ಪುಣೆ,ಆ.14-ನೋಡಲು ನಾವು ವಿಭಿನ್ನವಾಗಿದ್ದೇವೆ. ಭಿನ್ನವಾದ ಆಹಾರಗಳನ್ನು ಸೇವಿಸುತ್ತೇವೆ. ಆದರೆ ನಮ್ಮಲ್ಲಿ ಐಕ್ಯತೆ ಸುಭದ್ರವಾಗಿದೆ ಎಂದು ಆರ್‍ಎಸ್‍ಎಸ್‍ನ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಆರ್‍ಎಸ್‍ಎಸ್ ಕೇಂದ್ರ ಕಚೇರಿ ಇರುವ ನಾಗರಪುರದಲ್ಲಿ ಉತ್ತಿಷ್ಟ ಭಾರತ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಏಕತೆಯಲ್ಲಿ ಮುಂದೆ ಸಾಗುವುದನ್ನು ನಮ್ಮನ್ನು ನೋಡಿ ಜಗತ್ತು ಕಲಿಯಬೇಕಿದೆ ಎಂದಿದ್ದಾರೆ.
ಇಂದು ನಾವು ಸಮಾಜಕ್ಕಾಗಿ ಮತ್ತು ದೇಶಕ್ಕಾಗಿ ಕೆಲಸ ಮಾಡುವ ಪ್ರತಿಜ್ಞೆ ಮಾಡಬೇಕು. ದೇಶದ ಹಿರಿಮೆಯನ್ನು ಎತ್ತರಕ್ಕೆ ಕೊಂಡೊಯ್ಯಬೇಕು. ದೇಶಕ್ಕಾಗಿ ಕೆಲಸ ಮಾಡಬೇಕು, ದೇಶಕ್ಕಾಗಿ ಹಾಡಬೇಕು, ಜೀವನವನ್ನೇ ಭಾರತಕ್ಕೆ ಮುಡಿಪಾಗಿಡಬೇಕು ಎಂದು ಭಾಗವತ್ ಕರೆ ನೀಡಿದ್ದಾರೆ.