ಬೆಂಗಳೂರು, ಮಾ.5– ಬಾರ್‌ನಲ್ಲಿ ಕುಳಿತಿದ್ದ ರೌಡಿ ಜಯರಾಮ್‌ನನ್ನು ಕೊಲೆ ಮಾಡಿ ಪರಾರಿಯಾಗಿರುವ ಆರೋಪಿಗಳ ಬಂಧನಕ್ಕೆ ಸೋಲದೇವನಹಳ್ಳಿ ಠಾಣೆ ಪೊಲೀಸರು ನಾಲ್ಕು ವಿಶೇಷ ತಂಡಗಳನ್ನು ರಚಿಸಿದ್ದಾರೆ.
ಹಳೆ ದ್ವೇಷದಿಂದ ಈತನನ್ನು ಕೊಲೆಮಾಡಿರುವ ಶಂಕೆ ವ್ಯಕ್ತವಾಗಿದ್ದು, ಪರಾರಿಯಾಗಿರುವ ಆರೋಪಿಗಳಿಗಾಗಿ ಈ ತಂಡಗಳು ಹುಡುಕಾಟ ನಡೆಸುತ್ತಿದ್ದಾರೆ. ಯಲಹಂಕದ ಕೊಡತಿ ತಿರುಮಲಪುರ ನಿವಾಸಿಯಾದ ಈತ ಕೋಳಿ ಅಂಗಡಿ ಇಟ್ಟುಕೊಂಡಿದ್ದನು.
ನಿನ್ನೆ ರಾತ್ರಿ ಮದ್ಯ ಸೇವಿಸಲು ಹೆಸರಘಟ್ಟ ರಸ್ತೆಯ ಬಾರ್‌ವೊಂದಕ್ಕೆ ಹೋಗಿದ್ದಾಗ ನಾಲೈದು ಮಂದಿ ದುಷ್ಕರ್ಮಿಗಳು ಬಾರ್‌ಗೆ ನುಗ್ಗಿ ಮಾರಕಾಸ್ತ್ರಗಳಿಂದ ಮನ ಬಂದಂತೆ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಈತ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಎಂದು ಪೊಲೀಸರು ತಿಳಿಸಿದ್ದಾರೆ.