Sunday, November 24, 2024
Homeರಾಷ್ಟ್ರೀಯ | Nationalತಲೆಮರೆಸಿಕೊಂಡಿದ್ದ ಪೊಲೀಸರ ಇನ್ಸ್‌ಪೆಕ್ಟರ್ ಮನೆಯಿಂದ 1 ಕೋಟಿ ನಗದು, ಕೆಜಿ ಚಿನ್ನ ವಶ

ತಲೆಮರೆಸಿಕೊಂಡಿದ್ದ ಪೊಲೀಸರ ಇನ್ಸ್‌ಪೆಕ್ಟರ್ ಮನೆಯಿಂದ 1 ಕೋಟಿ ನಗದು, ಕೆಜಿ ಚಿನ್ನ ವಶ

ಛತ್ರಪತಿ ಸಂಭಾಜಿನಗರ, ಮೇ 17-ಮಹಾರಾಷ್ಟ್ರದ ಬೀಡ್‌ ಜಿಲ್ಲೆಯ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿದ್ದ ಪೋಲೀಸ್‌‍ ಅಧಿಕಾರಿ ಮನೆಯಲ್ಲಿ 1.08 ಕೋಟಿ ರೂಪಾಯಿ ನಗದು ಮತ್ತು 72 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೊಲೀಸ್‌‍ ಇನ್ಸ್‌ಪೆಕ್ಟರ್ ಹರಿಭಾವು ಖಾಡೆ (52) ಮನೆಯಲ್ಲಿ ಈ ಸಂಪತ್ತು ಪತ್ತೆಯಾಗಿದ್ದು, ಕಳೆದ ಮೇ 15 ರಂದು ವರ ಮೇಲೆ ಪ್ರಕರಣ ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿದ್ದರು. ಅಪರಾಧ ಪ್ರಕರಣವೊಂದಲ್ಲಿ ಆರೋಪಿಗೆ ಸಹಾಯ ಮಾಡಲು ಹರಿಭಾವು ಖಾಡೆ ಮತ್ತು ಇತರ ಇಬ್ಬರ ವಿರುದ್ಧ 1 ಕೋಟಿ ರೂ.ಗೆ ಬೇಡಿಕೆಯಿಟ್ಟ ಬಗ್ಗೆ ದೂರು ಬಂದಿತ್ತು ಅದನ್ನು 30 ಲಕ್ಷಕ್ಕೆ ಇಳಿಸಿದ್ದರು.

ಆರಂಭಿಕ ಕಂತಿನ 5 ಲಕ್ಷ ರೂ.ಗಳನ್ನು ಸಂಗ್ರಹಿಸಿದ ನಂತರ ಆರೋಪಿಗಳಲ್ಲಿ ಒಬ್ಬನಾದ ಕುಶಾಕ್‌ ಜೈನ್‌ (29) ಅನ್ನು ಎಸಿಬಿ ಮೊದಲು ಬಲೆಗೆ ಬೀಳಿಸಿತು.ವಾರಂಟ್‌ ಪಡೆದ ನಂತರ ಎಸಿಬಿ ತಂಡ ಚಾಣಕ್ಯಪುರಿ ಪ್ರದೇಶದಲ್ಲಿರುವ ಖಾಡೆ ಅವರ ಮನೆಯನ್ನು ಶೋಧಿಸಿದರು ಈ ವೇಳೆ 1.08 ಕೋಟಿ ನಗದು, 970 ಗ್ರಾಂ ಚಿನ್ನಾಭರಣ ಹಾಗೂ 72 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 5.5 ಕೆಜಿ ಬೆಳ್ಳಿಯನ್ನು ವಶಪಡಿಸಿಕೊಂಡಿದ್ದಾರೆ.

ಖಾಡೆ ಮಾಲೀಕತ್ವದ ನಾಲ್ಕು ಫ್ಲಾಟ್‌ಗಳು ಮತ್ತು ವಾಣಿಜ್ಯ ಮಳಿಗೆಗೆ ಸಂಬಂಧಿಸಿದ ಆಸ್ತಿ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಎಸಿಬಿಅಧಿಕಾರಿ ತಿಳಿಸಿದ್ದಾರೆ

RELATED ARTICLES

Latest News