ಬೆಂಗಳೂರು,ಸೆ.6- ಕೊಲೆ ಸೇರಿದಂತೆ 19 ಪ್ರಕರಣಗಳಲ್ಲಿ ಭಾಗಿಯಾಗಿದ ರೌಡಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಅಂದ್ರಹಳ್ಳಿ ನಿವಾಸಿ ಅಭಿಷೇಕ್ ಅಲಿಯಾಸ್ ಅಂದ್ರಳ್ಳಿ ಅಭಿ ಮೃತಪಟ್ಟ ರೌಡಿ.
ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ರೌಡಿಪಟ್ಟಿಯಲ್ಲಿ ಈತನ ಹೆಸರಿದೆ. ಕೊಲೆ, ಕೊಲೆಯತ್ನ ಸೇರಿದಂತೆ ಬರೋಬ್ಬರಿ 19 ಪ್ರಕರಣಗಳು ಈತನ ಮೇಲಿದೆ. ಸುಂಕದಕಟ್ಟೆಯಲ್ಲಿರುವ ಪತ್ನಿ ಮನೆಗೆ ರಾತ್ರಿ ಅಭಿಷೇಕ್ ಹೋಗಿದ್ದಾಗ ಎದೆನೋವು ಕಾಣಿಸಿಕೊಂಡಿದೆ.
ತಕ್ಷಣ ಕುಟುಂಬದವರು ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಇಂದು ಬೆಳಗಿನಜಾವ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಈ ಸಂಜೆಗೆ ತಿಳಿಸಿದ್ದಾರೆ.