ಬೆಂಗಳೂರು, ಆ.20- ಬೀದಿ ನಾಯಿಗಳ ದಾಳಿಗೆ ಬಲಿಯಾಗಿದ್ದ ಸೀತಪ್ಪ ಅವರ ಕುಟುಂಬಕ್ಕೆ ಬಿಬಿಎಂಪಿ ಐದು ಲಕ್ಷ ರೂ.ಗಳ ಪರಿಹಾರ ನೀಡಿದೆ.ಕಳೆದ ತಿಂಗಳು ಕೊಡಿಗೇಹಳ್ಳಿಯ ಟೆಲಿಕಾಮ್ ಲೇಔಟ್ 68 ವರ್ಷದ ಸೀತಪ್ಪ ಅವರ ಮೇಲೆ ಬೀದಿ ನಾಯಿಗಳ ಹಿಂಡು ದಾಳಿ ನಡೆಸಿದ್ದವು.
ನಾಯಿ ಕಡಿತದಿಂದ ತೀವ್ರವಾಗಿ ಗಾಯಗೊಂಡಿದ್ದ ಸೀತಪ್ಪ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಆ ಸಂದರ್ಭದಲ್ಲಿ ಸೀತಪ್ಪ ಸಾವಿಗೆ ನಾಯಿ ಕಡಿತ ಕಾರಣವೇ ಎನ್ನುವುದನ್ನು ಪತ್ತೆ ಹಚ್ಚಿ ವರದಿ ಸಲ್ಲಿಸುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಇದೀಗ ವರದಿಯಲ್ಲಿ ಸೀತಪ್ಪ ಸಾವಿಗೆ ನಾಯಿ ಕಡಿತ ಕಾರಣ ಎನ್ನುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಪರಿಹಾರ ನೀಡಲಾಗಿದೆ.