARTICLES

Latest News