Thursday, January 16, 2025
Homeಬೆಂಗಳೂರುಅಪಾರ್ಟ್‌ಮೆಂಟ್‌ನಲ್ಲಿ ರೌಡಿ ಕೊಲೆ ಪ್ರಕರಣ : ಆರೋಪಿಗಳಿಗಾಗಿ ತೀವ್ರ ಶೋಧ

ಅಪಾರ್ಟ್‌ಮೆಂಟ್‌ನಲ್ಲಿ ರೌಡಿ ಕೊಲೆ ಪ್ರಕರಣ : ಆರೋಪಿಗಳಿಗಾಗಿ ತೀವ್ರ ಶೋಧ

Rowdy murder case in apartment

ಬೆಂಗಳೂರು, ಜ.16- ಹಣ ಕೊಡುವುದಾಗಿ ಅಪಾರ್ಟ್‌ಮೆಂಟ್‌ಗೆ ಕರೆಸಿಕೊಂಡು ರೌಡಿಯನ್ನು ಕೊಲೆ ಮಾಡಿ ಶವವನ್ನು ನಿರ್ಜನ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಸುಟ್ಟು ಹಾಕಿರುವ ಬಗ್ಗೆ ಬಾಗಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಇಲ್ಲಿನ ನಿವಾಸಿ ಜೋಸ್ಫಿನ್ ಎಂಬುವರು ತನ್ನ ಪತಿ ಗುಣ ಅವರು ಕಾಣೆಯಾಗಿದ್ದಾರೆಂದು ಬಾಗಲೂರು ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.ತಾನು 12 ವರ್ಷಗಳ ಹಿಂದೆ ಗುಣ ಅವರನ್ನು ಮದುವೆಯಾಗಿದ್ದು, 10 ಹಾಗೂ 6 ವರ್ಷದ ಇಬ್ಬರು ಮಕ್ಕಳಿದ್ದಾರೆ. ನನ್ನ ಗಂಡ ನಾಯಿಗಳನ್ನು ಸಾಕಿ ಮಾರಾಟ ಮಾಡುತ್ತಿದ್ದರು.

ಜ. 10ರಂದು ಮಧ್ಯಾಹ್ನ 12.30ರ ಸುಮಾರಿನಲ್ಲಿ ಕೆಲಸ ಇರುವುದಾಗಿ ಹೇಳಿ ಪ್ರೆಸ್ಟೇಜ್ ಅಪಾರ್ಟ್ಮೆಂಟ್ನಲ್ಲಿ ಹಣ ಪಡೆದುಕೊಂಡು ಬರುವುದಾಗಿ ತಿಳಿಸಿ ಹೋಗಿದ್ದು, ಸಂಜೆಯಾದರೂ ವಾಪಸ್ ಬಂದಿಲ್ಲ. ಪತಿಯ ಜೊತೆ ಹೋಗಿದ್ದ ಚಂದ್ರು ಅವರನ್ನು ವಿಚಾರಿಸಿದಾಗ ನನಗೆ ಗೊತ್ತಿಲ್ಲ. ನಾನು ಪಾರ್ಕಿಂಗ್ ಸ್ಥಳದಲ್ಲಿ ನಿಂತಿದ್ದೆ ಎಂದು ಹೇಳಿದ್ದಾರೆ.

ನಾನು ಫೋನ್ ಮಾಡಿದಾಗ ಅಪರಿಚಿತರು ನನ್ನ ಗಂಡನ ಮೊಬೈಲ್ ಕರೆ ಸ್ವೀಕರಿಸಿ ಚಿಕ್ಕಬಳ್ಳಾಪುರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿರುವುದಾಗಿ ತಿಳಿಸಿ ಅಲ್ಲಿಯೂ ವಿಚಾರಿಸಿದಾಗ ಯಾರು ಇಲ್ಲವೆಂದು ಹೇಳಿದ್ದಾರೆ. ಹಾಗಾಗಿ ನನ್ನ ಪತಿಯನ್ನು ಹುಡುಕಿಕೊಡುವಂತೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಬಾಗಲೂರು ಠಾಣೆ ಪೊಲೀಸರು ಅಪಾರ್ಟ್ಮೆಂಟ್ಗೆ ಹೋಗಿ ಸಿಸಿ ಕ್ಯಾಮೆರಾವನ್ನು ಪರಿಶೀಲಿಸಿದಾಗ ಫ್ಲಾಟ್ನಲ್ಲಿ ವಾಸವಿರುವ ಬ್ರಿಜೇಶ್ ಎಂಬಾತನನ್ನು ಸ್ನೇಹಿತ ಚಂದ್ರು ಗುರುತಿಸಿದ್ದಾರೆ.

ಬ್ರಿಜೇಶ್ ಮತ್ತೊಬ್ಬನೊಂದಿಗೆ ಸೇರಿಕೊಂಡು ಅಂದು ರಾತ್ರಿ 8.45ರ ಸುಮಾರಿನಲ್ಲಿ ಗುಣ ಅವರ ಮೃತದೇಹವನ್ನು ಬೆಡ್ಶೀಟ್ನಲ್ಲಿ ಎಳೆದುಕೊಂಡು ಲಿಫ್ಟ್ ನಲ್ಲಿ ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬೆಡ್ಶೀಟ್ ರಕ್ತವಾಗಿರು ವುದನ್ನು ಪೊಲೀಸರು ಗಮನಿಸಿದ್ದಾರೆ. ಗುಣ ಅವರನ್ನು ಕೊಲೆ ಮಾಡಿ ಮೃತದೇಹ ಯಾರಿಗೂ ಸಿಗಬಾರದೆಂದು ಹೊರಗೆ ತೆಗೆದುಕೊಂಡು ಬಿಸಾಡಲು ಹೋಗಿರುವುದು ಗೊತ್ತಾಗಿದೆ. ಬ್ರಿಜೇಶ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಿದ್ದು, ಪೊಲೀಸರು ಆರೋಪಿಗಳಿಗಾಗಿ ಶೋಧ ಕೈಗೊಂಡಿದ್ದಾರೆ.

RELATED ARTICLES

Latest News