ಪಾಲ್ಘರ್, ನ.9- ಅಕ್ರಮವಾಗಿ ವ್ಯಾನ್‌ನಲ್ಲಿ ಸಾಗಿಸಲಾಗುತ್ತಿದ್ದ ಸುಮಾರು 3.70 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಚುನಾವಣಾ ಅಧಿಕಾರಿಗಳು ಹಾಗು ಪೊಲೀಸರ ತಂಡ ವಶಪಡಿಸಿಕೊಂಡಿದೆ.
ಕರಾವಳಿ ಜಿಲ್ಲೆಯ ವಾಡಾದಲ್ಲಿ ಈ ಭಾರಿ ಪ್ರಮಾಣದ ಹಣವನ್ನು ಕಳೆದ ರಾತ್ರಿ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಇನ್ಸ್ ಪೆಕ್ಟರ್ ದತ್ತ ಕಿಂದ್ರೆ ತಿಳಿಸಿದ್ದಾರೆ.
ಪಾಲ್ಘರ್ ಜಿಲ್ಲೆಯ ಮೂಲಕ ವ್ಯಾನ್ನಲ್ಲಿ ನಗದು ಸಾಗಿಸುತ್ತಿರುವ ಬಗ್ಗೆ ಪೊಲೀಸರ ವಿಚಕ್ಷಣಾ ಮತ್ತು ಫ್ಲೈಯಿಂಗ್ ಸ್ಕ್ವಾಡ್ಗೆ ಸುಳಿವು ಸಿಕ್ಕಿದ್ದು, ಖಚಿತ ಮಾಹಿತಿ ಮೇರೆಗೆ ತಂಡ ಕಾರ್ಯಾಚರಣೆ ನಡೆಸಿ ವ್ಯಾನ್ ತಡೆದು ತಪಾಸಣೆ ನಡೆಸಿದಾಗ 3,70,50,000 ರೂ.ಪತ್ತೆಯಾಗಿದೆ. ನಗದು ಸಾಗಿಸಲು ಅಗತ್ಯವಾದ ದಾಖಲೆಗಳನ್ನು ಸಲ್ಲಿಸಲು ಚಾಲಕ ಮತ್ತು ಭದ್ರತಾ ಸಿಬ್ಬಂದಿ ವಿಫಲರಾಗಿದ್ದಾರೆ.
ನವಿ ಮುಂಬೈ ಮೂಲದ ಕಂಪನಿಯಿಂದ ಪಾಲ್ಘರ್ನ ವಿಕ್ರಮಗಡಕ್ಕೆ ಹಣವನ್ನು ತೆಗೆದುಕೊಂಡು ಹೋಗಲಾಗುತ್ತಿತ್ತು ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ. ನಗದನ್ನು ವಶಪಡಿಸಿಕೊಳ್ಳಲಾಗಿದ್ದು, ಹೆಚ್ಚಿನ ತನಿಖೆಗಾಗಿ ಆದಾಯ ತೆರಿಗೆ ಇಲಾಖೆ ಹಾಗೂ ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ವ್ಯಾನ್ನಲ್ಲಿದ್ದ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.